ADVERTISEMENT

ಅಲೆಕ್ಸ್‌ ಜಾದೂ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
ಜಾದೂಗಾರ ಅಲೆಕ್ಸ್‌
ಜಾದೂಗಾರ ಅಲೆಕ್ಸ್‌   

ರಷ್ಯಾದ ಪ್ರಸಿದ್ಧ ಜಾದೂಗಾರ ಅಲೆಕ್ಸ್ ಬ್ಲ್ಯಾಕ್‌ ಅವರ ಜಾದೂ ಪ್ರದರ್ಶನ ಶನಿವಾರ ಮತ್ತು ಭಾನುವಾರ ನಗರದ ಪುರಭವನದಲ್ಲಿ ನಡೆಯಲಿದೆ. ಎರಡು ದಿನ ತಮ್ಮ ವಿಶಿಷ್ಟ ಬಗೆಯ ಜಾದುಗಳಿಂದ ಅವರು ನಗರದ ಜನರನ್ನು ರಂಜಿಸಲಿದ್ದಾರೆ.

ತಮ್ಮ ಕೈಚಳಕದೊಂದಿಗೆ ಎಲ್ಲರನ್ನೂ ಸಮ್ಮೋಹನಗೊಳಿಸಿ ನಿಬ್ಬೆರಗಾಗುವಂತೆ ಮಾಡುವ ಅಲೆಕ್ಸ್‌ ಅವರ ಜಾದೂ ಕಣಜದಲ್ಲಿ ನೂರಾರು ಬಗೆಯ ಜಾದೂ ತಂತ್ರಗಳಿವೆ. 3ಡಿ ಮ್ಯಾಪಿಂಗ್ ಮ್ಯಾಜಿಕ್ ಷೋ, ಕಣ್ಣು ರೆಪ್ಪೆ ಬಡಿಯದಂತೆ ನಿಬ್ಬೆರರಾಗುವಂತೆ ಮಾಡುವ ಮ್ಯಾಜಿಕ್ ತಂತ್ರಗಳು, ಆರ್ಕೋಬ್ಯಾಟಿಕ್, ಜಗ್ಲಿಂಗ್, ಕಾಮಿಡಿ ಮ್ಯಾಜಿಕ್, ಮೈಕ್ರೊ ಮ್ಯಾಜಿಕ್ ಸೇರಿದಂತೆ ಹಲವಾರು ಮ್ಯಾಜಿಕ್ ಟ್ರಿಕ್ಸ್‌ಗಳೊಂದಿಗೆ ಪ್ರೇಕ್ಷಕರನ್ನು ಮ್ಯಾಜಿಕ್‌ ಲೋಕಕ್ಕೆ ಕೊಂಡೊಯ್ಯಲಿದ್ದಾರೆ.

ಖ್ಯಾತ ಜಾದೂಗಾರ ನಿರ್ದೇಶಕ, ಡಾನ್ಸರ್‌ ಕೂಡ ಆಗಿರುವ ರಷ್ಯಾದ ಈ ಮಾಂತ್ರಿಕ ಹುಟ್ಟಿದ್ದು ರಷ್ಯಾದ ಸರಟೊವ್‌ನಲ್ಲಿ 1989ರ ಜೂನ್‌ 29ರಲ್ಲಿ.  ಸರ್ಕಸ್ ಕಾಲೇಜಿನಲ್ಲಿ ಪದವಿ ಪಡೆದಿರುವ ಅವರು, ತಮ್ಮ 13 ವರ್ಷಗಳ ವೃತ್ತಿ ಜೀವನದಲ್ಲಿ ಅಮೆರಿಕ, ಚೀನಾ, ರಷ್ಯಾ, ಮೆಕ್ಸಿಕೊ, ಜರ್ಮನಿ, ಪೋಲೆಂಡ್, ಟರ್ಕಿ, ದುಬೈ, ಕುವೈತ್ ಸೇರಿದಂತೆ ಹಲವಾರು ದೇಶಗಳಲ್ಲಿ ಜಾದೂ ಪ್ರದರ್ಶನ ನೀಡಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ.

ADVERTISEMENT

2008ರಲ್ಲಿ ರಷ್ಯನ್ ಡೆಲ್ಫಿ ಸರ್ಕಸ್ ಗೇಮ್‌ನಲ್ಲಿ ಅಲೆಕ್ಸ್ ಅವರ ಜಾದೂ ತಂಡ ಪ್ರತಿಷ್ಠಿತ ಪ್ರಶಸ್ತಿ ಪಡೆದಿದೆ. 2009ರಲ್ಲಿ ಪೋಲೆಂಡ್‍ನಲ್ಲಿ ಬಹುಮಾನ ಪಡೆದಿರುವ ಅವರ ತಂಡ, 2012ರಿಂದ 17ರವರೆಗೆ ಸರಟೊವ್ ನಗರದಲ್ಲಿ ನಡೆದ ಜಾದೂ ಪ್ರದರ್ಶನದಲ್ಲಿ ಅತ್ಯುತ್ತಮ ಜಾದೂ ತಂಡ ಎಂಬ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ.

ಮ್ಯಾಜಿಕ್‌ ಪ್ರದರ್ಶನ: ಶನಿವಾರ ಮತ್ತು ಭಾನುವಾರ ತಲಾ ಮೂರು ಪ್ರದರ್ಶನಗಳು ನಡೆಯಲಿವೆ. ಮಧ್ಯಾಹ್ನ 1.30, ಸಂಜೆ 4.30 ಮತ್ತು ರಾತ್ರಿ 7.30 ಕ್ಕೆ ಪ್ರದರ್ಶನಗಳಿರಲಿವೆ. ಟಿಕೆಟ್‍ಗಳನ್ನು ಬುಕ್‍ ಮೈಷೋನಲ್ಲಿ ಖರೀದಿಸಬಹುದು. ಸಂಪರ್ಕ: 91484 46679

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.