ADVERTISEMENT

ದರ್ಶನ ದರ್ಪಣ/ ಕೃಷಿ ದರ್ಪಣ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 19:30 IST
Last Updated 16 ಫೆಬ್ರುವರಿ 2011, 19:30 IST

ಶ್ಲಾಘನೀಯ
‘ಈದ್ಗಾ ಮೈದಾನಕ್ಕೆ ಹಸಿರು ಚಪ್ಪರ’ ಹಾಕುವ ಮೂಲಕ (ರವೀಂದ್ರ ಭಟ್ಟ) ಹೈದರ್ ಅಲಿಖಾನ್ ಅವರು ತಮ್ಮ ಕಲ್ಪನೆಯನ್ನು  ಸಾಕಾರಗೊಳಿಸಿದ್ದಾರೆ. ಲೇಖನ ಓದಿ ಹೆಮ್ಮೆ ಅನ್ನಿಸಿತು. ಮರಗಳನ್ನು ಬಳಸಿಕೊಂಡು ಸಹಜ ಹಸಿರು ಚಪ್ಪರ ನಿರ್ಮಿಸುವ ಪ್ರಯತ್ನ ಶ್ಲಾಘನೀಯ.
-ಚಂದ್ರಪ್ಪ ಜೀನಕೇರಿ, ನ್ಯಾಮತಿ

ಸಲಾಮ್ 
ಬಿಸಿಲ ಝಳದಿಂದ ರಕ್ಷಣೆ ನೀಡಲು ಮರಗಳನ್ನು ಚಪ್ಪರವನ್ನಾಗಿ ಪರಿವರ್ತಿಸಿದ ಖಾನ್ ಸಾಹೇಬರ ಕೈಚಳಕ ಮೆಚ್ಚುವಂಥದು ಅವರಿಗೆ ನಮ್ಮ ಸಲಾಮ್.
-ಅಮೃತೇಶ್ ತಂಡರ, ಅಣ್ಣಿಗೇರಿ

ಶಿವನಲ್ಲ, ಭೈರವ
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಅಲಗೂಡಿನ ಸಿದ್ದೇಶ್ವರ ದೇವಸ್ಥಾನದಲ್ಲಿ ಇರುವ ನಗ್ನ (ಸಿ.ಸುರೇಶ ಅಂಬ್ಳೆ) ಮೂರ್ತಿ ಶಿವನದಲ್ಲ ಅದು ಭೈರವನ ಮೂರ್ತಿ. ಮೂರ್ತಿ ಪಕ್ಕ ಇರುವ ನಾಯಿಯ ಉಬ್ಬುಶಿಲ್ಪ ಇರುವುದು ಅದು ಭೈರವಮೂರ್ತಿ ಎಂಬುದಕ್ಕೆ ಸಾಕ್ಷ್ಯ ಒದಗಿಸುತ್ತದೆ. ನಾಯಿ ಭೈರವನ ವಾಹನ.  ಶಿವನ ನಗ್ನ ಮೂರ್ತಿ ಎಲ್ಲೂ ಇದ್ದಂತಿಲ್ಲ. ಲೇಖಕರು ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಿತ್ತು.
- ಪ್ರೊ. ಎಸ್. ಬಸವರಾಜು, ಚನ್ನಪಟ್ಟಣ; ಆರ್.ಯರಗುಂಟಯ್ಯ ನಾಯಕ, ಚಳ್ಳಕೆರೆ

ಅಚ್ಚರಿಯ ಸಂಗತಿ
ಬೆಂಗಳೂರಿನ ಒಂದೆರಡು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಖಾದಿ ಸಮವಸ್ತ್ರ ಧರಿಸುವುದನ್ನು ಕುರಿತು ಬರೆದ (ಇ.ಎಸ್.ಸುಧೀಂದ್ರ ಪ್ರಸಾದ್) ಲೇಖನ ಚೆನ್ನಾಗಿತ್ತು. ಈ ಕಾಲದಲ್ಲಿ ವಿದ್ಯಾರ್ಥಿಗಳು ಖಾದಿ ಧರಿಸುವುದು ಅಚ್ಚರಿಯ ಸಂಗತಿ.
-ಸಿ.ಯೋಗೇಶ್, ಓಬಣ್ಣನಹಳ್ಳಿ

ರೈತರಿಗೆ ಮಾಹಿತಿ
ಪನ್ನೇರಳೆ ಬೆಳೆದು ಯಶಸ್ವಿಯಾದ ರೈತರನ್ನು ಕುರಿತು ಬರೆದ ಲೇಖನಗಳು (ಜಿ.ಶಿವಣ್ಣ ಕೊತ್ತೀಪುರ; ಡಿ.ಎಂ.ಕುರ್ಕೆ ಪ್ರಶಾಂತ) ಚೆನ್ನಾಗಿದ್ದವು. ಪನ್ನೇರಳೆ ಬೆಳೆಯುವುದು ಲಾಭದಾಯಕ ಎನ್ನುವುದು ಅನೇಕ ರೈತರಿಗೆ ಗೊತ್ತೇ ಇಲ್ಲ.
-ಸುರೇಶ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT