ADVERTISEMENT

ಪಾತಲಿಂಗೇಶ್ವರ ಸನ್ನಿಧಿಯಲ್ಲಿ ಸಡಗರ

ಚಳ್ಳಕೆರೆ ವೀರೇಶ್
Published 24 ಫೆಬ್ರುವರಿ 2014, 19:30 IST
Last Updated 24 ಫೆಬ್ರುವರಿ 2014, 19:30 IST
ಪಾತಲಿಂಗೇಶ್ವರ ಸನ್ನಿಧಿಯಲ್ಲಿ ಸಡಗರ
ಪಾತಲಿಂಗೇಶ್ವರ ಸನ್ನಿಧಿಯಲ್ಲಿ ಸಡಗರ   


‘ಮಣ್ಣಿನಲ್ಲಿ ಹುಟ್ಟಿದ ಪೈರು ಸೂರ್ಯನ ಬೆಳಕಲ್ಲಿ ಬೆಳೆದು ಬುಡದಲ್ಲಿ ಬೇರುಗಳಿಂದ ನೀರು ಕುಡಿದು ತೆನೆ ಒಡೆದು
ಕಣದಲ್ಲಿ ಒಕ್ಕಲು ಮಾಡಿ ಮೂಡಿಹನು ಲಿಂಗದ ಮೂರ್ತಿಯಾಗಿ’... ಇದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಸುಮಾರು
೨೨ ಕಿ. ಮೀ ದೂರದ ಚನ್ನಮ್ಮನಾಗತಿಹಳ್ಳಿ ಬಳಿ ಇರುವ ಶ್ರೀ ಪಾತಲಿಂಗೇಶ್ವರ ಸ್ವಾಮಿ ದೇವಾಲಯದ ಕುರಿತಾಗಿ ಇರುವ ಜನಪದ ಮಾತು.


  ಒಕ್ಕಲು ಮಾಡುವ ಕಣದಲ್ಲಿ ಉದ್ಭವಿಸಿರುವ ಮೂರ್ತಿ ಇದು ಎನ್ನುವುದು ಹಿರಿಯರ ಮಾತು. ರೈತರು ಹೊಲದಲ್ಲಿ ಉಳುಮೆ ಮಾಡುವಾಗ ಒಂದು ಕಲ್ಲಿನ ಮೂರ್ತಿ ಸಿಕ್ಕಿತ್ತು. ಇದು ದಿನೇ ದಿನೇ ಬೆಳೆಯುತ್ತಿದ್ದುದನ್ನು ನೋಡಿದ ಗ್ರಾಮಸ್ಥರು ಭಯ ಭಕ್ತಿಯಿಂದ ಅದರ ಪೂಜೆಯಲ್ಲಿ ತೊಡಗಿದರು. ನಂತರ ಇಲ್ಲಿ ದೇವಾಲಯ ನಿರ್ಮಾಣವಾಯಿತು. ಇದು ಈ ಜನಪದ ಹಾಡಿನ ಅರ್ಥ.
ಚೋಳರ ಕಾಲದ ವೈಭವ ಸಾರುವ ಈ ದೇಗುಲದಲ್ಲೀಗ ಶಿವರಾತ್ರಿ ವೈಭವ.

  ಈ ದೇವಾಲಯವು ಕೆರೆಯೊಂದರ ಏರಿಯ ಮೇಲೆ ಇದೆ. ಕೆರೆಯ ಏರಿಯನ್ನು ಏರುತ್ತಾ, ಕಾಲು ದಾರಿಯಲ್ಲಿ ಹೋಗಬೇಕು. ಹೀಗೆ ಹೋಗುತ್ತಿದ್ದಂತೆ ಮೊದಲು ಸಿಗುವುದು ಗೋರಜ್ಜನ ಗುಡಿ. ಇಲ್ಲಿಗೆ ಪೂಜೆ ಸಲ್ಲಿಸಿದ ನಂತರವಷ್ಟೇ
ಶ್ರೀ ಪಾತಲಿಂಗೇಶ್ವರ ಸ್ವಾಮಿ ದರ್ಶನ ಮಾಡುವುದು ವಾಡಿಕೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT