ವಾರ ಭವಿಷ್ಯ | ಸೆ.14 ರಿಂದ 20ರವರೆಗೆ: ಕೆಲವರಿಗೆ ದೂರ ಪ್ರಯಾಣದ ಯೋಗ...
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 13 ಸೆಪ್ಟೆಂಬರ್ 2025, 23:18 IST
Last Updated 13 ಸೆಪ್ಟೆಂಬರ್ 2025, 23:18 IST
ವಾರ ಭವಿಷ್ಯ
ಮೇಷ
ಮನಸ್ಸಿನಲ್ಲಿ ಕೆಲಸ ಮಾಡುವ ಹುಮ್ಮಸ್ಸು ತುಂಬಿರುತ್ತದೆ. ಆದಾಯವು ಸ್ವಲ್ಪ ಉತ್ತಮಗೊಳ್ಳುತ್ತದೆ. ಹಿರಿಯರನ್ನು ಒಲಿಸಿಕೊಂಡು ಈಗ ನಿಮ್ಮ ಕೆಲಸ ಕಾರ್ಯಗಳನ್ನು ಸಾಧಿಸುವಿರಿ. ಸ್ಥಿರಾಸ್ತಿಯನ್ನು ಕೊಳ್ಳಲು ಬೇಕಾದ ಹಣದ ಮಾರ್ಗವು ಗೋಚರಿಸುತ್ತದೆ. ಭೂಮಿಯ ವ್ಯವಹಾರವನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟದ ಫಲಿತಾಂಶ ಲಭಿಸುತ್ತದೆ. ರಕ್ತ ಸಂಬಂಧಿ ದೋಷಗಳಿರುವವರ ಆರೋಗ್ಯ ಸುಧಾರಿಸುತ್ತದೆ. ಸಂಗಾತಿಯಿಂದ ಸಂಪೂರ್ಣ ಸಹಕಾರ ದೊರೆಯುತ್ತದೆ. ಕೃಷಿಯಿಂದ ಹೆಚ್ಚಿನ ಲಾಭವನ್ನು ನಿರೀಕ್ಷೆ ಮಾಡಬಹುದು.
ವೃಷಭ
ವಾರದ ಆರಂಭ ಅತ್ಯಂತ ಆನಂದದಾಯಕವಾಗಿರುತ್ತದೆ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ನೀವು ಸಹೋದರಿಯರ ಸಹಕಾರ ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಕಾಲ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾದವರಿಗೆ ಔಷಧಿಯಿಂದ ಪರಿಹಾರ ದೊರೆಯಬಹುದು. ಸಂಗಾತಿ ಕಡೆಯವರಿಂದ ನಿಮಗೆ ನಿರೀಕ್ಷಿತ ಸಹಕಾರ ದೊರೆಯುವುದಿಲ್ಲ. ಆದಾಯದಲ್ಲಿ ಅನಿರೀಕ್ಷಿತ ಏರುಪೇರುಗಳಾಗಬಹುದು. ವಿದೇಶದಲ್ಲಿ ಉದ್ಯೋಗವನ್ನು ಅರಸುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ.
ಮಿಥುನ
ಅಧ್ಯಾಪಕರಿಗೆ ಸಮಾಜದಿಂದ ಉತ್ತಮ ಗೌರವ ದೊರೆಯುತ್ತದೆ. ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ಬಂಧುಗಳಲ್ಲಿ ಕೆಲವರು ನಿಮ್ಮ ಕೆಲಸ ಕಾರ್ಯಗಳಿಗೆ ಬೆಂಬಲ ನೀಡುವರು. ಸರ್ಕಾರಿ ಭೂಮಿ ವ್ಯವಹಾರ ಮಾಡುವವರಿಗೆ ಆದಾಯವು ಹೆಚ್ಚುತ್ತದೆ. ಆಯುಧಗಳನ್ನು ತಯಾರು ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ಸಂಗಾತಿಯ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಕೆಲವರಿಗೆ ದೂರ ಪ್ರಯಾಣದ ಯೋಗವಿರುತ್ತದೆ. ವೃತ್ತಿಯಲ್ಲಿ ಒತ್ತಡಗಳು ಹೆಚ್ಚಾಗುವ ಸಾಧ್ಯತೆಗಳಿವೆ.
ಕರ್ಕಾಟಕ
ಒಡವೆಗಳ ಬಗ್ಗೆ ಹೆಚ್ಚು ಚಿಂತನೆ ಮಾಡುವಿರಿ. ಆದಾಯವು ನಿರೀಕ್ಷೆಯ ಹತ್ತಿರ ಬರುತ್ತದೆ. ಭಾಷಣಕಾರರಿಗೆ ಉತ್ತಮ ವೇದಿಕೆ ದೊರೆಯುತ್ತದೆ. ಜನರೊಡನೆ ಬುದ್ಧಿವಂತಿಕೆಯಿಂದ ವ್ಯವಹರಿಸುವುದನ್ನು ಕಲಿಯುವಿರಿ. ಆಸ್ತಿ ವ್ಯವಹಾರ ಮಾಡುವವರಿಗೆ ಅವರ ಆಸೆ ಈಡೇರುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಗಲಿಬಿಲಿಯಾಗಿ ಫಲಿತಾಂಶ ಕಡಿಮೆಯಾಗಬಹುದು. ಆಯುರ್ವೇದ ವೈದ್ಯರಿಗೆ ಬೇಡಿಕೆ ಹೆಚ್ಚಾಗುತ್ತದೆ. ಸಂಗಾತಿಯ ವರ್ತನೆಯಲ್ಲಿ ಸ್ವಲ್ಪ ಬದಲಾಗಿ ನಿಮಗೆ ಸಹಕಾರ ನೀಡುವವರು. ವಿದೇಶಿ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತ ಲಾಭವಿರುತ್ತದೆ.
ಸಿಂಹ
ಬುದ್ಧಿವಂತಿಕೆಯಿಂದ ಗೌರವವನ್ನು ಸಂಪಾದನೆ ಮಾಡಿಕೊಳ್ಳುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಕೆಲಸಕಾರ್ಯಗಳಿಗೆ ಬಂಧುಗಳಿಂದ ಸ್ವಲ್ಪ ಮಟ್ಟಿನ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಕಾಲ. ಕೆಲವರಿಗೆ ತಲೆ ನೋವು ಕಾಣಿಸಿಕೊಳ್ಳಬಹುದು. ಸಂಗಾತಿಯು ಕೇಳುವ ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರವಿರುವುದಿಲ್ಲ. ಕಾನೂನಿನ ತೊಡಕುಗಳು ಎದುರಾಗುವ ಸಂದರ್ಭಗಳಿವೆ. ರಾಜಕಾರಣಗಳಿಗೆ ಸ್ವಲ್ಪ ಹಿನ್ನಡೆಯಾಗುತ್ತದೆ. ಉದ್ಯೋಗದಲ್ಲಿ ಸ್ವಲ್ಪ ಅನುಕೂಲವಾಗುತ್ತದೆ.
ಕನ್ಯಾ
ಆದಾಯವು ಕಡಿಮೆ ಇರುತ್ತದೆ. ಕೃಷಿಯಿಂದ ಆದಾಯವನ್ನು ನಿರೀಕ್ಷೆ ಮಾಡಬಹುದು. ಒರಟು ಮಾತಿನಿಂದ ಯಾವುದೇ ಪ್ರಯೋಜನವಿರುವುದಿಲ್ಲ. ಬಂಧುಗಳಿಂದ ಸ್ವಲ್ಪ ಆರ್ಥಿಕ ಸಹಾಯ ದೊರೆಯುತ್ತದೆ. ಸಂಸಾರದಲ್ಲಿ ಶಾಂತಿ ಮೂಡುತ್ತದೆ. ವಿದ್ಯಾರ್ಥಿಗಳಿಗೆ ಫಲಿತಾಂಶದಲ್ಲಿ ಹಿನ್ನಡೆಯಾಗಬಹುದು. ಶ್ವಾಸಕೋಶದ ತೊಂದರೆಗಳು ಕೆಲವರನ್ನು ಕಾಡಬಹುದು. ಕೃಷಿ ಉತ್ಪನ್ನಗಳಿಂದ ಅನಿರೀಕ್ಷಿತ ಲಾಭವನ್ನು ಕಾಣಬಹುದು. ತಾಯಿಯಿಂದ ಆರ್ಥಿಕ ಸಹಾಯ ದೊರೆಯುತ್ತದೆ.
