ADVERTISEMENT

ದಿನ ಭವಿಷ್ಯ | ಈ ರಾಶಿಯವರ ಮನೆಯಲ್ಲಿ ಸಡಗರದ ವಾತಾವರಣವಿರುತ್ತದೆ

ಭಾನುವಾರ, 03 ಡಿಸೆಂಬರ್ 2023

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಡಿಸೆಂಬರ್ 2023, 19:30 IST
Last Updated 2 ಡಿಸೆಂಬರ್ 2023, 19:30 IST
   
ಮೇಷ
  • ಕೇವಲ ಯಶಸ್ಸಿನ ಮೇಲೆ ಗಮನವಹಿಸುವುದಕ್ಕಿಂತ ಪರಿಶ್ರಮದ ಮೇಲೂ ಗಮನಹರಿಸಬೇಕು. ನಿಮ್ಮ ಯಾಂತ್ರಿಕ ಬದುಕಿನಿಂದ ತುಸು ವಿರಾಮ ಪಡೆಯಲು ಸಾಧ್ಯವಾಗುತ್ತದೆ. ಮನೆ ಕಡೆಗೂ ಗಮನಹರಿಸಬೇಕು.
  • ವೃಷಭ
  • ವಾದ ಮಾಡುವ ಬದಲು ಕುಟುಂಬದ ನೆಮ್ಮದಿಗಾಗಿ ಸೋಲು ಒಪ್ಪಿಕೊಳ್ಳುವುದು ಉತ್ತಮ. ದ್ವಿಚಕ್ರ ವಾಹನಗಳ ಮಾರಾಟಗಾರರು ಭರ್ಜರಿ ವಹಿವಾಟು ನಡೆಸಲಿದ್ದಾರೆ. ಬರಹಗಾರರಿಗೆ ವಿಫುಲ ಅವಕಾಶಗಳಿವೆ.
  • ಮಿಥುನ
  • ಕಳೆದು ಹೋದ ಅತಿ ಅಮೂಲ್ಯ ವಸ್ತು ಬಹಳ ದಿನದ ನಂತರ ನಿಮ್ಮ ಕೈ ಸೇರಲಿದೆ. ಮಕ್ಕಳ ಒಡನಾಟದಿಂದ ಹೆಚ್ಚಿನ ಸಂತೃಪ್ತಿ ಸಿಗಲಿದೆ. ಸಾಂಸ್ಕೃತಿಕ ರಂಗದಲ್ಲಿ ಮೇಲ್ಮಟ್ಟದ ಸಾಧನೆ ಮಾಡಬಹುದು.
  • ಕರ್ಕಾಟಕ
  • ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದು ಕೃಷಿಕರ ಬಾಳಿನಲ್ಲಿ ಆಶಾಕಿರಣ ಮೂಡಲಿದೆ. ಅಬಕಾರಿ ಗುತ್ತಿಗೆದಾರರಿಗೆ ಉತ್ತಮ ಆದಾಯವಿರಲಿದೆ. ವಿರೋಧಿಗಳ ಉಪಟಳದ ನಡುವೆ ಬದುಕು ಕಷ್ಟ.
  • ಸಿಂಹ
  • ಪದೇಪದೇ ಎದುರಾಗುವ ಅಡ್ಡಿ–ಆತಂಕ, ಭೀತಿ, ಮನೋವ್ಯಾಕುಲಗಳಿಗೆ ಹೆದರುವ ಅವಶ್ಯಕತೆ ಇಲ್ಲ. ಪತಿ–ಪತ್ನಿಯರು ತಾಳ್ಮೆ, ಸಮಾಧಾನದಿಂ ಇರುವುದು ಉತ್ತಮ. ಆರ್ಥಿಕ ಪರಿಸ್ಥಿತಿ ಅಷ್ಟೇನು ಉತ್ತಮವಾಗಿರುವುದಿಲ್ಲ.
  • ಕನ್ಯಾ
  • ಸ್ನೇಹಿತನ ಮೇಲಿದ್ದ ಸಂಶಯ, ಅಪನಂಬಿಕೆಯ ಮನಸ್ಥಿತಿಗೆ ಪುಷ್ಟಿ ಸಿಗುವ ಸನ್ನಿವೇಶಗಳು ನಡೆಯಲಿದೆ. ರೈಲ್ವೆ ಕಾರ್ಮಿಕರಿಗೆ ವೇತನ ಹೆಚ್ಚಳವಾಗುವ ಸಾಧ್ಯತೆಗಳಿವೆ. ತರಕಾರಿ ಬೆಳೆಗಾರರಿಗೆ ದುಪ್ಪಟ್ಟು ಲಾಭವಾಗಲಿದೆ.
