ನಗರದ ಸೌಂದರ್ಯ ತಜ್ಞೆ ದೀಪಾ ನಾಗೇಶ್ ಅವರು ಗಾಂಧಿ ಬಜಾರ್‌ನಲ್ಲಿರುವ ತಮ್ಮ ‘ದಿಶಾ ಬ್ಯೂಟಿ ಸ್ಪಾಟ್’ ಪಾರ್ಲರ್‌ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಉಚಿತ ಫೇಷಿಯಲ್ ಮಾಡಲಿದ್ದಾರೆ.
‘ಅಧ್ಯಾತ್ಮ ಮತ್ತು ಸೌಂದರ್ಯ ಚಿಕಿತ್ಸೆಯನ್ನು ಒಳಗೊಂಡ ಈ ಫೇಷಿಯಲ್‌ನ್ನು ‘ಡಿವೈನ್ ಫೇಷಿಯಲ್’ ಎಂದು ಕರೆಯಲಾಗುವುದು. ಮಾ.7 ಮತ್ತು 8ರಂದು ಅಂದಾಜು 100 ಮಂದಿಗೆ ನಮ್ಮ ತಂಡ ಉಚಿತವಾಗಿ ಫೇಷಿಯಲ್ ಮಾಡಲಿದೆ.
ಇದೇ ವೇಳೆ ಚರ್ಮ ಹಾಗೂ ಕೇಶ ಸಂರಕ್ಷಣೆ ಕುರಿತು ಉಚಿತ ಮಾಹಿತಿ, ಅನಾಥಾಶ್ರಮದ ಮಕ್ಕಳಿಂದ ಫ್ಯಾಷನ್ ಷೋ ಹಾಗೂ ಸ್ವ ಉದ್ಯೋಗಾಸಕ್ತ ಮಹಿಳೆಯರಿಗೆ ಮಾ.7ರಿಂದ 15 ದಿನಗಳ ಉಚಿತ ತರಬೇತಿಯನ್ನೂ ನೀಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ: 74119 96915.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.