ವಾರ ಭವಿಷ್ಯ | ಆಗಸ್ಟ್ 17 ರಿಂದ 23: ಈ ರಾಶಿಯವರಿಗೆ ಸ್ಥಿರಾಸ್ತಿಯ ಯೋಗ...
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 16 ಆಗಸ್ಟ್ 2025, 23:38 IST
Last Updated 16 ಆಗಸ್ಟ್ 2025, 23:38 IST
ವಾರ ಭವಿಷ್ಯ
ಮೇಷ
ಮನಸ್ಸಿನಲ್ಲಿ ಹುಮ್ಮಸ್ಸಿನ ಜತೆಗೆ ಮುನ್ನುಗ್ಗುವ ಶಕ್ತಿ ಇರುತ್ತದೆ. ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಗುರು ಹಿರಿಯರ ಸಹಕಾರ ನಿಮಗೆ ದೊರೆಯುತ್ತದೆ. ಸಂಸಾರದಲ್ಲಿ ಜಾಣ್ಮೆಯಿಂದ ಮಾತನಾಡಿ ಕೆಲಸ ಸಾಧಿಸುವಿರಿ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಬೆಂಕಿಯೊಂದಿಗೆ ಕೆಲಸ ಮಾಡುವವರು ಈಗ ಹೆಚ್ಚು ಎಚ್ಚರದಿಂದ ಮಾಡಿರಿ. ಸಂಬಂಧಿಕರ ನಡುವಿನ ಹಣಕಾಸಿನ ವ್ಯವಹಾರಗಳು ನಷ್ಟಕ್ಕೆ ಕಾರಣವಾಗುತ್ತದೆ. ರಾಜಕಾರಣಿಗಳಿಗೆ ಸ್ವಲ್ಪ ಹಿನ್ನಡೆ ಇರುತ್ತದೆ.
ವೃಷಭ
ವಾರದ ಆರಂಭ ಬಹಳ ಆನಂದದಾಯಕವಾಗಿರುತ್ತದೆ. ತಾಯಿಯ ಜತೆಗಿನ ಸಂಬಂಧ ಬಹಳ ಸುಧಾರಿಸುತ್ತದೆ. ಈಗ ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ಬುದ್ಧಿವಂತಿಕೆಯಿಂದ ಎಲ್ಲರ ಸಹಕಾರ ಪಡೆದು ಮುನ್ನಡೆಯುವಿರಿ. ಭೂಮಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಇರುತ್ತದೆ. ಸೈನ್ಯದಲ್ಲಿ ಬಡ್ತಿಗಾಗಿ ಪರೀಕ್ಷೆ ತೆಗೆದುಕೊಂಡವರಿಗೆ ಶುಭ ವಾರ್ತೆ ಲಭಿಸುತ್ತದೆ. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಇರುತ್ತದೆ. ಸಂಗಾತಿಗೆ ಈಗ ಆಸ್ತಿ ದೊರೆಯುವ ಯೋಗವಿದೆ. ಕೆಲವರಿಗೆ ಅನಿರೀಕ್ಷಿತ ಧನ ಲಾಭವಿರುತ್ತದೆ.
ಮಿಥುನ
ಬುದ್ಧಿವಂತಿಕೆಯಿಂದ ಮಾತನಾಡಿ ಹಣದ ಒಳಹರಿವನ್ನು ಹೆಚ್ಚು ಮಾಡಿಕೊಳ್ಳುವಿರಿ. ಹಿರಿಯರು ನಿಮ್ಮ ಉತ್ತಮ ಕೆಲಸಗಳಿಗೆ ಸಹಕಾರ ನೀಡುವರು. ಸ್ಥಿರಾಸ್ತಿಯನ್ನು ಹೆಚ್ಚು ಮಾಡಿಕೊಳ್ಳುವ ಯೋಗವಿದೆ. ಕೃಷಿಯಿಂದ ಹೆಚ್ಚು ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಹರಿತವಾದ ಆಯುಧಗಳ ಜತೆ ಕೆಲಸ ಮಾಡುವವರು ಎಚ್ಚರದಿಂದಿರಿ. ಸಂಗಾತಿ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ವೃತ್ತಿಯಲ್ಲಿ ಅಡೆತಡೆಗಳಿರುತ್ತವೆ. ರಾಜಕೀಯ ಪ್ರವೇಶ ಮಾಡಬೇಕೆನ್ನುವವರಿಗೆ ಅವಕಾಶಗಳು ದೊರೆಯುತ್ತವೆ.
