ADVERTISEMENT

ಇಂದು ನಾಳೆ ಮಲೆನಾಡ ಅನಾವರಣ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 19:30 IST
Last Updated 4 ಫೆಬ್ರುವರಿ 2011, 19:30 IST

ಊಟ, ತಿಂಡಿ, ಭಾಷೆ, ಉಡುಗೆ ತೊಡುಗೆ ಹೀಗೆ ಎಲ್ಲದರಲ್ಲೂ ಮಲೆನಾಡಿಗೆ ಅದರದೇ ಆದ ವಿಶೇಷ ಇದೆ. ಈ ಹಿನ್ನೆಲೆಯಲ್ಲಿ ವನಸ್ತ್ರೀ ಕಲೆಕ್ಷನ್ಸ್ ಶನಿವಾರ ಮತ್ತು ಭಾನುವಾರ ‘ಮಲೆನಾಡ ಮೇಳ’ ಆಯೋಜಿಸಿದೆ. ಅಲ್ಲಿನ ಜೀವನವನ್ನು ಇಲ್ಲಿ ತೆರೆದಿಡುವ ಪ್ರಯತ್ನ ಮಾಡಲಿದೆ.
ವನಸ್ತ್ರೀಯ ಬಿತ್ತನೆ ಬೀಜಗಳು, ತೋಟದ ಉತ್ಪನ್ನಗಳು ಮತ್ತು ಸಾಂಪ್ರದಾಯಿಕ ಮಲೆನಾಡ ಆಹಾರ ಹಾಗೂ ತಿಂಡಿಗಳ ಶ್ರೇಣಿ ಈ ಮೇಳದಲ್ಲಿ ಸಿಗಲಿವೆ.

ಇಲ್ಲಿನ ಜೇನು, ಕೋಕಂ ಮಧು, ತಂಬ್ಳಿ, ಪುಡಿಗಳು, ತೊಡೆದೇವು, ಉಪ್ಪಿನಕಾಯಿಗಳು ಎಲ್ಲ ಬಾಯಲ್ಲಿ ನೀರೂರಿಸುತ್ತವೆ. ಕೋಕಂ ಬೆಣ್ಣೆಯ ಬಾಮ್, ಪ್ಯಾಚ್‌ವರ್ಕ್‌ನ ಕೌದಿಗಳು, ಗೋಡಂಬಿ, ಒಣದ್ರಾಕ್ಷಿ, ಕೀಟ ನಿವಾರಕಗಳು, ಬೀಜಗಳಿಂದ ತಯಾರಿಸಿದ ಆಭರಣಗಳು, ಸಸ್ಯಮೂಲ ಕೂದಲ ಡೈ, ಸೀಗೆಕಾಯಿ ಸ್ಕ್ರಬ್‌ಗಳೆಲ್ಲ ಇವೆ.

ಸಿಹಿ, ಖಾರದ ತಿಂಡಿ, ಕೋಕಂ ಜ್ಯೂಸ್, ಕಷಾಯಗಳ ಮಳಿಗೆ ಇದೆ. ಮಲೆನಾಡ ಕಾಡಿನ ತೋಟದ ಚಿತ್ರವಿರುವ ಫೋಟೊ, ಪೇಂಟಿಂಗ್‌ಗಳ ಪ್ರದರ್ಶನವಿರುತ್ತದೆ. ಕೈ ಕಾಗದ, ಮರುಬಳಕೆ ಉತ್ಪನ್ನಗಳಿವೆ.

ADVERTISEMENT

ಮಗ್ಗದ ಬಟ್ಟೆಗಳು ಮತ್ತು ಹಳ್ಳಿಗಾಡಿನ ಹಸ್ತಕಲೆಯ ‘ನಮ್ಮ ಭೂಮಿ’, ಸೌರ ಶಕ್ತಿ ದೀಪಗಳ ‘ಎಕೊ ಸೇವ್ ಇಂಡಿಯಾ’, ಪರಿಸರ ಸ್ವಚ್ಛತೆ, ಒಣ ಶೌಚಗಳ ‘ಬಯೋಮ್ ಸಲೂಷನ್ಸ್’, ಪಶ್ಚಿಮ ಘಟ್ಟಗಳಲ್ಲಿ ಕ್ಯಾಂಪ್, ವನ್ಯಜೀವಿಯ ಮೇಲೆ ಚಿತ್ರಗಳನ್ನು ‘ವನಮಿತ್ರ’ದಲ್ಲಿ ಕಾಣಬಹುದು.

ಸ್ಥಳ: ಗೋಲ್ಡನ್ ಬೀಡ್ಸ್ ಶಾಲೆ, ರತ್ನಾ ಅವೆನ್ಯೂ ಬಳಿ, 157, ರಿಚ್ಮಂಡ್ ರಸ್ತೆ. ಬೆಳಿಗ್ಗೆ 10 ರಿಂದ ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.