ADVERTISEMENT

ರಾಮತೀರ್ಥದಲ್ಲಿ ಶಿವಧ್ಯಾನ

ಸುನಿತಾ ಪಾಟೀಲ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಗುಲ್ಬರ್ಗ ನಗರದ ಹೊರವಲಯದಲ್ಲಿ ಇರುವ ಈ ಕ್ಷೇತ್ರದ ಹೆಸರು ರಾಮತೀರ್ಥ. ವಿಶೇಷ ಎಂದರೆ ಇಲ್ಲಿನ ದೇವರು ಈಶ್ವರ. ಶಿವರಾತ್ರಿ ಮತ್ತು ಅಮಾವಾಸ್ಯೆ ದಿನ ಇಲ್ಲಿ ಭಕ್ತರ ಸಾಗರವೇ ಹರಿದುಬರುತ್ತದೆ.

ಶ್ರೀರಾಮ ಸೀತೆಯನ್ನು ಹುಡುಕುತ್ತ ಬಂದು ಈ ಸ್ಥಳದಲ್ಲಿ ಕೆಲ ಕಾಲ ತಂಗುತ್ತಾನೆ. ಶಿವನನ್ನು ಒಲಿಸಿಕೊಳ್ಳಲು ಇಲ್ಲಿ ಪೂಜೆ ಮಾಡುತ್ತಾನೆ ಎನ್ನುತ್ತದೆ ಸ್ಥಳ ಪುರಾಣ.
ನಗರದ ಹೊರವಲಯದಲ್ಲೇ ಇದ್ದರೂ ಮುಳ್ಳು, ಕಲ್ಲು, ಗಿಡ, ಪೊದೆಯಿಂದ ತುಂಬಿಕೊಂಡಿದ್ದ ಸ್ಥಳ ಇದು.

1842 ರಲ್ಲಿ ಗರ್ಭಗುಡಿ ನಿರ್ಮಿಸಲಾಗಿತ್ತು. ರತ್ನಾಬಾಯಿ ಕಲ್ಯಾಣಪ್ರಸಾದ ಶುಕ್ಲಾ ಎಂಬ ಭಕ್ತೆ ಇದಕ್ಕೆ 3 ಎಕರೆ 6 ಗುಂಟೆ ಭೂಮಿ ದಾನ ಮಾಡಿದ್ದರು. ಮುಂದೆ 1958ರಲ್ಲಿ ದೇವಸ್ಥಾನದ ನೂತನ ಮಂಟಪ ಕಟ್ಟಲಾಯಿತು. ಈಗಲೂ ದೇವಾಲಯದ ಕಾಮಗಾರಿ ಚಾಲನೆಯಲ್ಲಿದೆ.


ದೇಗುಲದ ಆವರಣದಲ್ಲಿ ಆಲ ಮತ್ತು ಬೇವಿನ ಮರಗಳು ಬೆಳೆದಿವೆ. ಮಕ್ಕಳಾಗದ ವಿವಾಹಿತೆಯರು ಮತ್ತು ಕಂಕಣಭಾಗ್ಯ ಕೂಡಿ ಬರಲಿ ಎಂದು ಯುವತಿಯರು ಇಲ್ಲಿ ಪೂಜೆ ಮಾಡಿ, `ದೇವರ ಮರ~ಗಳಿಗೆ ಪ್ರದಕ್ಷಿಣೆ ಹಾಕುವ ರೂಢಿ ಇದೆ ಎಂದು ಅರ್ಚಕ ಸಿದ್ದ ಭಟ್ ಜೋಶಿ ಹೇಳುತ್ತಾರೆ.

ಎಲ್ಲಿದೆ?
ಗುಲ್ಬರ್ಗ ಕೇಂದ್ರ ಬಸ್ ನಿಲ್ದಾಣದಿಂದ ರಿಂಗ್ ರೋಡ್ ಮಾರ್ಗವಾಗಿ ಐದು ಕಿ.ಮೀ. ದೂರದ ಆಳಂದ ರಸ್ತೆ ಚೆಕ್ ಪೋಸ್ಟ್ ಹತ್ತಿರ ಹೋದರೆ ಈ ದೇವಾಲಯ ಕಾಣುತ್ತದೆ. ಶಿವರಾತ್ರಿ ಅಮಾವಾಸ್ಯೆಯಂದು ದೇವಸ್ಥಾನದ ಗರ್ಭಗುಡಿಗೆ ಮಾಡುವ ಗುಲಾಬಿ ಹೂವಿನ ಶೃಂಗಾರ ನಯನ ಮನೋಹರವಾಗಿರುತ್ತದೆ. ಪ್ರತಿ ದಿನದ ರುದ್ರಾಭಿಷೇಕ ಸೇವೆಗೆ 250 ರೂ ಸೇವಾ ಶುಲ್ಕ ನಿಗದಿಪಡಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT