ADVERTISEMENT

ವಾರ ಭವಿಷ್ಯ: ಈ ರಾಶಿಯವರ ವೃತ್ತಿಯಲ್ಲಿ ಏರಿಳಿತಗಳು ಇರುವುದಿಲ್ಲ

ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 6 ಡಿಸೆಂಬರ್ 2025, 23:39 IST
Last Updated 6 ಡಿಸೆಂಬರ್ 2025, 23:39 IST
<div class="paragraphs"><p>ವಾರ ಭವಿಷ್ಯ</p></div>

ವಾರ ಭವಿಷ್ಯ

   
ಮೇಷ
  • ವಾರದ ಆರಂಭದಲ್ಲಿ ಸ್ವಲ್ಪ ಉದಾಸಿನತೆ ಇರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಅಪೇಕ್ಷಿಸಿದ ಸಹಾಯ ದೊರೆಯುತ್ತದೆ. ಭೂಮಿ ವ್ಯವಹಾರ ಮತ್ತು ಪಶು ವ್ಯಾಪಾರವನ್ನು ಮಾಡುವವರಿಗೆ ಲಾಭವಿರುತ್ತದೆ. ಸಂಸಾರದಲ್ಲಿ ಶಾಂತಿ ಇರುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಇರುತ್ತದೆ. ಸಂಗಾತಿಯ ಆದಾಯದಲ್ಲಿ ಸ್ವಲ್ಪ ಕಡಿಮೆಯಾಗಬಹುದು.  ( ಅಶ್ವಿನಿ ಭರಣಿ ಕೃತಿಕ 1)
  • ವೃಷಭ
  • ನಿಮ್ಮ ವ್ಯಕ್ತಿತ್ವದ ಕಡೆಗೆ ಹೆಚ್ಚು ಗಮನ ಕೊಡುವಿರಿ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಸ್ಥಿರಾಸ್ತಿಯನ್ನು ಮಾಡುವ ವಿಚಾರದಲ್ಲಿ ವ್ಯವಹಾರದಲ್ಲಿ ಅತಿ ಆತುರ ಬೇಡ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭ ಹೆಚ್ಚು. ಅವಿವಾಹಿತರಿಗೆ ಕಂಕಣ ಬಲ ಒದಗುವ ಸಾಧ್ಯತೆ ಇದೆ. ಸಾಮಾಜಿಕ ಕೆಲಸಗಳನ್ನು ಮಾಡುವವರಿಗೆ ಜನಮನ್ನಣೆ ಸಿಗುತ್ತದೆ. ಚಿನ್ನದ ಆಭರಣಗಳನ್ನು ಕಂತಿನ ರೂಪದಲ್ಲಿ ಕೊಳ್ಳುವ ಯೋಗವಿದೆ.  (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
  • ಮಿಥುನ
  • ಸಮಾಜದಿಂದ ಉತ್ತಮ ಗೌರವ ಸಿಗುವ ಸಾಧ್ಯತೆಗಳಿವೆ. ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಒಳ್ಳೆಯ ಕೆಲಸಗಳಿಗೆ ಬಂಧುಗಳ ಸಹಕಾರ ದೊರೆಯುತ್ತದೆ. ಸ್ಥಿರಾಸ್ತಿಯನ್ನು ಕೊಳ್ಳುವ ಬಗ್ಗೆ ಆಲೋಚನೆ ಮಾಡಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಮಹಿಳೆಯರ ಜತೆ ಹಣಕಾಸಿನ ವ್ಯವಹಾರಗಳ ಬೇಡ. ಸ್ಥಾನಮಾನ ಅನಿರೀಕ್ಷಿತವಾಗಿ ದೊರೆಯುತ್ತದೆ.  (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
  • ಕರ್ಕಾಟಕ
  • ಆದಾಯವು ಕಡಿಮೆ ಇರುತ್ತದೆ. ನಿಮ್ಮ ವ್ಯವಹಾರಗಳಿಗೆ ಬಂಧುಗಳು ಸಹಕಾರ ನೀಡುವರು. ಇಚ್ಛೆಪಟ್ಟ ಆಸ್ತಿಯನ್ನು ಕೊಳ್ಳುವ ಯತ್ನ ಮಾಡಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರೇಯಸ್ಸು ಇರುತ್ತದೆ. ಹಿರಿಯರ ಆಸ್ತಿ ಸಿಗುವ ಸಂದರ್ಭವಿದೆ. ಸಂಗೀತ ಮತ್ತು ಇತರೆ ಲಲಿತಕಲೆಗಳಲ್ಲಿ ಮನ್ನಣೆ ದೊರೆತು ಸಂತಸವಾಗುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಲಭಿಸುವ ಅವಕಾಶಗಳಿವೆ. ಚಿನ್ನದ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರವಾಗಿ ವ್ಯವಹಾರ ವೃದ್ಧಿಸುತ್ತದೆ. ( ಪುನರ್ವಸು 4 ಪುಷ್ಯ ಆಶ್ಲೇಷ)
