
ಅತುಲಾ ಚಂದ್ರಶೇಖರ ಭರತನಾಟ್ಯ ರಂಗಪ್ರವೇಶ ಶುಕ್ರವಾರ ನಡೆಯಲಿದೆ.
ಚಂದ್ರಶೇಖರ ಮತ್ತು ಎಚ್.ಎನ್. ಸುಮತಿ ಅವರ ಮಗಳಾದ ಅತುಲಾ 4ನೇ ವರ್ಷದಿಂದಲೇ ಭರತನಾಟ್ಯದ ಗೀಳು ಹತ್ತಿಸಿಕೊಂಡವಳು.
ಹನುಮಂತನಗರದ ಎನ್‌ಇಟಿ ಪಬ್ಲಿಕ್ ಶಾಲೆಯಲ್ಲಿ ನಾಲ್ಕನೇ ತರಗತಿ ಅಭ್ಯಾಸ ಮಾಡುತ್ತಿರುವ ಈಕೆ ಗುರು ಧರಣಿ ಟಿ. ಕಶ್ಯಪ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ.
2010ರಲ್ಲಿ ಸಮಷ್ಟಿ ಫೌಂಡೇಷನ್ ಆಯೋಜಿಸಿದ್ದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಸೈ ಎನಿಸಿಕೊಂಡಿದ್ದಾಳೆ. ನಟುವಾಂಗ: ಧರಣಿ ಟಿ. ಕಶ್ಯಪ್, ಗಾಯನ: ರಮಾ ಜಗನ್ನಾಥ್, ಮೃದಂಗ: ಆರ್. ರಮೇಶ್, ಕೊಳಲು: ಎಚ್.ಎಸ್. ವೇಣುಗೋಪಾಲ್, ವಯೊಲಿನ್: ಎಸ್. ನಟರಾಜ ಮೂರ್ತಿ, ರಿದಂ ಪ್ಯಾಡ್‌ನಲ್ಲಿ ಡಿ.ವಿ. ಪ್ರಸನ್ನ ಕುಮಾರ್ ಸಾಥ್ ನೀಡಲಿದ್ದಾರೆ.
ಅತಿಥಿಗಳು: ಸುನಂದಾ ದೇವಿ, ಡಾ.ಎಂ. ಸೂರ್ಯಪ್ರಸಾದ್, ಭಾವಿಕಟ್ಟಿ.
ಸ್ಥಳ: ಎಡಿಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಎದುರು, ಜೆ.ಸಿ.ರಸ್ತೆ. ಸಂಜೆ 6.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.