  • ತುಲಾ
  • ಜಾಣ್ಮೆಯಿಂದ ವ್ಯವಹರಿಸುವ ಫಲವಾಗಿ ಸಮಾಜದಲ್ಲಿ ಹೆಚ್ಚಿನ ಗೌರವ ಪಡೆಯುವಿರಿ. ವೈಯಕ್ತಿಕ ಪ್ರಗತಿ, ಅಭಿವೃದ್ಧಿಯಿಂದ ಮನಸ್ಸಿಗೆ ಸಂತೋಷವಿರಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದ ಅಗತ್ಯವಿದೆ.
  • ವೃಶ್ಚಿಕ
  • ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಜ್ಞಾನಾರ್ಜನೆಯಾಗುತ್ತದೆ. ಹವ್ಯಾಸಿ ಛಾಯಾಗ್ರಾಹಕರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಮನೆಯಲ್ಲಿ ಸಡಗರದ ವಾತಾವರಣವಿರುತ್ತದೆ.
  • ಧನು
  • ಮಕ್ಕಳ ಭವಿಷ್ಯದ ಮಾರ್ಗ ಗಮನಿಸಿ, ಪ್ರೋತ್ಸಾಹಿಸಬೇಕು. ದಾನ-ಧರ್ಮ ಪ್ರವೃತ್ತಿ ರೂಢಿಸಿಕೊಳ್ಳುವುದರಿಂದ ಕೆಲವು ಶುಭ ಫಲಗಳು ನಿಮ್ಮ ಅನುಭವಕ್ಕೆ ಬರಲಿವೆ. ಹಳೆಯ ಭೀತಿಗಳಿಂದ ಹೊರಬರಲಿದ್ದೀರಿ.
  • ಮಕರ
  • ನಿಮ್ಮ ಸಂಗಡಿಗರು ಮಾಡಿದ ತಪ್ಪಿನಿಂದ ನೀವು ಹೊಸ ನಿರ್ಧಾರ ಕೈಗೊಳ್ಳಬೇಕಾಗಲಿದೆ. ಆಸ್ತಿ ಮಾರಾಟಗಳ ವಹಿವಾಟುಗಳಲ್ಲಿ ಎಣಿಕೆಗೂ ಮೀರಿದ ಲಾಭ ಬರಲಿದೆ. ಜವಳಿ ವ್ಯಾಪಾರಿಗಳಿಗೆ ಲಾಭವಾಗಲಿದೆ.
  • ಕುಂಭ
  • ಮರದ ವ್ಯವಹಾರ ಮಾಡುವವರಿಗೆ ಉತ್ತಮ ಆರ್ಥಿಕ ಮುನ್ನಡೆ ತೋರಿಬರುತ್ತದೆ. ವೈವಾಹಿಕ ಮಾತುಕತೆಗಳಲ್ಲಿ ಹಿತಕರವಾದ ಬೆಳವಣಿಗೆ ಇರುವುದು. ಪುತ್ರರೊಡನೆ ಕೆಲಸದ ಬಗ್ಗೆ ಸಮಾಲೋಚನೆ ನಡೆಸಬೇಕು.
  • ಮೀನ
  • ಹೆಚ್ಚಿನ ಅಧ್ಯಯನಕ್ಕೆ ಮನೆಯವರಿಂದ ಉತ್ತೇಜನ ಸಿಗಲಿದೆ. ತಂದೆ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹಣ್ಣುಗಳ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ಸುಬ್ರಮಣ್ಯನ ಸೇವೆ ಮಾಡಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.