ADVERTISEMENT

ಆದರ್ಶ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಆದರ್ಶ ವಿದ್ಯಾ ಸಂಘ: ಭಾನುವಾರ ಸಂಸ್ಥೆಯ 40 ನೇ ವಾರ್ಷಿಕೋತ್ಸವ. ಹಸ್ತಿಮಲ್ ಸಿಸೋಡಿಯಾ, ಕೆ ಕೆ ಭನ್ಸಾಲಿ ಮತ್ತು ಡಿ.ಸಿ. ಛಜೇರ್ ಅವರಿಗೆ ಆದರ್ಶ ಸಮಾಜ ರತ್ನ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮ.

ಉದ್ಘಾಟನೆ: ಹಂಸರಾಜ ಭಾರದ್ವಾಜ್. ಅತಿಥಿ: ಡಿ.ವಿ.ಸದಾನಂದ ಗೌಡ.
ಗುಣಮಟ್ಟ ಶಿಕ್ಷಣ ನೀಡುವ ಉದ್ದೇಶದೊಂದಿಗೆ 1971ರಲ್ಲಿ ಆದರ್ಶ ವಿದ್ಯಾ ಸಂಘ ಚಿಕ್ಕಪೇಟೆ ಪ್ರದೇಶದ ಸಣ್ಣ ಗಲ್ಲಿಯೊಂದರಲ್ಲಿ ಆರಂಭವಾಗಿ ತನ್ನ ಮೊದಲ ಹಿಂದಿ ಮಾಧ್ಯಮ ಶಾಲೆ ತೆರೆಯಿತು. ನಂತರ ತನ್ನ ಕಾರ್ಯ ಕ್ಷೇತ್ರ ವಿಸ್ತರಿಸಿಕೊಳ್ಳುತ್ತ ಸಂಪೂರ್ಣ ಸುಸಜ್ಜಿತ ಸಂಸ್ಥೆಯಾಗಿ ಬೆಳೆದಿದ್ದು ಉನ್ನತ ಶಿಕ್ಷಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದೆ.

 1.25 ಎಕರೆ ವಿಸ್ತೀರ್ಣದಲ್ಲಿ ತಲೆಯೆತ್ತಿರುವ ಈ ಸಂಸ್ಥೆಯ ಕಾಲೇಜುಗಳಲ್ಲಿ  ಪ್ರಸ್ತುತ ದೇಶದ ನಾನಾ ಭಾಗದವರು  ಹಾಗೂ ವಿದೇಶಿಯರು ಸೇರಿ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.  ಸ್ಥಳ: ತ್ರಿಪುರವಾಸಿನಿ ಅರಮನೆ ಮೈದಾನ. ಬೆಳಿಗ್ಗೆ 10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.