  • ಸಿಂಹ
  • ‌ಧರ್ಮದ ಬಗ್ಗೆ ಹೆಚ್ಚು ಒಲವನ್ನು ಬೆಳೆಸಿಕೊಳ್ಳುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಯಾವುದೇ ಕೆಲಸವನ್ನು ಆತುರದಿಂದ ಮಾಡಬೇಡಿ. ಶುಭಕಾರ್ಯಗಳಿಗಾಗಿ ದೂರ ಪ್ರಯಾಣದ ಸಾಧ್ಯತೆಗಳಿವೆ. ನಿಮ್ಮ ಕೆಲಸ ಕಾರ್ಯಗಳಿಗೆ ಸ್ತ್ರೀಯರ ಸಹಕಾರ ದೊರೆಯುತ್ತದೆ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ಶತ್ರುಗಳನ್ನು ಜಾಣ್ಮೆಯಿಂದ ಗೆಲ್ಲುವಿರಿ. ಹೈನುಗಾರಿಕೆ ಮಾಡುವವರಿಗೆ ಲಾಭವಿದೆ.  ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
  • ಕನ್ಯಾ
  • ನಿಮ್ಮ ಚುರುಕುತನದಿಂದ ಎಲ್ಲರ ಗಮನವನ್ನು ಸೆಳೆಯಬಹುದು. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಬಂಧುಗಳ ಹಾಗೂ ಸ್ನೇಹಿತರ ಸಹಕಾರ ಪಡೆಯಲು ಪ್ರಯತ್ನಪಡುವಿರಿ. ಆಸ್ತಿ ವಿಚಾರಗಳಲ್ಲಿ ಮುನ್ನಡೆಯನ್ನು ಕಾಣುವಿರಿ. ಸಂಗಾತಿಯ ಉದಾಸೀನತೆ ನಿಮಗೆ ಬೇಸರ ತರಿಸುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟದ ಯಶಸ್ಸು ಇರುವುದಿಲ್ಲ. ನಿಮ್ಮ ಕೆಲಸಗಳಿಗೆ ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿಯಾಗಬಹುದು.  ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
  • ತುಲಾ
  • ‌ಸಂಗೀತಗಾರರಿಗೆ ಅತಿ ಹೆಚ್ಚು ಮನ್ನಣೆ ದೊರೆತು ಆದಾಯ ಹೆಚ್ಚುತ್ತದೆ. ನಿಮ್ಮ ಸ್ವಂತ ಆದಾಯ ಏರಿಕೆಯ ಹಾದಿಯಲ್ಲಿರುತ್ತದೆ. ಹಿರಿಯರಿಂದ ನಿಮ್ಮ ಉದ್ಯೋಗದಲ್ಲಿ ಸ್ವಲ್ಪ ಅನುಕೂಲಗಳಾಗುತ್ತವೆ. ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ಅಭಿವೃದ್ದಿ ಇರುತ್ತದೆ. ವಿದೇಶದಲ್ಲಿ ಓದಬೇಕೆನ್ನುವವರಿಗೆ ಅವಕಾಶಗಳು ದೊರೆಯುತ್ತವೆ. ಔಷಧ ಸಂಶೋಧಕರಿಗೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಕೆಲವು ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭವನ್ನು ಕಾಣಬಹುದು. ಆದಾಯದಷ್ಟೇ ಖರ್ಚು ಸಹ ಇರುತ್ತದೆ. ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
  • ವೃಶ್ಚಿಕ
  • ಗೌರವವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ವಿದೇಶದಲ್ಲಿರುವವರಿಗೆ ಆಸ್ತಿ ಮಾಡುವ ಯೋಗವಿದೆ. ಗಣಿ ವಿಜ್ಞಾನವನ್ನು ಓದುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ. ಸಾಂಸಾರಿಕ ಜೀವನದಲ್ಲಿ ಸಾಕಷ್ಟು ಹೊಂದಾಣಿಕೆಯನ್ನು ಕಾಣುವ ಸಾಧ್ಯತೆಗಳಿವೆ. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ಕೀಲು ನೋವು ನಿಮ್ಮನ್ನು ಕಾಡಬಹುದು. ವೃತ್ತಿಯಲ್ಲಿ ಏರಿಳಿತಗಳು ಇರುವುದಿಲ್ಲ.  ( ವಿಶಾಖಾ 4 ಅನುರಾಧ ಜೇಷ್ಠ)
