ADVERTISEMENT

ವಾರ ಭವಿಷ್ಯ | ನವೆಂಬರ್ 16ರಿಂದ 22ರವರೆಗೆ: ನಿಮ್ಮ ಪ್ರಯತ್ನಗಳಿಗೆ ಫಲ ದೊರೆಯಲಿದೆ

ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 15 ನವೆಂಬರ್ 2025, 23:30 IST
Last Updated 15 ನವೆಂಬರ್ 2025, 23:30 IST
<div class="paragraphs"><p>ವಾರ ಭವಿಷ್ಯ</p><p></p></div>

ವಾರ ಭವಿಷ್ಯ

   
ಮೇಷ
  • ವಾರದ ಆರಂಭದಲ್ಲಿ ಸ್ವಲ್ಪ ಆಲಸಿತನವಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಉದ್ಯಮಿಗಳು ನೂತನ ಯಂತ್ರೋಪಕರಣಗಳನ್ನು ಖರೀದಿ ಮಾಡುವ ಎಲ್ಲಾ ಲಕ್ಷಣಗಳಿವೆ. ಆಸ್ತಿ ಖರೀದಿ ಮಾಡುವ ಯೋಗವಿದೆ. ಭೂಮಿ ಖರೀದಿ ವಿಚಾರದಲ್ಲಿ ಅತಿಯಾದ ಆತುರಬೇಡ. ಉದ್ಯೋಗದಲ್ಲಿ ಎಚ್ಚರಿಕೆಯ ಹೆಜ್ಜೆಯಿಟ್ಟಲ್ಲಿ ಪ್ರಗತಿಯನ್ನು ಕಾಣಬಹುದು.
  • ವೃಷಭ
  • ಆರಂಭದಲ್ಲಿ ನಿಮ್ಮಲ್ಲೇ ಸಾಕಷ್ಟು ದ್ವಂದ್ವವಿರುತ್ತದೆ. ಮಧ್ಯಮಗತಿಯ ಆದಾಯವಿರುತ್ತದೆ. ಹಣ್ಣು–ತರಕಾರಿ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ವೃದ್ಧಿ ಇರುತ್ತದೆ. ಸಂಗಾತಿ ಕಡೆಯ ಶುಭಕಾರ್ಯಗಳಿಗೆ ಹೋಗಿ ಬರುವ ಸಾಧ್ಯತೆಗಳಿವೆ. ಕೃಷಿಯುತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರಕುತ್ತದೆ. ಕೃಷಿಕರಿಗೆ ಉತ್ತಮ ಸಾಲ ಸೌಲಭ್ಯಗಳು ಒದಗಿಬರುತ್ತವೆ. ಬಹಳ ದಿನಗಳಿಂದ ಬಯಸುತ್ತಿದ್ದ ಸರ್ಕಾರಿ ಸಾಲ ಈಗ ದೊರೆಯುತ್ತದೆ.
  • ಮಿಥುನ
  • ನಿಮ್ಮಲ್ಲಿ ಮಡುಗಟ್ಟಿದ ಆಕ್ರೋಶವಿರುತ್ತದೆ. ಸ್ವಲ್ಪ ತಾಳ್ಮೆಯಿಂದ ಇರುವುದು ಒಳ್ಳೆಯದು. ನಿತ್ಯ ಕೆಲಸಗಳಲ್ಲಿ ಹೊಸ ಉತ್ಸಾಹ ಮೂಡಿ ಕೆಲಸ ಕಾರ್ಯಗಳಲ್ಲಿ ಚುರುಕುತನ ತೋರುವಿರಿ. ವಿಶ್ವಾಸಿಗಳ ಸಹಕಾರದಿಂದ ವ್ಯಾಪಾರದಲ್ಲಿ ಮುನ್ನಡೆಯನ್ನು ಕಾಣಬಹುದು. ಹೈನುಗಾರಿಕೆಯನ್ನು ನಡೆಸುವವರು ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವಿರುತ್ತದೆ. ಮನೆಯಲ್ಲಿ ಅಶಾಂತಿ ಮೂಡಬಹುದು.
  • ಕರ್ಕಾಟಕ
  • ಸಮಾಜದಿಂದ ಸಾಕಷ್ಟು ಗೌರವ ಸಿಗುತ್ತದೆ. ಆದಾಯವು ಕಡಿಮೆ ಇರುತ್ತದೆ. ಈಗ ಧಾರ್ಮಿಕ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ತೋರುವಿರಿ. ತಾಯಿಯಿಂದ ಸ್ವಲ್ಪ ಸಹಕಾರ ದೊರೆಯುತ್ತದೆ. ಸಹೋದರರಿಗೆ ಸಾಕಷ್ಟು ಸಹಾಯ ಮಾಡುವಿರಿ. ಆಸ್ತಿ ಮಾಡಿಕೊಳ್ಳುವ ಯೋಗವಿದೆ. ಕಾನೂನು ವ್ಯವಹಾರಗಳಲ್ಲಿ ಸೂಕ್ತ ಮಾರ್ಗದರ್ಶನ ಪಡೆದು ವ್ಯವಹರಿಸುವುದು ಒಳ್ಳೆಯದು. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಬಹುದು.
  • ಸಿಂಹ
  • ವಾರದ ಆರಂಭದಲ್ಲಿ ಯಾವುದೇ ವಿಷಯದಲ್ಲಿ ಸೂಕ್ತ ನಿರ್ಧಾರಗಳಿಲ್ಲದೆ ಪೇಚಾಡುವಿರಿ. ಆದಾಯವು ಸ್ವಲ್ಪ ಏರಿಕೆಯನ್ನು ಕಾಣುತ್ತದೆ. ಹಿರಿಯ ಬಂಧುಗಳು ನಿಮಗೆ ಸಹಕಾರ ನೀಡುವವರು. ನೌಕರ ವರ್ಗದವರ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆತು ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ಆಸ್ತಿ ಮಾಡುವ ವಿಚಾರದಲ್ಲಿ ಆತುರ ಬೇಡ.
  • ಕನ್ಯಾ
  • ವಾರದ ಆರಂಭದಲ್ಲಿ ಸಂತೋಷದ ಸುದ್ದಿ ಸಿಗುತ್ತದೆ. ಆದಾಯ ಅಗತ್ಯಕ್ಕೆ ಹತ್ತಿರವಿರುತ್ತದೆ. ನಿಮ್ಮ ನಡವಳಿಕೆಯಿಂದ ಬಂಧುಗಳನ್ನು ಎದುರು ಹಾಕಿಕೊಳ್ಳುವಿರಿ. ನಿಮ್ಮ ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನ ಕೊಡಿ. ಮನೆ ಬದಲಾವಣೆಯ ವಿಚಾರ ಮುನ್ನೆಲೆಗೆ ಬರುತ್ತದೆ. ಕ್ರೀಡಾಪಟುಗಳಿಗೆ ಉತ್ತೇಜನ ದೊರೆತು ಸಾಧನೆ ಮಾಡುವ ಸಂದರ್ಭವಿದೆ.
  • ತುಲಾ
  • ನಿಮ್ಮ ಕೆಲವು ಯೋಜನೆಗಳನ್ನು ಪೂರೈಸಲು ಬೇಕಾದ ಅನುಕೂಲತೆಗಳು ಲಭಿಸುತ್ತವೆ. ಆದಾಯವು ಕಡಿಮೆ ಇದ್ದರೂ ಅದು ತಲುಪುವುದು ನಿಧಾನವಾಗಬಹುದು. ವಿದೇಶದಲ್ಲಿ ಶಿಕ್ಷಣ ಪಡೆಯಲು ಇಚ್ಛಿಸುತ್ತಿರುವವರಿಗೆ ಅವಕಾಶ ದೊರೆಯುತ್ತದೆ. ವಿದೇಶದಿಂದ ಮಕ್ಕಳ ಅಥವಾ ಬಂಧುಗಳ ಆಗಮನವನ್ನು ನಿರೀಕ್ಷಿಸುತ್ತಿರುವಿರಿ. ಅಧ್ಯಾಪಕರಿಗೆ ಹೆಚ್ಚಿನ ಆದಾಯ ಬರುವ ಸಾಧ್ಯತೆ ಇದೆ.
  • ವೃಶ್ಚಿಕ
  • ನಿಮ್ಮ ನಿರ್ಧಾರಗಳ ಬಗ್ಗೆ ನಿಮಗೆ ನಂಬಿಕೆ ಇರುವುದಿಲ್ಲ. ಆದಾಯವು ಕಡಿಮೆ ಇದ್ದು ಹಿರಿಯರಿಂದ ಆರ್ಥಿಕ ಸಹಾಯವನ್ನು ಪಡೆದುಕೊಳ್ಳಬಹುದು. ಹೊಸ ಗೃಹಾಲಂಕಾರ ವಸ್ತುಗಳನ್ನು ಕೊಳ್ಳುವ ಯೋಗವಿದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುವವರಿಗೆ ಅಭಿವೃದ್ಧಿ ಇದೆ. ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧಗಳು ಏರ್ಪಡುತ್ತವೆ. ಕೃಷಿ ವಿಷಯದಲ್ಲಿ ಸಾಂಪ್ರದಾಯಿಕ ವಿಧಾನಗಳನ್ನು ಅಳವಡಿಸಿಕೊಂಡು ಪ್ರಯೋಗಶೀಲರಾಗುವಿರಿ.
