ADVERTISEMENT

ಅನುಷ್ಕಾ ಕತ್ರೀನಾ ಸ್ನೇಹ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2017, 19:30 IST
Last Updated 18 ಆಗಸ್ಟ್ 2017, 19:30 IST
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ   

ಸಮಕಾಲೀನ ನಟಿಯರು ಗೆಳೆಯರಾಗಲಾರರು ಎಂಬುದು ಸಿನಿಮಾ ರಂಗದಲ್ಲಿ ಚಾಲ್ತಿಯಲ್ಲಿರುವ ಮಾತು. ಆದರೆ ಅದನ್ನು ಸುಳ್ಳು ಮಾಡಿದ್ದಾರೆ ಬಾಲಿವುಡ್‌ ನಟಿಯರಾದ ಅನುಷ್ಕಾ ಶೆಟ್ಟಿ ಮತ್ತು ಕತ್ರೀನಾ ಕೈಫ್.

ಆನಂದ್ ಎಲ್.ರೈ ನಿರ್ದೇಶನದ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿರುವ ಈ ನಟಿಯರು ಆತ್ಮೀಯತೆಯಿಂದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆರಂತೆ. ಸೆಟ್‌ನಲ್ಲಿ ತುಂಟಾಟ ಮಾಡುತ್ತಾ ಜನುಮದ ಗೆಳತಿಯರಂತೆ ವರ್ತಿಸುತ್ತಿದ್ದಾರಂತೆ.

‘ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ ನಿರ್ಮಿಸುವುದು ಎಲ್ಲರ ಜವಾಬ್ದಾರಿ. ನಾನು ಮತ್ತು ಅನುಷ್ಕಾ ಅದನ್ನೇ ಮಾಡುತ್ತಿದ್ದೇವೆ. ನಾವಿಬ್ಬರೂ ಮುಂಚಿನಿಂದಲೂ ಆತ್ಮೀಯ ಗೆಳೆಯರು. ಸೆಟ್‌ನಲ್ಲೂ ಗೆಳೆತನ ಮುಂದುವರಿದಿದೆ ಅಷ್ಟೆ’ ಎಂದಿದ್ದಾರೆ ಕತ್ರೀನಾ.

ADVERTISEMENT

ಇಷ್ಟೇ ಅಲ್ಲ ಅನುಷ್ಕಾ ಅವರ ಸರಳತೆ ಮತ್ತು ಸೌಂದರ್ಯ, ಸಿನಿಮಾ ನಿರ್ಮಾಣ ಸಂಸ್ಥೆ ಕಟ್ಟಿರುವ ಅವರ ಧೈರ್ಯವನ್ನು ಹಾಡಿ ಹೊಗಳಿದ್ದಾರೆ ಕ್ಯಾತ್‌.

ಅನುಷ್ಕಾ ಕೂಡ ಕತ್ರೀನಾ ಅವರ ಪ್ರತಿಭೆಯ ಬಗ್ಗೆ ಉತ್ತಮ ಮಾತನಾಡಿದ್ದು, ‘ಆಕೆಯೊಂದಿಗಿದ್ದರೆ ‘ಕಂಫರ್ಟ್‌’ ಎನಿಸುತ್ತದೆ’ ಎಂದಿದ್ದಾರೆ.

ಈ ಮುಂಚೆಯೂ ಈ ಇಬ್ಬರೂ ನಟಿಯರು ‘ಜಬ್ ತಕ್ ಹೇ ಜಾನ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಚಿತ್ರದ ನಾಯಕ ಶಾರುಖ್ ಖಾನ್ ಅವರೇ ಆನಂದ್ ಎಲ್.ರೈ ಅವರ ಚಿತ್ರದಲ್ಲಿಯೂ ನಾಯಕರಾಗಿದ್ದಾರೆ. ಅದಿರಲಿ, ಬಾಲಿವುಡ್‌ನಲ್ಲಿ ನಟಿಯರ ಕೋಳಿ ಜಗಳದ ಕುರಿತು ಸುದ್ದಿಗಳನ್ನು ಕೇಳಿ ಓದಿ ಬೇಜಾರು ಮಾಡಿಕೊಂಡಿದ್ದ ಸಿನಿಪ್ರಿಯರ ಮುಖದಲ್ಲಿ ಅನುಷ್ಕಾ–ಕತ್ರೀನಾ ಅವರ ಸ್ನೇಹ ಮಂದಹಾಸ ಮೂಡಿಸಿರುವುದು ಸುಳ್ಳಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.