ತುಲಾ
ಮುನ್ನುಗ್ಗುವ ಹುಮ್ಮಸ್ಸು ನಿಮ್ಮಲ್ಲಿ ಇರುತ್ತದೆ. ವೃತ್ತಿಯಲ್ಲಿ ಹೆಚ್ಚು ಆದಾಯವನ್ನು ಗಳಿಸುವ ಸಾಧ್ಯತೆಗಳಿವೆ. ಮಹಿಳೆಯರ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಬಹುದು. ವಿದೇಶದಲ್ಲಿ ಓದಬೇಕೆನ್ನುವರ ಆಸೆ ಈಗ ಕೈಗೂಡುತ್ತದೆ. ಸಂಗಾತಿಯು ನಿಮ್ಮೊಡನೆ ಬಹಳ ಹೊಂದಿಕೊಳ್ಳುವರು. ತಂದೆಯಿಂದ ಸಲಹೆಗಳ ಜತೆಗೆ ಆರ್ಥಿಕ ಸಹಾಯವನ್ನು ನಿರೀಕ್ಷೆ ಮಾಡಬಹುದು. ವೃತ್ತಿಯಲ್ಲಿ ಹೆಚ್ಚು ಅನುಕೂಲವಿರುತ್ತದೆ.
ವೃಶ್ಚಿಕ
ಮನಸ್ಸಿನಲ್ಲಿ ಒಂದು ರೀತಿ ಶಕ್ತಿ ಕುಂದಿದಂತೆ ಭಾಸವಾಗುವುದು. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಬಂಧುಗಳ ಸಹಕಾರ ನಿರೀಕ್ಷಿತ ಮಟ್ಟದಲ್ಲಿ ದೊರೆಯುವುದಿಲ್ಲ. ವಿದ್ಯಾರ್ಥಿಗಳ ಅಪೇಕ್ಷಿತ ಫಲಿತಾಂಶ ದೊರೆಯುವುದು ಕಷ್ಟ. ಕೃಷಿ ಸಂಶೋಧಕರಿಗೆ ಬಹಳ ಗೌರವ ಸಿಗುತ್ತದೆ. ಶಸ್ತ್ರಚಿಕಿತ್ಸಕರಿಗೆ ಬೇಡಿಕೆ ಹೆಚ್ಚುತ್ತದೆ. ಪ್ರೀತಿ ಪ್ರೇಮದಲ್ಲಿರುವವರು ಯಶಸ್ಸನ್ನು ಕಾಣಬಹುದು. ನಿಮ್ಮ ಮಾನಸಿಕ ಶಾಂತಿಗಾಗಿ ದೈವ ಕಾರ್ಯಗಳನ್ನು ಮಾಡುವಿರಿ.
ಧನು
ಆದಾಯವು ಮಧ್ಯಮಗತಿಯಲ್ಲಿರುತ್ತದೆ. ವಿದೇಶಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ವಿದೇಶಗಳಲ್ಲಿ ಮನೆ ಪಾಠ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಶತ್ರುಗಳ ಬಗ್ಗೆ ಸಾಕಷ್ಟು ಎಚ್ಚರ ವಹಿಸುವಿರಿ. ಕೃಷಿ ಭೂಮಿಯ ವ್ಯಾಪಾರ ಮಾಡುವವರಿಗೆ ಲಾಭವಿರುತ್ತದೆ. ಕೃಷಿಯನ್ನು ಅಧ್ಯಯನ ಮಾಡುತ್ತಿರುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ಸಂಗಾತಿಯ ಸಂಪಾದನೆಯಲ್ಲಿ ಏರಿಕೆಯನ್ನು ಕಾಣಬಹುದು. ಶೀತಬಾಧೆ ಕೆಲವರನ್ನು ಕಾಡಬಹುದು. ಆಭರಣ ತಯಾರಕರಿಗೆ ಅನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ.
