ADVERTISEMENT

ಇಂಚರ ಗೀತ ಗಾಯನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ದೊಡ್ಡಬೊಮ್ಮಸಂದ್ರದ ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯು ಆಯೋಜಿಸಿದ್ದ ಇಂಚರ ಕಾರ್ಯಕ್ರಮದಲ್ಲಿ ಶ್ರೇಯಾ ಸುರೇಶ್ ಮತ್ತು ಶ್ರೇಷ್ಠ ಸುರೇಶ್ ಅವರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ದ.ರಾ.ಬೇಂದ್ರೆ ಅವರ `ಜಯದೇವ ಜಯದೇವ ಶ್ರೀಗಣಪತಿರಾಯ~, ಎನ್.ಎಸ್. ಲಕ್ಷ್ಮಿನಾರಾಯಣಭಟ್ಟ ಅವರ `ರೆಕ್ಕೆ ಮುರಿದ ಹಕ್ಕಿಯು ನಾನು~, ಶಾರದಮ್ಮ ಅವರ `ಜ್ಯೋತಿ ಹರಿಯಿತು ನಮ್ಮ ಕನ್ನಡ ನಾಡಿಗೆ~, ಕೆ.ಎಸ್. ಎನ್ ಅವರ `ಹಗಲಿನಬ್ಬರ ತಣ್ಣಗಾಯಿತು ಸಂಜೆ ರಂಜಿಸಿ ತೆರಳಿತು~ ಸೇರಿದಂತೆ ಮೊದಲಾದ ಗೀತೆಗಳ ಗಾಯನ ನೆರೆದವರನ್ನು ಮುದಗೊಳಿಸಿದವು.

ಎಸ್.ಅಭಿಜಿತ್ (ಹಾರ್ಮೋನಿಯಂ) ಮತ್ತು ಅಭಿಷೇಕ್ ತಬಲ ಸಾಥ್ ನೀಡಿದರು.ವಿಶೇಷ ಲಯವಾದ್ಯಗಾರ ರವಿ ಉದ್ಘಾಟಿಸಿದರು. ಸಂಸ್ಥೆಯ ಸಂಸ್ಥಾಪಕಿ ಗಾಯಿತ್ರಿ ಕೇಶವ್, ನಾಟ್ಯ ಕಲಾವಿದೆ ಆರತಿ, ಕುಸುಮಾ, ಸುರೇಶ್, ಸದಸ್ಯರಾದ ಪ್ರಭಾಕರ್, ಜಿ.ಮಹೇಶ್, ಶ್ರೀನಿವಾಸ್ ಉಪಸ್ಥಿತರಿದ್ದರು. ಭಕ್ತಿ ಕುಸುಮಾಂಜಲಿ: ಅಕಾಡೆಮಿಯ ಅಧ್ಯಕ್ಷರಾಗಿದ್ದ ಅನಂತರಾಮ ಶರ್ಮ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಭಕ್ತಿ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ವಂದನಾ ರಾವ್ ಹಾಗೂ ಪ್ರಭಾ ಇನಾಂದಾರ್ ಗಾಯನ ನಡೆಸಿಕೊಟ್ಟರು. 

ಹಿರಿಯ ಸಾಹಿತಿ ಎನ್. ನರಸಿಂಹ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು, ಅಕಾಡೆಮಿ ಸದಸ್ಯರಾದ ಲತಾ ಶೇಖರ್, ಶುಭಾ ಶ್ರೀಹರಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.