ADVERTISEMENT

ಸ್ಮಾರ್ಟ್‌ ಪ್ರವಾಸಕ್ಕೆ ಆ್ಯಪ್ ಸಾಥ್‌

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 19:45 IST
Last Updated 28 ಆಗಸ್ಟ್ 2019, 19:45 IST
   

ಲೈನ್‌ (line)

ಇದು ಜಪಾನ್‌ನ ಮೆಸೇಜಿಂಗ್‌ ಅಪ್ಲಿಕೇಷನ್‌. ಜಪಾನ್‌, ತೈವಾನ್‌, ಥಾಯ್ಲೆಂಡ್ ಮತ್ತು ಇಂಡೋನೇಷ್ಯಾದಲ್ಲಿ 1.64 ಕೋಟಿ ಬಳಕೆದಾರರನ್ನು ಹೊಂದಿದೆ.

ಇದು ಲೈನ್ ಪೇ ಎಂಬ ಹಣ ಪಾವತಿ ವ್ಯವಸ್ಥೆಯನ್ನು ಹೊಂದಿದ್ದರೂ ಸ್ಥಳೀಯ ಫೋನ್ ಸಂಖ್ಯೆ ಇಲ್ಲದೆ ಇದನ್ನು ಬಳಸಲು ಸಾಧ್ಯವಾಗುವುದಿಲ್ಲ.
ಆದರೂ ಇದಕ್ಕೊಂದು ಪರಿಹಾರವಿದೆ. ನೀವು WeChat Pay ಯನ್ನು ಹೊಂದಿದ್ದರೆ ಎಲ್ಲಾ ಲೈನ್ ಪೇ ಪಾವತಿ ವ್ಯವಸ್ಥೆ ಹೊಂದಿರುವ ಮಾರಾಟಗಾರರು ವಿ ಚಾಟ್‌ ಪೇ ಮೂಲಕ ಹಣ ಪಡೆಯಲು ಸಮ್ಮತಿಸುತ್ತಾರೆ. ಏಕೆಂದರೆ ವಿ ಚಾಟ್‌ ಪೇ ಮತ್ತು ಲೈನ್‌ ಪೇ ಕಂಪನಿಗಳ ನಡುವೆ ಮೈತ್ರಿ ಇದೆ. ಹೀಗಾಗಿ ಈ ಅಪ್ಲಿಕೇಷನ್‌ಗಳು ತಮ್ಮ ಅಪ್ಲಿಕೇಷನ್‌ಗಳ ಮೂಲಕ ಪಾವತಿ ವ್ಯವಸ್ಥೆಗೆ ಸಮ್ಮತಿಸುತ್ತವೆ.

ADVERTISEMENT

‘ಲೈನ್‌’ನ ಪ್ರಯಾಣಿಕರಿಗಾಗಿ ಲೈನ್ ಮ್ಯಾನ್ ಥಾಯ್ಲೆಂಡ್‌ನಲ್ಲಿ ಲಭ್ಯವಿದೆ. ಸ್ವತಃ ‘ದೈನಂದಿನ ಜೀವನ ಸಹಾಯಕ ಅಪ್ಲಿಕೇಶನ್’ ಎಂದು ಕರೆದುಕೊಳ್ಳುವ ಈ ವೈಶಿಷ್ಟ್ಯವು ಬಳಕೆದಾರರಿಗೆ ರೆಸ್ಟೊರೆಂಟ್‌ ಮತ್ತು ಸಮೀಪದ ಮಳಿಗೆಗಳು, ಟ್ಯಾಕ್ಸಿ ಸೌಲಭ್ಯ ಪಡೆಯಲು, ಪಾರ್ಸೆಲ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಹಾಯ ಮಾಡುತ್ತದೆ. ಯಾವುದೇ ಸೇವೆ ಬಗ್ಗೆ ಅಪ್ಲಿಕೇಶನ್‌ನಲ್ಲಿ ವಿನಂತಿ ಮಾಡಿದರೂ, ಸೇವೆಯನ್ನು ನಗದು ರೂಪದಲ್ಲಿ ಪಾವತಿಸಬಹುದು.

