ADVERTISEMENT

ಹುಬ್ಬಳ್ಳಿ ನವನಗರದ ಈಶ್ವರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 19:30 IST
Last Updated 4 ಜೂನ್ 2012, 19:30 IST

ದೇವಾಲಯ ದರ್ಶನ

ಹುಬ್ಬಳ್ಳಿ- ಧಾರವಾಡಗಳ ನಡುವಿನ ನವನಗರದಲ್ಲಿ ನಾಗರಿಕರಿಗೆ ನೆಮ್ಮದಿ ನೀಡುತ್ತಿದೆ ಶಿವ ಮಂದಿರ. ಇಲ್ಲಿ ಪ್ರತಿಷ್ಠಾಪನೆಗೊಂಡ ಈಶ್ವರ ನವನಗರದ ಕ್ಷೇತ್ರಾಧಿಪತಿ ಎನಿಸಿದ್ದಾನೆ. ಇವನ ಸಾನ್ನಿಧ್ಯದಲ್ಲಿ ಧರ್ಮ, ಸಾಹಿತ್ಯ, ಆಧ್ಯಾತ್ಮ, ಸಂಸ್ಕೃತಿ ಚಿಂತನೆಯ ಕಾರ್ಯಕ್ರಮಗಳು ನಡೆಯುತ್ತವೆ.

ನವನಗರ ನಿವಾಸಿಗಳ ಹಿತೋದ್ಧಾರಕ ಸಂಘ ಈ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಇಲ್ಲಿ ಈಶ್ವರನ ಮುಂದೆ ನಂದಿ ವಿರಾಜಮಾನನಾಗಿದ್ದಾನೆ. ಪ್ರಾಂಗಣದಲ್ಲಿಯೇ ಉತ್ತರಕ್ಕೆ ಮಾರುತಿ, ದಕ್ಷಿಣಕ್ಕೆ ಗಣಪತಿ ಗುಡಿ ಇದೆ. ದೇವಾಲಯದ ಮುಂದಿನ ಆವರಣದಲ್ಲಿ ನವಗ್ರಹ ಮೂರ್ತಿಗಳಿಗೆ ಪೂಜೆ ಸಲ್ಲುತ್ತದೆ. ಎಲ್ಲ ದೇವರ ಪೂಜೆಗಳು ಏಕಕಾಲದಲ್ಲಿ ನಡೆಯುತ್ತವೆ. ಸೋಮವಾರ ಪಲ್ಲಕ್ಕಿ ಉತ್ಸವ ಇರುತ್ತದೆ.

ದೇವಾಲಯದ ಆವರಣದಲ್ಲಿ ಮದುವೆ, ಧಾರ್ಮಿಕ ಸಭೆ ಸಮಾರಂಭಗಳಿಗೂ ಅವಕಾಶವಿದೆ. ನಿರ್ಮಲವಾದ ಅಡುಗೆಯ ಮನೆಯೂ ಇದೆ. ಆವರಣದ ಸುತ್ತೆಲ್ಲ ಗಿಡಗಳು ನೆರಳು ನೀಡುತ್ತಿವೆ. ಕೆಲವಂತೂ ಹೂ ಹಣ್ಣು ಬಿಡುತ್ತಿವೆ. `ಓಂ ನಮಃ ಶಿವಾಯ~ `ಶಿವಾಯ ನಮಃ~ ಹೀಗೆ ಶಿವನ ಕುರಿತು ಷಡಕ್ಷರಿ ಹಾಗೂ ಪ್ರಣವ ಪಂಚಾಕ್ಷರಿ ಮಂತ್ರಗಳು ಸದಾಕಾಲ ಕೇಳಿಬರುತ್ತವೆ.

ಶ್ರಾವಣ ಮಾಸದ ಪ್ರತಿ ಸಂಜೆ ಪುರಾಣ ಪ್ರವಚನ, ಸಂಗೀತ ಸೇವೆ, ನವರಾತ್ರಿಯಲ್ಲಿ 9 ದಿನ ದೇವಿ ಪುರಾಣ, ದೀಪಾವಳಿಗೆ ದೀಪೋತ್ಸವ ಇಲ್ಲಿನ ವಿಶೇಷ. ವಿವರಗಳಿಗೆ. 0836 2222 884, 98802 21418.

ಸೇವಾ ವಿವರ                 (ರೂ.ಗಳಲ್ಲಿ)

ADVERTISEMENT

ನಿರಂತರ ಪೂಜೆ                     1111
ಮಹಾರುದ್ರಾಭಿಷೇಕ                   251
ರುದ್ರಾಭಿಷೇಕ/ ಪಲ್ಲಕ್ಕಿ ಸೇವೆ         101
ಪಂಚಾಮೃತ ಅಭಿಷೇಕ                 51
ಎಲೆಪೂಜೆ                               101
ಕುಂಕುಮ ಪೂಜೆ                         51
ಸಂಕಷ್ಟ ಪೂಜೆ                           51
ನಂದಾದೀಪ ಒಂದು ವರ್ಷಕ್ಕೆ        501

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.