ADVERTISEMENT

ವಾರ ಭವಿಷ್ಯ | 2025ರ ಮೇ 18ರಿಂದ 24: ಈ ರಾಶಿಯವರ ನಿರೀಕ್ಷೆಯಷ್ಟು ಆದಾಯವಿರುತ್ತದೆ

ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 17 ಮೇ 2025, 23:30 IST
Last Updated 17 ಮೇ 2025, 23:30 IST
<div class="paragraphs"><p>ವಾರ ಭವಿಷ್ಯ</p></div>

ವಾರ ಭವಿಷ್ಯ

   
ಮೇಷ
  • ನಿಮ್ಮ ವೆಚ್ಚವನ್ನು ತೂಗಿಸುವಷ್ಟು ಆದಾಯವಿರುತ್ತದೆ. ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳು ಸಿಗುತ್ತವೆ. ಗುರುಹಿರಿಯರನ್ನು ಗೌರವಿಸುವಿರಿ. ಇರುವ ಆಸ್ತಿಯನ್ನು ಅಭಿವೃದ್ಧಿಪಡಿಸಲು ಯೋಚಿಸುವಿರಿ. ಮಕ್ಕಳಿಗಾಗಿ ನೀವು ಈಗ ಹಣ ಖರ್ಚು ಮಾಡಬೇಕಾಗುತ್ತದೆ. ಧರ್ಮಕಾರ್ಯಗಳಿಂದ ಸ್ವಲ್ಪ ಆದಾಯವಿರುತ್ತದೆ. ಸಂಗಾತಿಯ ಒಡವೆ, ವಸ್ತುಗಳಿಗಾಗಿ ಸಾಕಷ್ಟು ಹಣ ಖರ್ಚಾಗುತ್ತದೆ.
  • ವೃಷಭ
  • ನಿಮ್ಮದೇ ಆದ ವರ್ಚಸ್ಸನ್ನು ಹೊಂದಲು ಪ್ರಯತ್ನ ಪಡುವಿರಿ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಬಂಧುಗಳಿಂದ ಸಿಗಬೇಕಾದ ಸಹಕಾರ ಸಿಗುವುದಿಲ್ಲ. ಭೂಮಿ ವಹಿವಾಟು ನಡೆಸುವ ಮಧ್ಯವರ್ತಿಗಳಿಗೆ ಉತ್ತಮ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಪಟ್ಟು ಓದಿದಲ್ಲಿ ಮಾತ್ರ ಉತ್ತಮ ಫಲಿತಾಂಶವಿರುತ್ತದೆ. ಸ್ತ್ರೀರೋಗ ತಜ್ಞರಿಗೆ ಹೆಚ್ಚು ಬೇಡಿಕೆ ಇರುತ್ತದೆ. ಸಂಗಾತಿಯಿಂದ ಸಹಕಾರ ಕಡಿಮೆಯಾಗಬಹುದು.
  • ಮಿಥುನ
  • ಸಮಾಜದಲ್ಲಿ ಗೌರವ ಲಭಿಸುತ್ತದೆ. ಆದಾಯವು ಬಹಳ ಕಡಿಮೆ ಇರುತ್ತದೆ. ಬಂಧುಗಳು ಸಹಾಯ ಮಾಡುವ ರೀತಿಯಲ್ಲಿ ನಟಿಸಿ ನಿಮ್ಮಿಂದ ಖರ್ಚು ಮಾಡಿಸುತ್ತಾರೆ. ವೃತ್ತಿಯಲ್ಲಿ ಹೊಸ ಸ್ಥಾನ ಸಿಗುವ ಸಾಧ್ಯತೆಯಿದೆ. ಫ್ಯಾಶನ್ ಡಿಸೈನಿಂಗ್ ಓದುತ್ತಿರುವವರಿಗೆ ಉತ್ತಮ ಫಲಿತಾಂಶವಿದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಒದಗಿರಬಹುದು. ನಿಮ್ಮ ತಾಯಿಯ ನಡುವೆ ಮುಸುಕಿನ ಗುದ್ದಾಟವಿರುತ್ತದೆ. 