ಕಾಕಾವೊಟಾಕ್

ಕಾಕಾವೊಟಾಕ್ (KakaoTalk) ಮತ್ತು ಲೈನ್ ಅಪ್ಲಿಕೇಷನ್‌ಗಳ ನಡುವೆ ಅನೇಕ ಹೋಲಿಕೆಗಳಿವೆ. ಏಕೆಂದರೆ ಪ್ರತಿಯೊಂದೂ ವ್ಯಾಪಕ ಶ್ರೇಣಿಯ ಎಮೋಜಿಗಳನ್ನು ಹೊಂದಿದ್ದು ಅದು ಬಳಕೆದಾರರ ಗಮನ ಸೆಳೆದಿದೆ. ಈ ಎರಡೂ ಅಪ್ಲಿಕೇಶನ್‌ಗಳು ಯಶಸ್ವಿಯಾಗಿವೆ.

ಫ್ರಾಂಚೈಸಿ ಮಳಿಗೆಗಳು ತಮ್ಮ ಎಮೋಜಿ ಅಕ್ಷರಗಳಿಂದ ಲಾಭ ಪಡೆಯುತ್ತವೆ. ಆದಾಗ್ಯೂ, ಕಾಕಾವೊಟಾಕ್ ದಕ್ಷಿಣ ಕೊರಿಯಾಕ್ಕೆ ಪ್ರಯಾಣಿಸುವವರಿಗೆ ವಿಶೇಷವಾಗಿ ಸಹಾಯಕವಾಗುವ ಎರಡು ಅಪ್ಲಿಕೇಶನ್‌ಗಳನ್ನು ಹೊಂದಿದೆ. ಅವು ಕಾಕಾವೊಮ್ಯಾಪ್ ಮತ್ತು ಕಾಕಾವ್ ಟಿ.

ಕಾಕಾವೊಮ್ಯಾಪ್ ಒಂದು ನಕ್ಷೆಗಳ ಅಪ್ಲಿಕೇಶನ್‌ ಆಗಿದ್ದು (ಗೂಗಲ್‌ ಮ್ಯಾಪ್‌ ರೀತಿ) ಅದು ಸ್ಥಳಗಳನ್ನು ಹುಡುಕಲು ಮತ್ತು ನಡಿಗೆಯ ಮಾರ್ಗ, ಕಾರು, ಬೈಕು ಮತ್ತು ಸಾರ್ವಜನಿಕ ಸಾರಿಗೆಯ ಮೂಲಕ ಸಂಚರಿಸಲು ಬೇಕಾಗುವಂತೆ ದಾರಿ ತೋರಿಸುತ್ತದೆ.

ದಕ್ಷಿಣ ಕೊರಿಯಾದಲ್ಲಿ ಸೀಮಿತ ಪರವಾನಗಿಯಲ್ಲಿ ಕಾರ್ಯನಿರ್ವಹಿಸುವ ಗೂಗಲ್ ನಕ್ಷೆಗಳ ಮೇಲೆ ಈ ಅಪ್ಲಿಕೇಷನ್‌ ಹಿಡಿತ ಸಾಧಿಸಿದೆ.

ಪ್ರಯಾಣ ಅವಧಿಯ ನೈಜ ಸಮಯದ (ರಿಯಲ್‌ ಟೈಮ್‌) ಮಾಹಿತಿ, ಸಬ್‌ವೇ, ಬಸ್‌ ನಿಲ್ದಾಣಗಳು, ಸಮೀಪದಲ್ಲಿರುವ ಸ್ನಾನಗೃಹ, ಶೌಚಾಲಯಗಳು), ಟ್ಯಾಕ್ಸಿ ಸವಾರಿ ಬಗ್ಗೆ ಮಾಹಿತಿ ಕೊಡುತ್ತದೆ.

ಚಾಲನಾ ನಿರ್ದೇಶನಗಳನ್ನು ಪಡೆಯಲು ಮತ್ತು ಪಾರ್ಕಿಂಗ್ ಸ್ಥಳಗಳನ್ನು ಹುಡುಕಲು ಕಾಕಾವೊ –ಟಿ ಅನ್ನು ಸಹ ಬಳಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.