ADVERTISEMENT

ಆಟೊಕ್ರಾಸ್ ಚಾಂಪಿಯನ್‌ಷಿಪ್

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ವಿನ್‌ಸ್ಪೋರ್ಟ್ಸ್,  ಎಫ್‌ಎಂಎಸ್‌ಸಿಐ (ಫೆಡರೇಷನ್ ಆಫ್ ಮೋಟರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ), ಇಂಡಿಯನ್ ನ್ಯಾಷನಲ್ ಆಟೊಕ್ರಾಸ್ ಚಾಂಪಿಯನ್‌ಷಿಪ್ ಶನಿವಾರ ಮತ್ತು ಭಾನುವಾರ (ಏ.28 ಮತ್ತು 29) ಪ್ರಥಮ ಆವೃತ್ತಿಯ ರಾಷ್ಟ್ರೀಯ `ಆಟೊಕ್ರಾಸ್ ಚಾಂಪಿಯನ್‌ಷಿಪ್~ ಕಾರು ಹಾಗೂ ಬೈಕ್ ರೇಸ್ ಸ್ಪರ್ಧೆ ಆಯೋಜಿಸಿದೆ.

ಹಾರ್ಲೆ ಡೆವಿಡ್‌ಸನ್ ಸೇರಿದಂತೆ ಅನೇಕ ವಿದೇಶಿ ಬೈಕುಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಈಗಾಗಲೇ ನೂರು ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ರೇಸ್‌ಗೆ ಅಣಿಯಾಗುತ್ತಿದ್ದಾರೆ. ಪ್ರೇಕ್ಷಕರು ಮೋಟಾರ್ ಸ್ಪೋರ್ಟ್ಸ್ ಆಕ್ಷನ್ ಅಲ್ಲದೇ ಭಾರತದ ಪ್ರಮುಖ ರಾಕ್ ಬ್ಯಾಂಡ್ `ಪರಿಕ್ರಮ~ ತಂಡ ನೀಡುವ ನೇರ ಕಾರ್ಯಕ್ರಮದ ಸವಿ ಸವಿಯಬಹುದು.

ಈ ಸ್ಪರ್ಧೆಯ ಮೊದಲ ಸುತ್ತು ಬೆಂಗಳೂರು, ಚೆನ್ನೈ, ಕೊಯಮತ್ತೂರು, ಕೊಚ್ಚಿನ್ ಮತ್ತು ಮುಂಬಯಿ ಸೇರಿದಂತೆ ಐದು ನಗರಗಳ್ಲ್ಲಲಿ ನಡೆಯಲಿದೆ. ಅಂತಿಮ ಸುತ್ತು ಡಿಸೆಂಬರ್‌ನ್ಲ್ಲಲಿ ಬೆಂಗಳೂರಿನ್ಲ್ಲಲಿ ನಡೆಯಲ್ಲಿದೆ. ಚಾಂಪಿಯನ್‌ಷಿಪ್‌ನ ಮೊದಲ ಸುತ್ತು ಏಪ್ರಿಲ್ 28-29ರಂದು ನಡೆಯುತ್ತದೆ. ಆಟೊಕ್ರಾಸ್ ಕಾರ‌್ಯಕ್ರಮಗಳು ಭಾರತದ್ಲ್ಲಲಿ ಹೆಚ್ಚು ಜನಪ್ರಿಯವಾಗುತ್ತಿವೆ ಎನ್ನುತ್ತಾರೆ ವಿನ್‌ಸ್ಪೋರ್ಟ್‌ನ ಮುಖ್ಯ ನಿರ್ವಾಹಕ ಬಾಲಕೃಷ್ಣ ಜಯಸಿಂಹ.

ಆಟೊಕ್ರಾಸ್ ಕೋರ್ಸ್‌ಗಳು ಸಾಮಾನ್ಯವಾಗಿ 800 ಮೀಟರ್‌ಗಳಿಂದ 1.2 ಕಿಲೋಮೀಟರ್ ದೂರದಷ್ಟು ಗುರಿ ಹೊಂದಿದ್ದು, ಕಾರನ್ನು ನಿಯಂತ್ರಿಸುವ ಚಾಲಕರ ಕೌಶಲ್ಯದ ಮೇಲೆ ಹೆಚ್ಚು ಒತ್ತು ನೀಡಲಾಗುತ್ತದೆ. ಮಾರ್ಗಗಳನ್ನು ಟ್ರಾಫಿಕ್ ಕೋನ್‌ಗಳಿಂದ, ಬ್ಯಾರಿಕೇಡಿಂಗ್ ಮತ್ತು ಫ್ಲ್ಯಾಗ್‌ಗಳಿಂದ ತಾತ್ಕಾಲಿಕವಾಗಿ ಸಿದ್ಧಪಡಿಸಲಾಗುತ್ತದೆ ಅಥವಾ ಕಾಯಂ ಅಂಕಣಗಳೂ ಇರಬಹುದು. ಇದರ್ಲ್ಲಲಿ ಹಲವಾರು ವರ್ಗಗಳಿರುತ್ತವೆ.`ಎಕಾನಮಿ ಸೆಡಾನ್~ಗಳಿಂದ `ಪರ್ಪಸ್ ಬ್ಯುಲ್ಟ್~ ವಾಹನಗಳು ಭಾಗವಹಿಸಬಹುದಾಗಿದೆ.

ವಾಹನಗಳ ಕ್ಯುಬಿಕ್ ಸಾಮರ್ಥ್ಯ (ಸಿಸಿ) ಮತ್ತು ಬದಲಾವಣೆಗಳನ್ನು ಆಧರಿಸಿ ವಿಭಾಗಗಳನ್ನು ಗುರುತಿಸಲಾಗಿದೆ. ಸ್ವಿಫ್ಟ್, ಎಸ್ಟೀಮ್ ಸೇರಿದಂತೆ ಇನ್ನಿತರೆ ಕಂಪೆನಿಗಳ ಕಾರುಗಳು ಪಾಲ್ಗೊಳ್ಳಲಿವೆ. ಈಗಾಗಲೇ 12 ಮಂದಿ ಮಹಿಳಾ ಸ್ಪರ್ಧಿಗಳು ನೋಂದಣಿ ಮಾಡಿಸಿದ್ದಾರೆ.

ಮೋಟಾರ್ ಸ್ಪೋರ್ಟ್ಸ್ ಯುವ ಜನರನ್ನು ಗುರಿಯಾಗಿಟ್ಟುಕೊಂಡು ಆಯೋಜಿಸಿದ್ದು, ಸಾಹಸ ಮತ್ತು ಮೋಜಿನ ಮನರಂಜನೆಯನ್ನು ಇದು ನೀಡಲಿದೆ ಎನ್ನುತ್ತಾರೆ `ಆ್ಯನ್ ಓಪನ್ ಮೈಂಡ್~ನ ಮುಖ್ಯ ಕಾರ‌್ಯನಿರ್ವಾಹಕ ಅಧಿಕಾರಿ ಹಸೀನಾ ಕುಟ್ಟಿ. ಅರಮನೆ ಮೈದಾನದ ತ್ರಿಪುರ ವಾಸಿನಿಯ್ಲ್ಲಲಿ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ನಟ ದರ್ಶನ್ ಬಹುಮಾನ ವಿತರಿಸಲಿದ್ದಾರೆ.

www.inac.co.in ನಲ್ಲೂ ನೋಂದಣಿ ಮಾಡಿಸಬಹದು. ಬೆಳಿಗ್ಗೆ 9ರಿಂದ 6ಗಂಟೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.