ADVERTISEMENT

ಬೆರಗಿನ ಭಾರತ ದರ್ಶನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 19:30 IST
Last Updated 27 ನವೆಂಬರ್ 2019, 19:30 IST
ಆಲ್ಬರ್ಟ್ ಹಾಲ್ ವಸ್ತುಸಂಗ್ರಹಾಲಯ, ಜೈಪುರ
ಆಲ್ಬರ್ಟ್ ಹಾಲ್ ವಸ್ತುಸಂಗ್ರಹಾಲಯ, ಜೈಪುರ   

ಪ್ರವಾಸ, ಮೋಜಿನ ಜತೆಗೆ ಒಂದಷ್ಟು ಜ್ಞಾನ ದಿಗಂತ ವಿಸ್ತರಣೆಗೆ ನೆರವಾಗುತ್ತದೆ. ಪ್ರವಾಸದ ವೇಳೆ ಓಡಾಡುವ ತಾಣಗಳ ಸುತ್ತಮುತ್ತ ಒಂದಷ್ಟು ಸೂಕ್ಷ್ಮತೆಯಿಂದ ಗಮನಿಸಬೇಕಷ್ಟೆ. ಹೀಗೆ ಸುತ್ತಾಟಕ್ಕೆ ವ್ಯವಸ್ಥಿತ ಯೋಜನೆ ಹಾಕಿಕೊಂಡರೆ, ದೇಶವಿಡೀ ತಿರುಗಾಡುತ್ತಾ ಇಲ್ಲಿನ ಬಹುಮುಖಿ, ಶ್ರೀಮಂತ ಇತಿಹಾಸ, ಪರಂಪರೆಯ ಪರಿಚಯ ಮಾಡಿಕೊಳ್ಳಬಹುದು. http://incredibleindia.com/ ವೆಬ್‌ಸೈಟ್‌ಗೆ ಭೇಟಿ ನೀಡಿದರೆ, ಬೆರಗಿನ ಭಾರತ ದರ್ಶನಕ್ಕೆ ತಯಾರಿ ಮಾಡಿಕೊಳ್ಳಲು ಸುಲಭ.

ಪ್ರಸಿದ್ಧ ಕೋಟೆಗಳು ಹಾಗೂ ಅರಮನೆಗಳು, ಇತಿಹಾಸ ಪ್ರಸಿದ್ಧ ನಗರಗಳು, ನಿಸರ್ಗದ ಸೊಬಗು ಪರಿಚಯಿಸುವ ರಮಣೀಯ ತಾಣಗಳು, ಭೇಟಿ ನೀಡಲೇಬೇಕಾದ ಸ್ಥಳಗಳು, ವಸ್ತುಸಂಗ್ರಹಾಲಯಗಳು, ಪಾರಂಪರಿಕ, ಐಷಾರಾಮ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರವಾಸಿ ತಾಣಗಳನ್ನು ವಿಂಗಡಿಸಿ ವಿವರ ನೀಡಲಾಗಿದೆ.

ದೇಶದ ವಿವಿಧ ಸ್ಥಳಗಳಲ್ಲಿ ಆಯಾ ಕಾಲಕ್ಕೆ ನಡೆಯುವ ಉತ್ಸವಗಳು, ಮೇಳಗಳ ಕುರಿತ ಮಾಹಿತಿ ಇಲ್ಲಿ ದೊರಕುತ್ತದೆ. ಇದಕ್ಕೆ ಹೊಂದಿಕೆಯಾಗುವಂತೆ ಸುತ್ತಾಟ ನಿಗದಿಪಡಿಸಿಕೊಂಡೆ, ಪ್ರವಾಸದ ಅನುಭವಗಳು ಮತ್ತಷ್ಟು ದಟ್ಟ ಹಾಗೂ ಶ್ರೀಮಂತವಾಗುವುದು ಖಚಿತ.

ADVERTISEMENT

ಬೆರಗಿನ ಭಾರತ ದರ್ಶನ : ದೆಹಲಿಯಲ್ಲಿನ ಪ್ರಮುಖ ಹೋಟೆಲ್‌ಗಳು ಹಾಗೂ ಅವುಗಳ ವೆಬ್‌ಸೈಟ್ ವಿವರ ಇಲ್ಲಿ ಸಿಗುತ್ತದೆ. ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಿಂದ ಈ ಹೋಟೆಲ್‌ಗಳು ಎಷ್ಟು ದೂರದಲ್ಲಿವೆ ಎನ್ನುವ ಮಾಹಿತಿಯೂ ದೊರಕುತ್ತದೆ.: ರಾಧಿಕಾ ಎನ್. ಆರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.