  • ಧನು
  • ಅನಿರೀಕ್ಷಿತ ಗೌರವ ದೊರೆಯುವ ಸಾಧ್ಯತೆಗಳಿವೆ. ಆದಾಯವು ಸ್ವಲ್ಪ ಉತ್ತಮಗೊಳ್ಳುತ್ತದೆ. ಶತ್ರುಗಳಿಂದಲೂ ನಿಮಗೆ ಅನುಕೂಲವಾಗುತ್ತದೆ. ಅತಿಯಾದ ಗೌರವವನ್ನು ಕೊಡುವುದು ಬೇಡ. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚು ಶ್ರಮವಹಿಸಬೇಕು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ ಹೆಚ್ಚುತ್ತದೆ. ಸಂಸಾರದಲ್ಲಿನ ಸಂಕಷ್ಟಗಳು ಪರಿಹಾರಗೊಂಡು ಹೊಸ ಬೆಳಕು ಮೂಡುತ್ತದೆ.
  • ಮಕರ
  • ಯಾವುದೇ ಕೆಲಸ ಮಾಡಲು ಹೆಚ್ಚು ಪರಿಶ್ರಮ ಹಾಕುವಿರಿ. ಆದಾಯವು ಕಡಿಮೆ ಇದ್ದು ಬದಲಿ ಆದಾಯಗಳ ಕಡೆಗೆ ಗಮನಹರಿಸಬಹುದು. ಹಿರಿಯರಿಂದ ನಿಮ್ಮ ಕೆಲಸಕಾರ್ಯಗಳಿಗೆ ಸಹಕಾರ ದೊರೆಯುತ್ತದೆ. ವ್ಯವಹಾರಗಳಲ್ಲಿ ಸ್ವಲ್ಪಮುನ್ನಡೆ ಇರುತ್ತದೆ. ಸಂಗ್ರಹಿಸಿಟ್ಟ ವಸ್ತುಗಳ ಮಾರಾಟದಿಂದ ಹೆಚ್ಚಿನ ಲಾಭ ಇರುತ್ತದೆ. ವ್ಯಾಪಾರದಲ್ಲಿನ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರವನ್ನು ಕಂಡುಕೊಳ್ಳುವಿರಿ.
  • ಕುಂಭ
  • ನಿಮ್ಮ ಪ್ರಯತ್ನಗಳಿಗೆ ಫಲ ದೊರೆಯುತ್ತದೆ. ಆದಾಯವು ಕಡಿಮೆ ಇದ್ದು, ಅದರಲ್ಲೇ ಅನುಸರಿಸಿಕೊಳ್ಳಬೇಕು. ಹಿರಿಯರಿಗೆ ಉತ್ತಮ ಗೌರವ ದೊರೆಯುತ್ತದೆ. ಆಸ್ತಿ ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ತಂದೆ, ತಾಯಿ ಮಕ್ಕಳಿಗಾಗಿಯೇ ವಿದೇಶಕ್ಕೆ ಅಥವಾ ದೂರ ದೂರಿಗೆ ಪ್ರಯಾಣ ಬೆಳೆಸಬಹುದು. ಅಧ್ಯಯನದಲ್ಲಿನ ಆಸಕ್ತಿಯಿಂದಾಗಿ ಉತ್ತಮ ಭವಿಷ್ಯ ಲಭಿಸುತ್ತದೆ.
  • ಮೀನ
  • ಆರಂಭದಲ್ಲಿ ಬಹಳ ಆಲಸಿತನವಿರುತ್ತದೆ. ಆದಾಯ ಸ್ವಲ್ಪ ಕಡಿಮೆಯಾಗಿ, ಖರ್ಚುಗಳಿಗೆ ಕಡಿವಾಣ ಹಾಕಲೇಬೇಕಾಗುತ್ತದೆ. ಹೊಸ ಆದಾಯದ ಮೂಲಗಳತ್ತ ಗಮನ ಹರಿಸುವಿರಿ. ನೀರಾವರಿ ಭೂಮಿಯನ್ನು ಹೊಂದುವ ಯೋಗವಿದೆ. ಸರ್ಕಾರದ ಕಡೆಯಿಂದ ಬರಬೇಕಾದ ಸಹಾಯ ಬರುವುದು ನಿಧಾನವಾಗುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

    ADVERTISEMENT