ಕರ್ಕಾಟಕ
ಬುದ್ಧಿವಂತಿಕೆ ನಿಮ್ಮಲ್ಲಿ ಮೈದುಂಬಿರುತ್ತದೆ. ಆದಾಯವು ಸಾಮಾನ್ಯ ಮಟ್ಟದಲ್ಲಿರುತ್ತದೆ. ಸರ್ಕಾರದಿಂದ ಆದಾಯ ಹೆಚ್ಚುತ್ತದೆ. ಧಾರ್ಮಿಕ ಕೆಲಸಗಳನ್ನು ಮಾಡುವವರ ಆದಾಯ ಕೂಡ ಹೆಚ್ಚುತ್ತದೆ. ಒಡಹುಟ್ಟಿದವರಿಂದ ಪ್ರತಿರೋಧ ಗಳು ಎದುರಾಗುವ ಸಾಧ್ಯತೆಗಳಿವೆ.ಸಂಗಾತಿಯ ಜೊತೆ ಮಾಡಿದ ಹಣಕಾಸಿನ ವ್ಯವಹಾರಗಳಲ್ಲಿ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕ್ರೀಡಾಪಟು ಗಳಿಗೆ ಉತ್ತಮಪ್ರೋತ್ಸಾಹ ಸಿಗುತ್ತದೆ. ಈಗ ಅತಿ ಯಾಗಿ ಸಾಲ ಮಾಡುವುದು ಬೇಡ. ಸಂಗಾತಿ ಯಿಂದ ಅನುಕೂಲಗಳ ಹೆಚ್ಚುತ್ತವೆ. ವಿದೇಶಿ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತ ಲಾಭವಿರುತ್ತದೆ. ಹಿರಿಯರ ಜತೆ ಮಾಡಿದ ಕೃಷಿ ಕೆಲಸಗಳಲ್ಲಿ ಲಾಭವನ್ನು ಕಾಣಬಹುದು.
ಸಿಂಹ
ವಾರದ ಆರಂಭದಲ್ಲಿ ನಿಮ್ಮ ಮಾತೇ ನಡೆಯಬೇಕೆಂಬ ಹಠ ಇರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಈ ವಾರ ಹೆಚ್ಚು ಚಟುವಟಿಕೆಯಿಂದ ಇರುವಿರಿ. ಸ್ಥಿರಾಸ್ತಿ ಮಾಡಲು ಸೂಕ್ತ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ಸಿಗುತ್ತದೆ. ಕಾಲು ನೋವು ಕೆಲವರನ್ನು ಕಾಡಬಹುದು. ವಿವಾಹಿತರಿಗೆ ವಿದೇಶದಲ್ಲಿರುವ ತಮ್ಮಸಂಗಾತಿಯನ್ನು ಹೋಗಿ ಸೇರಿಕೊಳ್ಳಲು ಅವಕಾಶ ದೊರೆಯುತ್ತದೆ. ರಾಜಕಾರಣಿಗಳಿಗೆ ಕೆಲವೊಂದು ವಿಚಾರಗಳಲ್ಲಿ ಹಿನ್ನಡೆ ಆಗುವ ಸಂದರ್ಭವಿದೆ. ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿ ಮಾರುವವರಿಗೆ ಲಾಭವಿದೆ. ವೃತ್ತಿಯಲ್ಲಿ ಸ್ವಲ್ಪ ಅನುಕೂಲ ಹೆಚ್ಚುತ್ತದೆ.