  • ಕರ್ಕಾಟಕ
  • ನಿರ್ಧಾರಗಳಲ್ಲಿ ದೃಢತೆ ಇರುವುದಿಲ್ಲ. ಸರ್ಕಾರದಿಂದ ನಿಮಗೆ ಸಾಕಷ್ಟು ಆದಾಯವಿರುತ್ತದೆ. ಕೃಷಿಯಿಂದ ಅಷ್ಟು ಲಾಭವಿರುವುದಿಲ್ಲ. ಉದರ ಸಂಬಂಧಿ ದೋಷಗಳು ಕೆಲವರನ್ನು ಈಗ ಕಾಡಬಹುದು. ಪ್ರೀತಿ, ಪ್ರೇಮದಲ್ಲಿ ಯಶಸ್ಸು ದೊರೆಯುತ್ತದೆ. ಹಿರಿಯರ ನಡುವೆ ಹೆಚ್ಚು ಅನುಬಂಧ ಬೆಳೆಯುತ್ತದೆ. ವೃತ್ತಿಯಲ್ಲಿ ಬಹಳ ಬುದ್ಧಿವಂತಿಕೆಯಿಂದ ನಡೆದುಕೊಂಡು ಉನ್ನತ ಸ್ಥಾನ ಪಡೆಯುವಿರಿ.
  • ಸಿಂಹ
  • ಹೆಚ್ಚು ಹುಮ್ಮಸ್ಸಿನಿಂದ ಕೆಲಸ ಮಾಡುವಿರಿ. ಆದಾಯವು ಕಡಿಮೆ ಇರುತ್ತದೆ. ಕೃಷಿಯಲ್ಲಿ ಲಾಭಕ್ಕಿಂತ ನಷ್ಟವಾಗಬಹುದು. ಹಣಕಾಸಿನ ಸಂಸ್ಥೆಯನ್ನು ನಡೆಸುತ್ತಿರುವವರಿಗೆ ಸ್ವಲ್ಪ ಲಾಭವಿರುತ್ತದೆ. ಶೀತ ಅಥವಾ ತಲೆನೋವು ಕೆಲವರಲ್ಲಿ ಕಾಣಿಸಬಹುದು. ಸಂಗಾತಿಯ ವ್ಯವಹಾರಗಳಿಂದ ಕಿರಿಕಿರಿಯಾಗಬಹುದು. ಗಣಿಗಾರಿಕೆ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಹಿರಿಯರಿಂದ ವ್ಯಾಪಾರಕ್ಕೆ ಬಂಡವಾಳ ಸಿಗುತ್ತದೆ.
  • ಕನ್ಯಾ
  • ಯಾವುದೇ ಕೆಲಸಗಳಲ್ಲೂ ಶ್ರದ್ಧೆ ಇರುವುದಿಲ್ಲ. ಆದಾಯವು ಮಧ್ಯಮಗತಿಯಲ್ಲಿ ಇರುತ್ತದೆ. ಬಂಧುಗಳಿಂದ ನಿರೀಕ್ಷಿತ ಸಹಕಾರ ದೊರೆಯುತ್ತದೆ. ಈಗ ಸ್ಥಿರಾಸ್ತಿ ಮಾಡಿಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಮಕ್ಕಳ ಬಗ್ಗೆ ಒಳ್ಳೆಯ ವಾರ್ತೆಗಳನ್ನು ಕೇಳುವಿರಿ. ನಿಮ್ಮ ಶತ್ರುಗಳನ್ನು ಮಿತ್ರರನ್ನಾಗಿ ಮಾಡಿಕೊಳ್ಳುವ ಅವಕಾಶ ಒದಗಿ ಬರುತ್ತದೆ.
  • ತುಲಾ
  • ಬಹಳ ಆಲಸೀತನ ನಿಮ್ಮಲ್ಲಿ ಇರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಆಸ್ತಿಯನ್ನು ಮಾಡಿಕೊಳ್ಳುವ ಯೋಗ ನಿಮಗಿದೆ. ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಸಂಗಾತಿಯ ಜತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ಪ್ರಗತಿ ಇರುತ್ತದೆ. ವೃತ್ತಿಯಲ್ಲಿ ನಿರೀಕ್ಷಿತ ಪ್ರಗತಿ ಇರುವುದಿಲ್ಲ.
  • ವೃಶ್ಚಿಕ
  • ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಸಹೋದರಿಯರ ಸಹಕಾರ ದೊರೆಯುತ್ತದೆ. ನವೀನ ರೀತಿಯ ಕೃಷಿಯನ್ನು ಮಾಡಲು ಉತ್ಸುಕರಾಗುವಿರಿ. ಏರೋಸ್ಪೇಸ್ ಎಂಜಿನಿಯರಿಂಗ್ ಮಾಡುತ್ತಿರುವವರಿಗೆ ಪ್ರಗತಿ ಇದೆ. ಗಣಿಗಾರಿಕೆ ಮಾಡುವವರಿಗೆ ತೊಡಕುಗಳು ಎದುರಾಗಬಹುದು. ಸಂಗಾತಿಯು ಹೆಚ್ಚು ಜವಾಬ್ದಾರಿ ತೆಗೆದುಕೊಂಡು ಕುಟುಂಬವನ್ನು ನಡೆಸುವರು.
