ADVERTISEMENT

ದರ್ಶನ ದರ್ಪಣ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ಪರಿಸರ ಕಾಳಜಿ ಲೇಖನ
ಪರಿಸರ, ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವೆಂದು ಬರಿ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು, ಅದನ್ನು ಕಾರ್ಯ ರೂಪಕ್ಕೆ ತರುವುದೆ ಮಾನವೀಯ ಕಾಯಕ. ಅಂತಹ ಕಾಯಕವನ್ನು ರೈತರ ಸಹಕಾರದಿಂದ ಕಾರ್ಯರೂಪಕ್ಕೆ ತರುವಲ್ಲಿ ಕಾರ್ಯ ನಿರ್ವಾಹಕ ಎಂಜಿನಿಯರ್ ಎಂ.ಎ.ರಾಜು ಯಶಸ್ವಿಯಾಗಿದ್ದಾರೆ. ದೇಶಿ ವಿದೇಶಿ ಬಾನಾಡಿಗಳು ಮೈದುಂಬಿ ನಲಿಯಲಿ. ಪರಿಸರ ಸಂರಕ್ಷಣೆಯ ಇಂತಹ ಲೇಖನಗಳು ಪರಿಸರದ ಕಾಳಜಿಗೆ ಕಾರಣವಾಗಬಲ್ಲದು. 
 -ದೀಪಾ.ಕೆ.ವಿಭೂತಿ, ಹರಿಹರ

ಸವಿವರ ಮಾಹಿತಿ

 ಗುಲ್ಬರ್ಗದ ಪ್ರಸಿದ್ಧ ಯಾತ್ರಾ ಕ್ಷೇತ್ರ `ಕೋರವಾರ ಅಣಿವೀರಭದ್ರೇಶ್ವರ~ದ ಸವಿವರ ಮಾಹಿತಿಯು ಚೆನ್ನಾಗಿತ್ತು. ಇದೇ ರೀತಿಯಾಗಿ ಗುಲ್ಬರ್ಗದ ಪಕ್ಕದಲ್ಲೇ ಇರುವ `ರಾಮತೀರ್ಥ~ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯು ಉಪಯುಕ್ತವಾಗಿದೆ. ಈ ಕ್ಷೇತ್ರದತ್ತ ಸರ್ಕಾರ ಗಮನಹರಿಸಿ ಭಕ್ತರಿಗೆ ವಿಶೇಷ ಸೌಲಭ್ಯಗಳನ್ನು ಮಾಡಿಕೊಡಲು ಮುಂದಾಗಲಿ.
 -ಕೌಟಿ ವೀರಣ್ಣ, ಗುಲ್ಬರ್ಗ

ಮಾಹಿತಿ ಪೂರ್ಣ

ಫೆ.28 ರಂದು ಪ್ರಕಟವಾದ ಶಶಿಕಾಂತ ಶೆಂಬೆಳ್ಳಿ ಅವರ `ಸಿನಿಮಾ ಮಂದಿಗೆ ಬೀದರ್ ಸೆಳೆತ~ ಲೇಖನವು ಹೊಸ ಅಂಶದ ಮೇಲೆ ಬೆಳಕು ಚೆಲ್ಲಿತ್ತು. ಬೀದರ್ ಪ್ರಶಾಂತ, ಸುಂದರತಾಣ ಮಾತ್ರವಲ್ಲದೆ, ಪ್ರೇಕ್ಷಣೀಯ ಮತ್ತು ಚಿತ್ರರಂಗದವರ ಆಕರ್ಷಣೀಯ ಕೇಂದ್ರವೂ ಎಂಬುದು ಇದರಿಂದ ಗೊತ್ತಾಯಿತು.
 -ಕೊಹಿಮಾ, ಬಸರಕೋಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.