ಕನ್ಯಾ
ವಾರದ ಆರಂಭದಲ್ಲಿ ನಿಮ್ಮಲ್ಲಿ ಸ್ವಲ್ಪ ಆಕ್ರೋಶ ತುಂಬಿರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಅತ್ಯಂತ ಚುರುಕಾದ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶಗಳಿರುವುದಿಲ್ಲ. ವಿದೇಶಿ ಸಂಸ್ಥೆಗಳ ಮೇಲೆ ಹೂಡಿದ್ದ ಬಂಡವಾಳಗಳು ಈಗ ಹಿಂಜರಿತ ಕಾಣಬಹುದು. ಸಂಗಾತಿಯ ಒರಟು ಉತ್ತರಗಳು ಸ್ವಲ್ಪ ಸಮಸ್ಯೆಯನ್ನು ತರಬಹುದು. ಕೃಷಿಯಿಂದ ಅನಿರೀಕ್ಷಿತ ಲಾಭವನ್ನು ನಿರೀಕ್ಷೆ ಮಾಡಬಹುದು. ತಾಯಿಯಿಂದ ಹೆಚ್ಚಿನ ಸಹಕಾರ ಸಿಗುತ್ತದೆ.
ತುಲಾ
ನಿಮ್ಮ ಸಾಮಾಜಿಕ ಗೌರವವನ್ನು ಉಳಿಸಿಕೊಳ್ಳಲು ಸಾಕಷ್ಟು ಎಚ್ಚರಿಕೆಯ ಹೆಜ್ಜೆಯನ್ನು ಇಡುವಿರಿ. ಆದಾಯ ಮತ್ತು ಖರ್ಚು ಸಮನಾಗಿರಬಹುದು. ನಿಮ್ಮ ನಡವಳಿಕೆಯು ಹೆಚ್ಚು ವ್ಯಾವಹಾರಿಕತೆಯಿಂದ ಕೂಡಿರುತ್ತದೆ. ಆಸ್ತಿ ಖರೀದಿಯ ವಿಚಾರದಲ್ಲಿ ನಷ್ಟವಾಗುವ ಸಂದರ್ಭವಿದೆ. ವಿದೇಶದಲ್ಲಿ ಓದುತ್ತಿರುವವರಿಗೆ ಉತ್ತಮ ಫಲಿತಾಂಶ ಲಭಿಸುತ್ತದೆ. ಸಂಗಾತಿಯ ಕಠಿಣ ಮಾತುಗಳು ಸ್ವಲ್ಪ ಚಿಂತೆಯುಂಟು ಮಾಡಬಹುದು. ತಾಯಿಯ ಜತೆ ಕಾವೇರಿದ ವಾತಾವರಣವಿರುತ್ತದೆ.
ವೃಶ್ಚಿಕ
ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಮೂಡಿ, ಬಹುಮಾನ ಪಡೆಯುವ ಯೋಗವಿದೆ. ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ನಿಮಗೆ ಸಾರ್ವಜನಿಕರ ಸಹಕಾರ ಕಡಿಮೆಯಾಗಬಹುದು. ವಿದೇಶದಲ್ಲಿರುವವರು ಸ್ಥಿರಾಸ್ತಿಯನ್ನು ಮಾಡಿಕೊಳ್ಳುವ ಅವಕಾಶವಿದೆ. ಮಕ್ಕಳಿಂದ ನಿರೀಕ್ಷಿತ ಸಹಕಾರ ದೊರೆಯುವುದಿಲ್ಲ. ಕೃಷಿಯಿಂದ ಆದಾಯ ಕಡಿಮೆ ಎನಿಸಿದರೂ, ಇರುವ ಫಸಲಿಗೆ ಹೆಚ್ಚು ಬೆಲೆ ದೊರೆಯುತ್ತದೆ. ಪ್ರೀತಿ, ಪ್ರೇಮದ ವಿಷಯದಲ್ಲಿ ಯಶಸ್ಸು ಸಿಗುತ್ತದೆ. ಹಣಕಾಸಿನ ವ್ಯವಹಾರ ಮಾಡುತ್ತಿರುವವರಿಗೆ ನಿರೀಕ್ಷಿತ ಆದಾಯ ಇರುವುದಿಲ್ಲ.
