ADVERTISEMENT

ನಾಯಕತ್ವಕ್ಕೆ ಹೊಸ ಸ್ಪರ್ಶಲೀಡ್ ಪಯಣ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 19:30 IST
Last Updated 18 ಡಿಸೆಂಬರ್ 2019, 19:30 IST
ಲೀಡ್ ಪಯಣ
ಲೀಡ್ ಪಯಣ   

ನಿಮಗೆ ಉದ್ಯಮ ಆರಂಭಿಸಬೇಕೆಂಬ ಗುರಿ ಇದೆಯೇ. ಉದ್ಯಮದ ಜತೆಗೆ, ಗ್ರಾಮೀಣ ಸಂಸ್ಕೃತಿ, ಸಾವಯವ ಕೃಷಿಯ ಪಾಠ ಕಲಿಯುವ ಆಸಕ್ತಿ ಇದೆಯೇ. ಹಾಗಿದ್ದರೆ ಬನ್ನಿ, ನಮ್ಮ ’ಲೀಡ್‌ ಪಯಣ’ದಲ್ಲಿ ಜತೆಯಾಗಿ. ಈ ಪಯಣದಲ್ಲಿ ಹಲವಾರು ತಜ್ಞರನ್ನು ಭೇಟಿಯಾಗಬಹುದು. ನಿಮ್ಮಲ್ಲಿರುವ ನೂರಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು.

ಪ್ರವಾಸ, ಪ್ರಯಾಣ ಎನ್ನುವುದು ಮೋಜು–ಮಸ್ತಿ, ಖುಷಿಗಾಗಿ ಮಾಡುವಂಥದ್ದು. ಆದರೆ, ‘ಲೀಡ್‌ ಪಯಣ’ದಲ್ಲಿ ಪ್ರವಾಸದ ಜತೆಗೇ ನಾಯಕತ್ವದ ಗುಣ ಬೆಳೆಸಿಕೊಳ್ಳುವ ವಿಧಾನವನ್ನು ಅರಿಯುವುದು. ಅದಕ್ಕಾಗಿ ತಂತ್ರಜ್ಞಾನ, ಸಾವಯವ ಕೃಷಿ, ಹಾಡು, ನೃತ್ಯ, ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಭೇಟಿಯಾಗುವುದು. ತಮ್ಮಲ್ಲಿರುವ ಹತ್ತಾರು ಪ್ರಶ್ನೆಗಳಿಗೆ ಅವರಿಂದ ಉತ್ತರ ಕಂಡುಕೊಳ್ಳುವುದು.

ಇಂಥದ್ದೊಂದು ಅಪರೂಪದ ಕಾರ್ಯಕ್ರಮ ಆಯೋಜಿಸಿರುವುದು ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್‌. ಈ ಸಂಸ್ಥೆಯ ಪ್ರತಿ ವರ್ಷ ಲೀಡರ್ಸ್‌ ಎಕ್ಸಲ್‍ ರೇಟಿಂಗ್ ಡೆವಲೆಪ್‌ಮೆಂಟ್‌ ಪ್ರೋಗ್ರಾಮ್ ಅಡಿ 14 ದಿನಗಳ ‘ಲೀಡ್ ಪ್ರಯಾಣ– ಚಕ್ರಗಳ ಮೇಲೆ ನಾಯಕತ್ವದ ಪಯಣ’ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತದೆ. 18 ರಿಂದ 26 ವರ್ಷದ, 120 ವಿದ್ಯಾರ್ಥಿಗಳಿಗೆ ಇದರಲ್ಲಿ ಭಾಗವಹಿಸಲು ಅವಕಾಶ.

ADVERTISEMENT

ಪ್ರವಾಸದಲ್ಲಿ ರಾಜ್ಯದ ಉನ್ನತ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡುವುದು. ನಾಯಕತ್ವ, ಉದ್ಯಮಶೀಲತೆ, ಸಂವಹನ ಕೌಶಲವನ್ನು ಪ್ರಾಯೋಗಿಕವಾಗಿ ಅರಿಯುವುದು. ಇನ್ಫೋಸಿಸ್‌ನ ನಾರಾಯಣ ಮೂರ್ತಿ, ಗುರುರಾಜ ದೇಶಪಾಂಡೆ, ವೀರೇಂದ್ರ ಹೆಗ್ಗಡೆಯವರಂತಹ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯಶಸ್ವಿ ಉದ್ಯಮಿ ಮತ್ತು ಸಾಧಕರನ್ನು ಭೇಟಿಯಾಗಬಹುದು.

ಪಯಣದಲ್ಲಿ 120 ಜನ

1800 ಕಿಲೋಮೀಟರ್‌ಗಳ ನಿರಂತರ ಪಯಣ, ಬೆಳಗಾವಿಯ ವಿ.ಟಿಯುನಿಂದ ಆರಂಭವಾಗುತ್ತದೆ. ನಂತರ ಬೆಳಗಾವಿ, ಬೆಂಗಳೂರು, ಮೈಸೂರು, ಧರ್ಮಸ್ಥಳ, ಮಣಿಪಾಲ, ಹುಬ್ಬಳ್ಳಿ –ಧಾರವಾಡ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗುವುದು. ಅಭ್ಯರ್ಥಿಗಳು ಪ್ರತಿ ದಿನ ಹೊಸ ಹೊಸ ಆಸೆ, ಆಕಾಂಕ್ಷೆ, ಸವಾಲುಗಳಿಗೆ ಉತ್ತರ ಕಂಡುಕೊಳ್ಳಬಹುದು. ಯಶಸ್ವಿ ಉದ್ಯಮ ಮತ್ತು ಜೀವನ ಶೈಲಿಯ ನಿರ್ವಹಣೆಯ ಕುರಿತು ರೋಲ್ ಮಾಡಲ್‍ಗಳೊಂದಿಗೆ ಸಂವಾದದಲ್ಲಿ ಭಾಗವಹಿಸಬಹುದು.

ಅಂತರರಾಷ್ಟ್ರೀಯ ಸಮ್ಮೇಳನ
ಜನವರಿ 19, 2020ರಂದು ಆರಂಭವಾಗುವ ಈ ಪಯಣ, ಫೆಬ್ರುವರಿ 3 ರಂದು ಹುಬ್ಬಳ್ಳಿಯಲ್ಲಿ ನಡೆಯುವ ಅಂತರರಾಷ್ಟ್ರೀಯ ಯುವ ಸಮ್ಮೇಳನದಂದು ಪೂರ್ಣಗೊಳ್ಳಲಿದೆ. ಆ ಸಮ್ಮೇಳನದಲ್ಲಿ ನಡೆಯುವ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಯುವ ಉತ್ಸಾಹಿ ಯುವಕರಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವಿರುತ್ತದೆ.

ನಿಮಗೂ ನಾಯಕತ್ವದ ಈ ಪಯಣದ ಬಗ್ಗೆ ತಿಳಿಯಲು ಆಸಕ್ತಿ ಇದ್ದರೆ, www.leadcampus.org ವೆಬ್‍ಸೈಟ್‌ಗೆ ಲಾಗ್‌ ಆನ್‌ ಆಗಿ, ಡಿಸೆಂಬರ್ 20, 2019 ರೊಳಗಾಗಿ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗೆ ಅಭಿನಂದನ ಮೊಬೈಲ್ 9900053763, 9686654748 ಸಂಖ್ಯೆಗೆ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.