ಮಕರ
ವಾರದ ಆರಂಭದಲ್ಲಿ ಸ್ವಲ್ಪ ಜಡತ್ವ ಇರುತ್ತದೆ. ವಿದೇಶಿ ವ್ಯವಹಾರಗಳಿಂದ ಹೆಚ್ಚು ಲಾಭವನ್ನು ಗಳಿಸಬಹುದು. ರಾಜಕಾರಣಿಗಳು ಮಾತನಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ವಿರುದ್ಧ ಕೆಲಸ ಮಾಡುತ್ತಿರುವ ಹಿತ ಶತ್ರುಗಳು ಬಗ್ಗೆ ತಿಳಿಯುತ್ತದೆ. ನಿಮ್ಮ ಕುಟುಂಬದಲ್ಲಿ ಒಮ್ಮತ ಮೂಡುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಉದ್ಯೋಗದಲ್ಲಿ ಅಭಿವೃದ್ಧಿ ಇರುತ್ತದೆ.
ಕುಂಭ
ಕೆಲವರಿಗೆ ವಿದೇಶ ವ್ಯಾಮೋಹ ಜಾಸ್ತಿಯಾಗುತ್ತದೆ. ಆದಾಯವು ಕಡಿಮೆ ಇರುತ್ತದೆ. ಭೂಮಿ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಆಸ್ತಿ ಕೊಳ್ಳುವ ಯೋಗ ನಿಮಗಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಯಶಸ್ಸು ಲಭಿಸುತ್ತದೆ. ಸಂಗಾತಿಯ ಸಹಕಾರದಿಂದ ಸರ್ಕಾರಿ ವ್ಯವಹಾರಗಳಲ್ಲಿ ಅನುಕೂಲವಾಗುತ್ತದೆ. ಸರ್ಕಾರಿ ವ್ಯವಹಾರಗಳಿಂದ ಆದಾಯ ಹೆಚ್ಚುತ್ತದೆ. ಕೃಷಿಯಿಂದ ಆದಾಯವನ್ನು ನಿರೀಕ್ಷೆ ಮಾಡಬಹುದು. ವೃತ್ತಿಯಲ್ಲಿ ಸಹೋದ್ಯೋಗಿಗಳ ಸಹಕಾರ ನಿಮಗೆ ದೊರೆಯುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಲಾಭವಿರುತ್ತದೆ.
ಮೀನ
ಒಂದು ರೀತಿಯ ಕೀಳರಿಮೆ ನಿಮ್ಮನ್ನು ಕಾಡಬಹುದು.ಕೃಷಿಯಿಂದ ಆದಾಯವಿರುತ್ತದೆ. ಒಡಹುಟ್ಟಿದವರ ಸಹಕಾರ ನಿಮಗೆ ದೊರೆಯುತ್ತದೆ. ಸ್ಥಿರಾಸ್ತಿ ಕೊಳ್ಳುವ ವಿಚಾರದಲ್ಲಿ ಈಗ ಮುಂದುವರೆಯಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವಿರುತ್ತದೆ. ತಲೆನೋವು ಕೆಲವರನ್ನು ಕಾಡಬಹುದು. ಸಂಗಾತಿ ಮಾಡುವ ವ್ಯವಹಾರಗಳಲ್ಲಿ ಸ್ವಲ್ಪ ಏರಿಳಿತಗಳಿರುತ್ತವೆ. ಕ್ರೀಡಾಪಟುಗಳಿಗೆ ಅನಿರೀಕ್ಷಿತ ಅಪಘಾತಗಳಾಗಬಹುದು, ಎಚ್ಚರವಹಿಸಿ. ಉದ್ಯೋಗದಲ್ಲಿ ಸ್ವಲ್ಪ ಅನುಕೂಲಕರವಾದ ವಾತಾವರಣವಿರುತ್ತದೆ.