ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ಆಯೋಜಿಸಿಕೊಂಡು ಬರುತ್ತಿರುವ ಇಂಚರ ನಿರಂತರ ಸಂಗೀತ ಕಾರ್ಯಕ್ರಮಕ್ಕೆ ಒಂದು ವರ್ಷ ತುಂಬಿತ್ತು. ಇದರ ಅಂಗವಾಗಿ ಪ್ರವೀಣ್ ಕುಮಾರ್ ಮತ್ತು ವಿಜಯ್ ಅವರ ಗಾಯನ ಕಾರ್ಯಕ್ರಮ ವರ್ಷಾಚರಣೆಗೆ ರಂಗು ತುಂಬಿತ್ತು.
ಪ್ರವೀಣ್ ಕುಮಾರ್ ಹಾಡಿದ `ಓಂಕಾರೇಶ್ವರನೇ ಗಣನಾಯಕ~ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. `ಮುಚ್ಚುಮರೆ ಇಲ್ಲದೆಯೆ ನಿನ್ನ ಮುಂದೆಲ್ಲವನು~ (ಕುವೆಂಪು), `ಯಾಕೆ ಬಡ್ದಾಡ್ತಿ ತಮ್ಮ~ (ಜನಪದ), `ನಿನ್ನೊಲುಮೆಯಿಂದಲೆ ಬಾಳು ಬೆಳಕಾಗಿರಲಿ (ಕೆ.ಎಸ್.ಎನ್), ಭಾಗ್ಯದ ಲಕ್ಷ್ಮೀ ಬಾರಮ್ಮ (ಪುರಂದರದಾಸರು) ಗೀತೆಗಳು ಪ್ರೇಕ್ಷಕರನ್ನು ರಂಜಿಸಿದವು.
ಸಂಗೀತಾಸಕ್ತರಿಗೆ ವೇದಿಕೆ ಕಲ್ಪಿಸುವ ಮೂಲಕ ಹನ್ನೆರಡು ವರ್ಷಗಳಿಂದ ಸಂಸ್ಥೆ ಸುಗಮ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಅಭಿನಂದನಾರ್ಹ ಎಂದು ಗಾಯಕಿ ಯುಕ್ತಾರಾವ್ ಅಭಿನಂದಿಸಿದರು.
ಅಭಿಜಿತ್ (ಹಾರ್ಮೋನಿಯಂ), ಮೈಸೂರು ಪಿ. ಅಶ್ವಿನ್ (ತಬಲಾ), ರವಿ (ವಿಶೇಷ ಲಯವಾದ್ಯ) ವಾದ್ಯ ಸಹಕಾರ ನೀಡಿದರು. ಸಂಸ್ಥೆಯ ಸಂಸ್ಥಾಪಕಿ ಗಾಯತ್ರಿ ಕೇಶವ್, ಸಂಸ್ಥೆ ಪೋಷಕ ದಿನೇಶ್‌ರಾವ್, ಗಮಕಿ ನಾರಾಯಣರಾವ್, ಸದಸ್ಯರಾದ ಶುಭಾ ಶ್ರೀಹರಿ, ಅಪೂರ್ವ, ಮ್ಯಾನಷನ್ ಗೃಹಗಳ ಮಾಲೀಕ ವರ್ಗೀಸ್ ಮ್ಯಾಥ್ಯೂ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.