ಧನು
ಬಹಳ ಸುಸಂಸ್ಕೃತ ನಡವಳಿಕೆಯನ್ನು ಪ್ರದರ್ಶನ ಮಾಡುವಿರಿ. ಆದಾಯವು ಕಡಿಮೆ ಇರುತ್ತದೆ. ಭಾಷಣಕಾರರು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಬಂಧುಗಳಿಂದ ವಿರೋಧ ಹೆಚ್ಚಾಗಬಹುದು. ಕೃಷಿಭೂಮಿಯನ್ನು ಕೊಳ್ಳುವ ಯೋಗವಿದೆ. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಕೆಲವು ಕ್ರೀಡಾಪಟುಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಶೀತಬಾಧೆ ಕೆಲವರನ್ನು ಬಾಧಿಸಬಹುದು. ಸೈನ್ಯದಲ್ಲಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇದೆ.
ಮಕರ
ವಾರದ ಆರಂಭದಲ್ಲಿ ಸ್ವಲ್ಪ ಆಲಸಿತನ ಕಂಡರೂ, ನಂತರ ಸರಿಯಾಗುತ್ತದೆ. ವಿದೇಶಿ ಮೂಲಗಳಿಂದ ಹಣದ ಒಳಹರಿವನ್ನು ಹೆಚ್ಚಿಸಿಕೊಳ್ಳಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಶತ್ರುಗಳನ್ನು ಯಾರೆಂದು ಪತ್ತೆ ಹಚ್ಚಿ ಸರಿಯಾಗಿ ಮಟ್ಟ ಹಾಕುವಿರಿ. ಹಿರಿಯರ ಆಸ್ತಿಯನ್ನು ಪಡೆದುಕೊಳ್ಳಬಹುದು. ಕಟ್ಟಡ ನಿರ್ಮಾಣಕಾರರ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಮಹಿಳೆಯರಿಗೆ ಸ್ತ್ರೀ ಸಂಬಂಧಿ ದೋಷಗಳು ಕಾಡಬಹುದು.
ಕುಂಭ
ಯುವಕರಲ್ಲಿ ಆಕ್ರೋಶ ಹೆಚ್ಚಾಗಿರುತ್ತದೆ. ಆದಾಯವು ಕಡಿಮೆಯಿರುತ್ತದೆ. ಆಸ್ತಿ ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಬಹಳ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ರಕ್ತ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಮಹಿಳೆಯರ ಜೊತೆಯ ನಡೆಸುವ ಹಣಕಾಸಿನ ವ್ಯವಹಾರಗಳು ನಷ್ಟಕ್ಕೆ ಕಾರಣವಾಗುತ್ತವೆ. ಸಂಗಾತಿಯಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಅನುಕೂಲವಾಗುತ್ತದೆ. ಕೃಷಿಯಿಂದ ನಿರೀಕ್ಷಿತ ಮಟ್ಟದ ಲಾಭವಿರುವುದಿಲ್ಲ. ಆಭರಣ ವ್ಯಾಪಾರಿಗಳಿಗೆ ಲಾಭವಿರುತ್ತದೆ.
ಮೀನ
ಹೆಚ್ಚು ಶ್ರಮಪಟ್ಟು ಕೆಲಸ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬರಬಹುದು. ಆದಾಯವು ತಕ್ಕಮಟ್ಟಿಗೆ ಇರುತ್ತದೆ. ಸಂಗಾತಿಯ ಸಹಾಯದೊಂದಿಗೆ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ನಿಮ್ಮ ಕೆಲಸ ಕಾರ್ಯಗಳಿಗೆ ತಾಯಿಯ ಸಹಕಾರ ಸಂಪೂರ್ಣವಾಗಿ ದೊರೆಯುತ್ತದೆ. ಆಸ್ತಿ ವ್ಯವಹಾರ ಮಾಡುವವರ ಆದಾಯ ಸಾಕಷ್ಟು ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಕಣ್ಣಿನಲ್ಲಿ ತೊಂದರೆ ಅಥವಾ ಶ್ವಾಸಕೋಶದ ತೊಂದರೆ ಇರುವವರು ಎಚ್ಚರ ವಹಿಸಿರಿ. ಸಂಗಾತಿಯ ಧೋರಣೆಗಳು ನಿಮಗೆ ಹಿಡಿಸದಿರಬಹುದು.