ADVERTISEMENT

ಆಕಾಂಕ್ಷಾ ಉಮೇಶ್ ರಂಗಪ್ರವೇಶ ಇಂದು

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST
ಆಕಾಂಕ್ಷಾ
ಆಕಾಂಕ್ಷಾ   

ನಿನಾದಾಲಯ ಕಲಾ ಸಂಸ್ಥೆಯು ಜೆ.ಸಿ.ರಸ್ತೆ ಬಳಿ ಇರುವ ಎಡಿಎ ರಂಗಮಂದಿರದಲ್ಲಿ ಶುಕ್ರವಾರ ಸಂಜೆ 6ಕ್ಕೆ ಆಯೋಜಿಸಿರುವ ‘ನಾಟ್ಯಸಂಧ್ಯಾ’ ಕಾರ್ಯಕ್ರಮದಲ್ಲಿ, ಚೈತ್ರಾ ಆರ್. ಜಗದೀಶ್ ಅವರ ಶಿಷ್ಯೆ ಆಕಾಂಕ್ಷಾ ಉಮೇಶ್ ರಂಗಪ್ರವೇಶ ಮಾಡಲಿದ್ದಾರೆ.

ಅತಿಥಿಗಳಾಗಿ ವಿದ್ವಾನ್ ಸತ್ಯನಾರಾಯಣ ರಾಜು, ಸಂಗೀತ ಭಾರತಿ ಕಲಾ ಸಂಸ್ಥೆಯ ನಿರ್ದೇಶಕಿ ಪದ್ಮಾ ಹೇಮಂತ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಿವೃತ್ತ ಡಿಎಸ್ಪಿ ವಿ.ಪಿ.ಎಂ.ಸ್ವಾಮಿ, ಸಂಗೀತ ನಿರ್ದೇಶಕ ಬಿ.ಆರ್.ಹೇಮಂತ್ ಇರಲಿದ್ದಾರೆ.

ಆಕಾಂಕ್ಷಾ ಅವರ ನೃತ್ಯಕ್ಕೆ ಚೈತ್ರಾ ಆರ್. ಜಗದೀಶ ಅವರ ನಟುವಾಂಗ, ವಸುಧಾ ಬಾಲಕೃಷ್ಣ ಅವರ ಗಾಯನ, ಲಿಂಗರಾಜು ಅವರ ಮೃದಂಗ ಹಾಗೂ ಕಾರ್ತಿಕ್ ಸಾತವಳ್ಳಿ ಅವರ ಕೊಳಲು ವಾದನ ಸಹಕಾರ ಇರಲಿದೆ.

ADVERTISEMENT

ವಿದುಷಿ ಚೈತ್ರಾ ಆರ್. ಜಗದೀಶ ಅವರು ದೇಶದ ಪ್ರಖ್ಯಾತ ನಾಟ್ಯ ಗುರು ಮತ್ತು ನೃತ್ಯನಿರ್ದೇಶಕರಾದ ವಿದ್ವಾನ್ ಸತ್ಯನಾರಾಯಣರಾಜು ಅವರ ಶಿಷ್ಯೆ. ತಮ್ಮ ಆರಂಭಿಕ ನಾಟ್ಯ ಶಿಕ್ಷಣವನ್ನು ಸಂಗೀತಾ ಮತ್ತು ಸಿದ್ಧರಾಜು ಅವರ ಮಾರ್ಗದರ್ಶನ ಮತ್ತು  ಕೆ.ಶಿವರಾವ್ ಅವರ ಮಾರ್ಗದರ್ಶನದಲ್ಲಿ ಒಳ್ಳೆಯ ನೃತ್ಯಗಾರ್ತಿಯಾಗಿದ್ದಾರೆ.

ಆಕಾಂಕ್ಷಾ ಉಮೇಶ್ ಉತ್ಸಾಹಿ, ವಿಧೇಯ ಮತ್ತು ಭಾವಪೂರ್ಣ ಕಲಾವಿದೆ. ಕಲಾವಿದರ ಕುಟುಂಬದಿಂದ ಬಂದ ಅವರು, ಪ್ರಸಿದ್ಧ ರಂಗಕರ್ಮಿ ವೈ. ಎಸ್.ಗುರುಮೂರ್ತಿ ಅವರ ಮೊಮ್ಮಗಳು. 6 ವರ್ಷ ಇದ್ದಾಗಲೇ ನೃತ್ಯಾಭ್ಯಾಸ ಆರಂಭಿಸಿ, ಗುರು ಚೈತ್ರಾ ಆರ್.ಜಗದೀಶ ಅವರ ಮಾರ್ಗದರ್ಶನದಲ್ಲಿ 7ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವೇದಿಕೆ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದಳು.

ಹತ್ತು ವರ್ಷಗಳಲ್ಲಿ ಶ್ರದ್ಧೆ ಹಾಗೂ ಉತ್ಸಾಹದಿಂದ ನೃತ್ಯಾಭ್ಯಾಸ ಮಾಡಿಕೊಂಡು ಬಂದಿರುವ ಆಕಾಂಕ್ಷಾಳ ಉತ್ಸಾಹ ಮತ್ತಷ್ಟು ಹೆಚ್ಚುತ್ತಿದೆ. 8ನೇ ಎಂಟನೆಯ ವಯಸ್ಸಿನಲ್ಲಿಯೇ ಛತ್ತಿಸ್‌ಗಡದಲ್ಲಿ ನಡೆದ ಕೇರಳ ಸಮಾಜಂ ದುರ್ಗ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದಾಳೆ.

ಗುರು ಪದ್ಮಾ ಹೇಮಂತ್ ಅವರ ಮಾರ್ಗದರ್ಶನದಲ್ಲಿ ಸಂಗೀತ ಭಾರತಿ ಕಲಾ ಸಂಸ್ಥೆಯ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾಳೆ. ಆಕಾಂಕ್ಷಾ ಹಲವು ಧಾರವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದು, ನೃತ್ಯ ಮತ್ತು ಕ್ರೀಡೆಗಳಲ್ಲಿ ಸಮನಾದ ಆಸಕ್ತಿ ಹೊಂದಿದ್ದಾಳೆ. ತನ್ನ ಪರಿಶ್ರಮ ಮತ್ತು ಶ್ರದ್ಧೆಯ ಫಲವಾಗಿ ನೃತ್ಯಕ್ಕೆ ಸಂಬಂಧಿಸಿದ ಜೂನಿಯರ್ ಪರೀಕ್ಷೆ ಹಾಗೂ ಗಂಧರ್ವ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ. ನಾಟ್ಯ ಸಂಧ್ಯಾ ಅವಳ ಜೀವನದ ಒಂದು ಪ್ರಮುಖ ಮೈಲಿಗಲ್ಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.