ADVERTISEMENT

ಅವಿಸ್ಮೃತಿ ನೃತ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 23 ಮೇ 2014, 19:30 IST
Last Updated 23 ಮೇ 2014, 19:30 IST
ಅವಿಸ್ಮೃತಿ  ನೃತ್ಯೋತ್ಸವ
ಅವಿಸ್ಮೃತಿ ನೃತ್ಯೋತ್ಸವ   

ಜುಪಿಟರ್ ಆರ್ಟ್ ಸ್ಕೂಲ್ ಸಂಸ್ಥೆಯು ಇತ್ತೀಚೆಗೆ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಅವಿಸ್ಮೃತಿ ನೃತ್ಯೋತ್ಸವವನ್ನು ಹಮ್ಮಿಕೊಂಡಿತ್ತು.

ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಡಾ. ಸಿ ಸೋಮಶೇಖರ, ಪ್ರೊ.ಎಂ.ವಿ. ಸುಬ್ರಹ್ಮಣ್ಯ, ಗುರು ಯಾಮಿನಿ ಮುತ್ತಣ್ಣ ಮತ್ತು ಯಮುನಾ ಶ್ರೀನಿಧಿ ಅವರು ಉತ್ಸವವನ್ನು ಉದ್ಘಾಟಿಸಿದರು.

ನಾದಾನಂದ ಕೃಷ್ಣಕುಮಾರ್ ಮತ್ತು ರಶ್ಮಿ ಹರಿಪ್ರಸಾದ್ ಅವರ ನೃತ್ಯದಿಂದ ಕಾರ್ಯಕ್ರಮ ಆರಂಭಗೊಂಡಿತು. ನಂತರ ಶೇಖರ್ ರಾಜೇಂದ್ರನ್, ಸುಶನ್ವ ಪ್ರಕಾಶ್ ಮತ್ತು ರೂಪೇಶ್ ಅವರ ನೃತ್ಯ ಪ್ರದರ್ಶನ ನಡೆಯಿತು. ನಿಧಾಂಗ್ ಮತ್ತು ಕಾರ್ತಿಕ್, ಕಥಕ್ ನೃತ್ಯ ಪ್ರದರ್ಶಿಸಿ ರಂಜಿಸಿದರೆ, ಶರ್ಮಿಳಾ ಮುಖರ್ಜಿ ನೇತೃತ್ವದ ಸಂಜಲಿ ಒಡಿಸ್ಸಿ ತಂಡದ ಮಾಯಾ ಕೃಷ್ಣಮೂರ್ತಿ ಹಾಗೂ ಅಭಯಲಕ್ಷ್ಮಿ ಅವರು ಒಡಿಸ್ಸಿ ನೃತ್ಯ ಪ್ರದರ್ಶಿಸಿದರು.  z

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.