ADVERTISEMENT

ಇಂಚರದಲ್ಲಿ ಹಾರ್ಮೋನಿಯಂ ವಾದನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯು ತನ್ನ ತಿಂಗಳ ಸರಣಿ `ಇಂಚರ-16~ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿತ್ತು. ಹಾರ್ಮೋನಿಯಂ ಯುವ ವಾದಕ ಎಸ್. ಅಭಿಜಿತ್ ತಮ್ಮ ವಾದನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.

ಮುತ್ತುಸ್ವಾಮಿ ದೀಕ್ಷಿತರ ಹಂಸಧ್ವನಿರಾಗ ಆದಿತಾಳದ `ವಾತಾಪಿ ಗಣಪತಿಂ ಭಜೆ~ ಹಾಡಿನೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ `ಜಗದೋದ್ಧಾರನ ಆಡಿಸಿದಳೆಶೋದೆ~, `ದಾಸನ ಮಾಡಿಕೊ ಎನ್ನಾ~, `ಭಾಗ್ಯದ ಲಕ್ಷ್ಮಿ ಬಾರಮ್ಮ~ ಇನ್ನೂ ಹಲವು ಹಾಡುಗಳಿಗೆ ಹಾರ್ಮೋನಿಯಂ ವಾದನ ಸಾಥ್ ನೀಡಿತು.
 
ಯುವ ತಬಲಾ ವಾದಕ, ಗಾಯಕ ಎಂ. ಗುರುನಂದನ್ ರಾವ್ ತಬಲಾದಲ್ಲಿ ಸಹಕರಿಸಿದರು.  ಕಲಾಪೋಷಕರಾದ ಎಂ. ದಿನೇಶ್ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಯುವ ಪ್ರತಿಭಾವಂತರಿಗೆ ಅವಕಾಶ ನೀಡುತ್ತಾ ಬಂದಿರುವ ಸಂಸ್ಥೆಯನ್ನು ಶ್ಲಾಘಿಸಿದರು. ಹಿರಿಯ ಸಾಹಿತಿ ವಿ. ಮಲ್ಲಿಕಾರ್ಜುನಯ್ಯ, ವಕೀಲ ಸದಾಶಿವಯ್ಯ, ಸಂಸ್ಥೆಯ ಸಂಸ್ಥಾಪಕಿ ಗಾಯತ್ರಿ ಕೇಶವ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.