ADVERTISEMENT

ಅಮಿತಾಭ್ ಬಚ್ಚನ್, ರೋನಿತ್‌ ರಾಯ್, ಚಂದ್ರಚೂಡ್ ಸಿಂಗ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 19:30 IST
Last Updated 10 ಅಕ್ಟೋಬರ್ 2017, 19:30 IST
ಅಮಿತಾಭ್ ಬಚ್ಚನ್, ರೋನಿತ್‌ ರಾಯ್, ಚಂದ್ರಚೂಡ್ ಸಿಂಗ್
ಅಮಿತಾಭ್ ಬಚ್ಚನ್, ರೋನಿತ್‌ ರಾಯ್, ಚಂದ್ರಚೂಡ್ ಸಿಂಗ್   

ಅಮಿತಾಭ್ ಬಚ್ಚನ್
‘ಬಾಲಿವುಡ್ ಶೆಹನ್‌ಷಾ’ ಎಂದೇ ಖ್ಯಾತರಾದ ನಟ ಅಮಿತಾಭ್ ಬಚ್ಚನ್ ಅವರ ಹುಟ್ಟುಹಬ್ಬ ಇಂದು (ಜನನ: 11ನೇ ಅಕ್ಟೋಬರ್, 1942). ಅಮಿತಾಭ್ ಹರಿವಂಶ್ ರಾಯ್ ಶ್ರೀವಾತ್ಸವ ಬಚ್ಚನ್ ಇದು ಅವರ ಪೂರ್ಣ ಹೆಸರು.

ಎಪ್ಪತ್ತರ ದಶಕದಲ್ಲಿ ಆ್ಯಂಗ್ರಿ ಯಂಗ್ ಮೆನ್ ಆಗಿ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ಅಮಿತಾಭ್, ಈಗಲೂ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬೇಡಿಕೆ ಉಳಿಸಿಕೊಂಡವರು.

190ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಸಂದಿವೆ. ಕಿರುತೆರೆಯ ಜನಪ್ರಿಯ ಷೋ ’ಕೋನ್ ಬನೇಗಾ ಕರೋಡ್‌ಪತಿ’ಯನ್ನು ನಡೆಸಿಕೊಡುತ್ತಿರುವ ಅಮಿತಾಭ್‌ಗೀಗ 75ರ ಹರೆಯ.

ADVERTISEMENT

ರೋನಿತ್ ರಾಯ್
ಬೆಳ್ಳಿತೆರೆ–ಕಿರುತೆರೆ ಎರಡರಲ್ಲೂ ಜನಪ್ರಿಯರಾದ ನಟ ರೋನಿತ್ ರಾಯ್ ಅವರ ಜನುಮದಿನ ಇಂದು (ಜನನ: 11ನೇ ಅಕ್ಟೋಬರ್, 1965).

ಸಿನಿಮಾಗಳ ಮೂಲಕ ನಟನಾ ವೃತ್ತಿ ಆರಂಭಿಸಿದ ರೋನಿತ್ ರಾಯ್, ಏಕ್ತಾ ಕಪೂರ್ ಅವರ ’ಕ್ಯೂಕಿ ಸಾಂಸ್ ಭೀ ಕಭೀ ಬಹೂ ಥೀ’ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯರಾದರು. ಅಮಿತಾಭ್ ಜನುಮದಿನದಂದೇ ಜನಿಸಿರುವ ರೋನಿತ್‌, ಕಿರುತೆರೆಯ ’ಬಿಗ್ ಬಿ’ ಎಂದೂ ಖ್ಯಾತರಾಗಿದ್ದಾರೆ.

ಚಂದ್ರಚೂಡ್‌ ಸಿಂಗ್
ನಟ ಚಂದ್ರಚೂಡ್ ಸಿಂಗ್ ಅವರ ಹುಟ್ಟುಹಬ್ಬ ಇಂದು (ಜನನ: ಅಕ್ಟೋಬರ್ 11, 1968).

‘ತೇರೆ ಮೇರ್ ಸಪ್ನೆ’ ಮೂಲಕ ಬಾಲಿವುಡ್ ಪ್ರವೇಶಿಸಿದ ಚಂದ್ರಚೂಡ್ ’ಮಾಚೀಸ್’ ಚಿತ್ರದಲ್ಲಿ ನಟಿ ತಬುಗೆ ಸರಿಸಾಟಿಯಾಗಿ ನಟಿಸಿ ಸೈ ಅನಿಸಿಕೊಂಡವರು. ಈ ಚಿತ್ರದ ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿಗೂ ಭಾಜನರಾದರು. ನಟಿಸಿದ್ದು ಬೆರಳೆಣಿಕೆಯಷ್ಟು ಚಿತ್ರಗಳಾದರೂ ಪ್ರೇಕ್ಷಕರ ಮನದಲ್ಲಿ ನೆನಪಿನಲ್ಲಿ ಉಳಿಯುವಂಥ ಪಾತ್ರಗಳನ್ನು ಮಾಡಿದವರು ಚಂದ್ರಚೂಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.