  • ಧನು
  • ನಿಮ್ಮ ವಿರುದ್ಧ ಕೆಲಸ ಮಾಡುತ್ತಿದ್ದ ಶತ್ರುಗಳು ಈಗ ನಿಮ್ಮ ಪರವಾಗಿ ಕೆಲಸ ಮಾಡುವರು. ಆಭರಣ ವ್ಯಾಪಾರಿಗಳಿಗೆ ವಿದೇಶದಲ್ಲಿ ವ್ಯವಹಾರ ವಿಸ್ತರಿಸುವ ಯೋಗವಿದೆ. ಕಣ್ಣಿನ ದೋಷವಿರುವವರು ಹೆಚ್ಚು ಎಚ್ಚರವಹಿಸಿ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಒದಗುವ ಯೋಗವಿದೆ. ಕೃಷಿ ಸಂಬಂಧಿ ಹೈನುಗಾರಿಕೆ ನಿಮಗೆ ಲಾಭ ತರುತ್ತದೆ. ತಲೆನೋವು ಇರುವವರು ಎಚ್ಚರ ವಹಿಸಿ.
  • ಮಕರ
  • ವಾರದ ಆರಂಭ ಸ್ವಲ್ಪ ಆನಂದದಾಯಕವಾಗಿರುತ್ತದೆ. ಆದಾಯದಲ್ಲಿ ಚೇತರಿಕೆ ಇರುತ್ತದೆ. ವಿದೇಶಕ್ಕೆ ತೆರಳಬೇಕೆನ್ನುವವರಿಗೆ ಪರಿಚಿತರು ಸಾಕಷ್ಟು ಸಹಾಯ ಮಾಡುವರು. ವ್ಯಾಪಾರ ವ್ಯವಹಾರಗಳಲ್ಲಿ ಸ್ವಲ್ಪ ಪ್ರಗತಿಯನ್ನು ಕಾಣಬಹುದು. ಕೆಲವರಿಗೆ ಪಿತ್ತವಿಕಾರಗಳಾಗಬಹುದು. ಹೈನುಗಾರಿಕೆಯಲ್ಲಿ ಸಂಶೋಧನೆ ಮಾಡುವವರಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ. ಸರ್ಕಾರಿ ಕೆಲಸಗಳಲ್ಲಿ ನಿಧಾನ ಗತಿ ಇದ್ದರೂ ಕೆಲಸಗಳಾಗುತ್ತವೆ. ಧಾರ್ಮಿಕ ಕಾರ್ಯಗಳಿಂದ ಸಾಕಷ್ಟು ಜನಪ್ರಿಯರಾಗುವಿರಿ.
  • ಕುಂಭ
  • ಹಿರಿಯರು ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವರು. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ವಿದೇಶಿ ವ್ಯವಹಾರಗಳಿಂದ ಹೆಚ್ಚು ಆದಾಯವನ್ನು ಕಾಣಬಹುದು. ಸ್ನೇಹಿತರೊಡನೆ ಮಾಡುವ ವ್ಯವಹಾರಗಳು ಸ್ವಲ್ಪ ಲಾಭ ಕೊಡುತ್ತದೆ. ಸರ್ಕಾರಿ ಸಂಸ್ಥೆಗಳಿಂದ ಆಸ್ತಿ ಪಡೆಯುವ ಯೋಗವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಯಶಸ್ಸು ದೊರೆಯುತ್ತದೆ. ಹರಿತವಾದ ಆಯುಧಗಳನ್ನು ಬಳಸುವಾಗ ಎಚ್ಚರವಿರಲಿ.
  • ಮೀನ
  • ನೀವು ನಿಮ್ಮದೇ ಆಲೋಚನೆಯಲ್ಲಿ ಮುಳುಗಿರುವಿರಿ. ಬುದ್ಧಿವಂತಿಕೆಯಿಂದ ಈಗ ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ. ಬಣ್ಣದ ಮಾತನಾಡಿ ಜನರನ್ನು ನಂಬಿಸುವಿರಿ. ಬಂಧುಗಳ ಸಹಕಾರದಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ ಮಾಡಿಕೊಳ್ಳುವಿರಿ. ವಿದೇಶಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭವಿರುತ್ತದೆ.  ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳು ನಿಮ್ಮನ್ನು ಸ್ವಲ್ಪ ಹೆಚ್ಚು ಗಮನಿಸುವರು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.