  • ಧನು
  • ಮನಸ್ಸಿನಲ್ಲಿ ಸಾಧಿಸಬೇಕೆಂಬ ಛಲ ಇರುತ್ತದೆ. ಆದಾಯವು ಕಡಿಮೆ ಇದ್ದರೂ ತೊಂದರೆ ಇರುವುದಿಲ್ಲ. ಬಂಧುಗಳ ವಿರೋಧವಿರುತ್ತದೆ. ಕೃಷಿಯಿಂದ ಹೆಚ್ಚು ಅನುಕೂಲವಿರುತ್ತದೆ. ಈಗ ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ಸ್ಥಾನ ಪಲ್ಲಟವಾಗುವ ಸಾಧ್ಯತೆ ಇದೆ. ಶುಭಕಾರ್ಯಗಳನ್ನು ಮಾಡುವ ಉತ್ಸಾಹ ಬರುತ್ತದೆ. ಕೆಲವು ರಾಜಕಾರಣಿಗಳ ಮಕ್ಕಳಿಗೆ ರಾಜಕೀಯ ಪ್ರವೇಶ ಮಾಡುವ ಅವಕಾಶ ಸಿಗುತ್ತದೆ.  ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
  • ಮಕರ
  • ವಿಶಾಲ ಮನೋಭಾವದಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಕ್ಲಿಷ್ಟವಾದ ಕೆಲಸಗಳನ್ನು ಆಶ್ಚರ್ಯಕರವಾದ ರೀತಿಯಲ್ಲಿ ಸಾಧಿಸಿ ಪ್ರಶಂಸೆಗೆ ಒಳಗಾಗುವಿರಿ. ಆದಾಯವು ಮಂದಗತಿಯಲ್ಲಿರುತ್ತದೆ. ವಿದೇಶಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ನಿಮ್ಮ ಒಂದು ಹವ್ಯಾಸ ಸಂಪಾದನೆ ಮಾಡುವ ವೃತ್ತಿಯಾಗಿ ಬದಲಾಗಬಹುದು. ವಿದ್ಯಾರ್ಥಿಗಳಿಗೆ ಸ್ವಲ್ಪ ಅನುಕೂಲಕರವಾದ ವಾತಾವರಣವಿರುತ್ತದೆ. ಶೀತ ಬಾಧೆ ಸ್ವಲ್ಪ ಕಾಡಬಹುದು. ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
  • ಕುಂಭ
  • ವಿದೇಶಕ್ಕೆ ಹೋಗಬೇಕೆನ್ನುವವರ ಆಸೆ ಈಡೇರುತ್ತದೆ. ಆದಾಯ ಕಡಿಮೆ ಇರುತ್ತದೆ. ಚಿನ್ನದ ಸಗಟು ಆಭರಣ ತಯಾರಿಕರಿಗೆ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚು ಅನುಕೂಲವಾಗುತ್ತದೆ. ಬಂಧುಗಳ ಸಹಕಾರ ನೀಡುವುದಿಲ್ಲ. ಸರ್ಕಾರಿ ನೌಕರರಿಗೆ ವೃತ್ತಿಯಲ್ಲಿನ ಅಕಾಲಿಕ ಪ್ರಯಾಣದಿಂದ ಕಿರಿಕಿರಿಯಾಗುತ್ತದೆ, ಮತ್ತು ವೃಥಾ ಖರ್ಚಾಗುತ್ತದೆ. ಮಹಿಳೆಯರು ನಡೆಸುವ ವ್ಯಾಪಾರ-ವ್ಯವಹಾರಗಳಲ್ಲಿ ಈಗ ಅಭಿವೃದ್ಧಿ ಇರುತ್ತದೆ. ಯುವಕರಿಗೆ ವೃತ್ತಿಯಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಇರುವುದಿಲ್ಲ. ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
  • ಮೀನ
  • ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ) ವಾರದ ಆರಂಭದಲ್ಲಿ ಆಲಸ್ಯವಿರುತ್ತದೆ. ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಮನಸ್ಸಿನಲ್ಲಿ ಇದ್ದ ತಪ್ಪು ಕಲ್ಪನೆಗಳು ದೂರವಾಗಿ ಸಂಬಂಧಗಳು ಗಟ್ಟಿಯಾಗುತ್ತವೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವ್ಯವಸಾಯದಲ್ಲಿನ ಅಭಿವೃದ್ಧಿಯಿಂದ ನಿಮ್ಮ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ವೃತ್ತಿಯಲ್ಲಿ ಅಧಿಕ ಮಾನಸಿಕ ಒತ್ತಡಗಳನ್ನು ತಡೆದುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. 
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.