ADVERTISEMENT

ದಿನ ಭವಿಷ್ಯ: ಈ ರಾಶಿಯವರ ದಾಂಪತ್ಯ ಜೀವನ ಸುಖಮಯವಾಗಿರುವುದು

6 ಜುಲೈ 2024, ಶನಿವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಜುಲೈ 2024, 20:36 IST
Last Updated 5 ಜುಲೈ 2024, 20:36 IST
   
ಮೇಷ
  • ತರಗತಿಯಲ್ಲಿ ವಿದ್ಯಾರ್ಥಿಗಳ ಸಂಶಯವನ್ನು ಹಾಗೂ ಮನೆಯಲ್ಲಿ ಮಗುವಿನ ಸಂಶಯನ್ನು ಬಗೆ ಹರಿಸುವುದರಲ್ಲಿ ದಿನ ಕಳೆಯುವಿರಿ. ಮಾನಸಿಕ ನೋವನ್ನು ಮರೆಯಲು ಪ್ರೀತಿಪಾತ್ರರೊಂದಿಗೆ ಮಾತನಾಡಿ.
  • ವೃಷಭ
  • ಗುರು-ಹಿರಿಯರ ಅನುಗ್ರಹದಿಂದ ಹಾಗೂ ನಿಮ್ಮ ಶಾಂತಿ ಸ್ವಭಾವದಿಂದ ಹೆಚ್ಚಿನ ನೆಮ್ಮದಿ ಕಾಣುವಿರಿ. ದೈವಾನುಗ್ರಹದಿಂದ ಕಾರ್ಯಗಳು ಕೈಗೂಡಿ ನಿರೀಕ್ಷಿತ ಫಲ ಲಭಿಸಲಿದೆ.
  • ಮಿಥುನ
  • ಸಣ್ಣ ಕಾರಣಗಳಿಗೆ ಶುರುವಾದ ವಾದಗಳನ್ನು ಸಂಸಾರ ಒಡೆಯುವ ಹಂತಕ್ಕೆ ತಲುಪಲು ಬಿಡದಿರಿ. ನಿಮ್ಮ ಸ್ಪರ್ಧಾತ್ಮಕ ಮನೋಭಾವ ಹೊಸ ಸಾಹಸಕ್ಕೆ ಕೈ ಹಾಕಲು ಪ್ರೇರೇಪಿಸುವುದು.
  • ಕರ್ಕಾಟಕ
  • ಗ್ರಹಫಲಗಳು ಅನುಕೂಲಕರ ಆಗಿರುವುದರಿಂದ ವ್ಯಾಪಾರ–ಉದ್ಯಮಗಳಲ್ಲಿ ನಿರೀಕ್ಷೆಗೂ ಮೀರಿದ ಲಾಭವಾಗಲಿದೆ. ಕಷ್ಟವಾದ ಕೆಲಸಗಳನ್ನು ಸರಳೀಕರಿಸಿಕೊಳ್ಳುವ ಸರ್ವಪ್ರಯತ್ನಗಳನ್ನೂ ಮಾಡುವಿರಿ.
  • ಸಿಂಹ
  • ಇನ್ನೊಬ್ಬರ ಜೀವನದಲ್ಲಿ ನಿಮ್ಮ ಪಾತ್ರ ಮಹತ್ವದ್ದು ಎಂದು ತಿಳಿದು ಸಂತಸವಾಗುವುದು. ಪ್ರಯತ್ನಗಳು ವ್ಯರ್ಥವಲ್ಲ ಎಂಬುದು ಈ ದಿನ ತಿಳಿಯುವುದು. ಅವಿವಾಹಿತರಿಗೆ ಶುಭ ಫಲಗಳು ಲಭಿಸಲಿವೆ.
  • ಕನ್ಯಾ
  • ಸ್ನೇಹಿತರ ಸಲಹೆ ಸಹಕಾರದಿಂದ ಪ್ರಾರಂಭಿಸಿದ ವ್ಯವಹಾರದಲ್ಲಿ ಒಳ್ಳೆಯ ಫಲಿತಾಂಶ ಸಿಗಲಿದೆ. ಅಧಿಕ ಓಡಾಟಗಳಿಂದ ದೇಹಾಯಾಸ ಇದ್ದರೂ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ.
  • ತುಲಾ
  • ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನತೆ ತೋರಿಬಂದರೂ ಬುದ್ಧಿ ಬಲ ಮತ್ತು ಶ್ರದ್ಧೆಯಿಂದ ಆಲೈಸುವ ಗುಣದಿಂದಾಗಿ ಫಲಿತಾಂಶಕ್ಕೆ ಚ್ಯುತಿ ಬರುವುದಿಲ್ಲ. ದಾಂಪತ್ಯ ಜೀವನ ಸುಖಮಯವಾಗಿರುವುದು.
  • ವೃಶ್ಚಿಕ
  • ಮಳೆಗಾಲಕ್ಕೆ ಸೂಕ್ತವಾಗುವ ರೀತಿಯಲ್ಲಿ ಮನೆಯಲ್ಲಿ ಸಣ್ಣ ಪುಟ್ಟ ಮಾರ್ಪಾಡು ಕಾರ್ಯಗಳನ್ನು ನಡೆಸುವಿರಿ. ಸಹೋದರನ ವ್ಯಾಪಾರ ವಹಿವಾಟುಗಳಿಗೆ ಉಪಕಾರವಾಗುವ ಸಲಹೆಗಳನ್ನು ನೀಡಬಹುದು.
  • ಧನು
  • ನೂತನ ಯೋಜನೆ ಆರಂಭಕ್ಕೆ ಮುನ್ನ ದೀರ್ಘಾಲೋಚನೆ ಮತ್ತು ಸಲಹೆ ಪಡೆದುಕೊಳ್ಳುವುದನ್ನು ಅವಶ್ಯ. ನಂಬಿಕಸ್ಥ ಸ್ನೇಹಿತರೊಂದಿಗಷ್ಟೇ ಪ್ರಯಾಣದ ಯೋಜನೆ ರೂಪಿಸಿ. ಇಷ್ಟದ ಸಿಹಿ ಖಾದ್ಯಗಳನ್ನು ಸೇವಿಸುವ ಯೋಗವಿದೆ.
  • ಮಕರ
  • ವಿದ್ಯಾರ್ಥಿಗಳು ಶಿಕ್ಷಕರ ಹೆಸರನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುವರು. ಕ್ರೀಡಾ ಕ್ಷೇತ್ರದಲ್ಲಿ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸುವಿರಿ.
  • ಕುಂಭ
  • ಕುಟುಂಬದ ಅತಿ ಮುಖ್ಯ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದಾಗಿ ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿಯು ನೋವುಂಟು, ಆಡಲಿದೆ. ಪದವೀದರರಿಗೆ ಸನ್ಮಾನದಂತಹ ಗೌರವ ದೊರಕಲಿದೆ.
  • ಮೀನ
  • ಮಗಳ ಮದುವೆಯ ಜವಾಬ್ದಾರಿಯು ಹೆಂಡತಿಯ ತವರು ಮನೆಯವರ ಸಹಕಾರದಿಂದಾಗಿ ನೀವಂದುಕೊಂಡಷ್ಟು ಕಷ್ಟವಾಗಿ ಪರಿಣಮಿಸದು. ವಾಹನ ಖರೀದಿಗೆ ಆತುರ ಬೇಡ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.