ಅಬು ವ್ಯಂಗ್ಯ ಜಗತ್ತು ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ: ಖ್ಯಾತ ವ್ಯಂಗ್ಯಚಿತ್ರಕಾರ ದಿ. ಅಬು ಅಬ್ರಹಾಂ ಅವರ ಮೂಲ ವ್ಯಂಗ್ಯ ಚಿತ್ರಗಳ ಪ್ರದರ್ಶನ. ಬ್ರಿಟಿಷ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಮೊಟ್ಟಮೊದಲ ಭಾರತೀಯ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ. ವೃತ್ತಿಯ ಪ್ರಾರಂಭದಲ್ಲಿ 1951 ರಿಂದ 1953ರ ವರೆಗೆ ‘ಶಂಕರ್ಸ್ ವೀಕ್ಲಿ’ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದ ಅವರು 1953 ರಿಂದ 16 ವರ್ಷ ಬ್ರಿಟನ್ನಿನ ‘ದಿ ಅಬ್ಸರ್ವರ್’ ಹಾಗೂ ‘ದಿ ಗಾರ್ಡಿಯನ್’ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದರು.
1969ರಲ್ಲಿ ಭಾರತಕ್ಕೆ ಮರಳಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ವ್ಯಂಗ್ಯಚಿತ್ರಕಾರರಾದರು. ಅವರ ಅನಿಮೇಷನ್ ಚಿತ್ರ ‘ನೋ ಆರ್ಕ್ಸ್’ (1970) ಬ್ರಿಟಿಷ್ ಫಿಲಂ ಇನ್‌ಸ್ಟಿಟ್ಯೂಟ್‌ನ ವಿಶೇಷ ಪ್ರಶಸ್ತಿಗೆ ಪಾತ್ರವಾಗಿತ್ತು. 1972 ರಿಂದ 1978ರ ವರೆಗೆ ರಾಜ್ಯಸಭೆಯ ಸದಸ್ಯರೂ ಆಗಿದ್ದರು.
ಸ್ಥಳ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ಮಿಡ್‌ಫೋರ್ಡ್ ಹೌಸ್, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ (ಬಿಗ್ ಕಿಡ್ಸ್‌ಕೆಂಪ್ ಹತ್ತಿರ). ಸಂಜೆ 4. ಪ್ರದರ್ಶನ ಮಾರ್ಚ್ 12ಕ್ಕೆ ಮುಕ್ತಾಯ. ಮಾಹಿತಿಗೆ: ವಿ.ಜಿ. ನರೇಂದ್ರ 99800 91428.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.