ADVERTISEMENT

ಆನಂದ್‌ ಸಿನಿಮಾದಲ್ಲಿ ಧನುಷ್‌

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:30 IST
Last Updated 25 ಮೇ 2018, 19:30 IST
ಧನುಷ್‌
ಧನುಷ್‌   

ನಟ, ನಿರ್ದೇಶಕ ಧನುಷ್‌ ಸದ್ಯ ಒಂದರ ನಂತರ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈಚೆಗಷ್ಟೇ ಹಾಲಿವುಡ್‌ನ ತಮ್ಮ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿ ಸುದ್ದಿಯಾಗಿದ್ದರು. ಈಗ ಬಾಲಿವುಡ್‌ನಲ್ಲಿ ಎರಡನೇ ಸಿನಿಮಾಕ್ಕೆ ಧನುಷ್‌ ತಯಾರಾಗಿದ್ದು, ಜನಪ್ರಿಯ ನಿರ್ದೇಶಕ ಆನಂದ್‌ ಎಲ್‌. ರೈಯವರ ಮುಂದಿನ ಚಿತ್ರದಲ್ಲಿ ಧನುಷ್‌ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.

ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಧನುಷ್‌ ಸ್ಪಷ್ಟಪಡಿಸಿದ್ದು, ‘ಆನಂದ್‌ ಅವರು ಸದ್ಯ 'ಝೀರೋ' ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆ ನಂತರವೇ ನನ್ನ ಚಿತ್ರದ ಕೆಲಸ ಆರಂಭ’ ಎಂದು ಹೇಳಿಕೊಂಡಿದ್ದಾರೆ.

ತನ್ನ ಹೊಸ ಚಿತ್ರದ ಬಗ್ಗೆ ಕುತೂಹಲಕಾರಿ ಸಿನಿಮಾವನ್ನು ಧನುಷ್‌ ಹಂಚಿಕೊಂಡಿದ್ದು, ಚಿತ್ರೀಕರಣ ಆರಂಭಕ್ಕೂ ಮುನ್ನ ಸುಮಾರು ಒಂದು ವರ್ಷಸಿನಿಮಾ ತಯಾರಿ ನಡೆಯಲಿದೆಯಂತೆ. ಈ ವಿಚಾರವನ್ನು ತಾನು ಹಾಲಿವುಡ್‌ನಿಂದ ಕಲಿತಿದ್ದು, ಇದರಿಂದ ನಂತರದ ಕೆಲಸಗಳೂ ಆರಾಮವಾಗಿ ಸಾಗುತ್ತವೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.