ADVERTISEMENT

ಇವರು ಹೀಗೆಂದರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ವಿಜಯಾ, ಎಲಿವಾಡ
ವಿಜಯಾ, ಎಲಿವಾಡ   

ಕೆಲವರಿಗೆ ಚಲನಚಿತ್ರವೊಂದು ಮನೋರಂಜನಾ ಮಾಧ್ಯಮವಾದರೆ, ಮತ್ತೆ ಕೆಲವರಿಗೆ ಅದೊಂದು ವಿವಿಧ ದೇಶ ಸಂಸ್ಕೃತಿಗಳನ್ನು ಅರಿಯುವ ಪಾಠಶಾಲೆ, ಭಾಷೆಯನ್ನು ಕಲಿಸುವ ಮಾಧ್ಯಮ. ಇಂತಹ ಅನೇಕರು ಬೇರೆ ಬೇರೆ ಪ್ರದೇಶಗಳಿಂದ ಸಿನಿಮೋತ್ಸವಕ್ಕೆ ಧಾವಿಸಿ ಬರುತ್ತಾರೆ. ಅನೇಕ ವರ್ಷಗಳಿಂದ ಬೆಂಗಳೂರು  ಅಂತರರಾಷ್ಟ್ರೀಯ ಸಿನಿಹಬ್ಬದಲ್ಲಿ ಭಾಗವಾಗುತ್ತಿರುವ ಕೆಲ ಪ್ರೇಕ್ಷಕರು ತಮ್ಮ ಅನಿಸಿಕೆಗಳನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಂಡಿದ್ದಾರೆ

ಸಂಸ್ಕೃತಿ ವಾಹಕ

ಈ ಬಾರಿ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಚಿತ್ರಗಳನ್ನು ನೋಡಿದೆ. ಚಿಕ್ಕಂದಿನಲ್ಲಿ ಚಿತ್ರಗಳನ್ನು ಭಾಷೆ ಕಲಿಯುವ ಮಾಧ್ಯಮವಾಗಿ ನೋಡುತ್ತಿದ್ದೆ. ಈಗ ಇತರ ಸಂಸ್ಕೃತಿಗಳನ್ನು ತಿಳಿಸಿಕೊಡುವ ಸಂಸ್ಕೃತಿ ವಾಹಕಗಳಾಗಿ ನೋಡುತ್ತಿದ್ದೇನೆ.

ADVERTISEMENT

ವಿಜಯಾ, ಎಲಿವಾಡ

***

ಇರಾಸಿ ಸಿನಿಮಾ ಇಷ್ಟ

ಕಳೆದ ಆರು ವರ್ಷಗಳಿಂದ ಸಿನಿಮೋತ್ಸವಕ್ಕೆ ಬರುತ್ತಿದ್ದೇನೆ. ಈ ಬಾರಿಯ ಚಿತ್ರೋತ್ಸವದಲ್ಲಿ ಇರಾನಿ ಸಿನಿಮಾಗಳನ್ನು ಹೆಚ್ಚು ನೋಡಿದೆ. ಅಲ್ಲಿನ ಚಿತ್ರ ನಿರ್ದೇಶಕರು ಸಾಮಾಜಿಕ ಕಾಳಜಿಯನ್ನು ಸೂಕ್ಷ್ಮವಾಗಿ ಬಿಂಬಿಸುತ್ತಾರೆ. ರಾಜಕೀಯ ತಳಮಳಗಳನ್ನು ಭಿನ್ನ ನಿರೂಪಣೆಯ ಮೂಲಕ ಸಾದರಪಡಿಸುತ್ತಾರೆ.

ಗೋವಿಂದರಾಜು, ತುಮಕೂರು

***

ಫೀಚರ್ ಚಿತ್ರಗಳು ಇಷ್ಟ

ಸಿನಿಮೋತ್ಸವಗಳ ವಿಚಾರಗೋಷ್ಠಿ ಮತ್ತು ಮಾಸ್ಟರ್‌ಕ್ಲಾಸ್‌ಗಳು ನನಗೆ ಇಷ್ಟವಾಗುತ್ತವೆ. ನನಗೆ ಮುಖ್ಯವಾಹಿನಿ ಚಿತ್ರಗಳಿಗಿಂತ ಫೀಚರ್‌ ಚಿತ್ರಗಳು ಇಷ್ಟವಾಗುತ್ತವೆ. ಇಲ್ಲಿ ಸಿಗುವ ಚಿತ್ರಗಳು ನಮಗೆ ಬೇರೆಡೆ ನೋಡಲು ಸಿಗುವುದಿಲ್ಲ.

–ಸಮೀರ್, ಬೆಂಗಳೂರು

***

ಪೂರ್ವಗ್ರಹ ದೂರ

ಸಿನಿಮೋತ್ಸವ ಎಂದರೆ, ನನಗೆ ಹಬ್ಬ. ಪುಸ್ತಕಗಳನ್ನು ಓದಿ ಬೇರೆ ನಾಡಿನ ಬಗ್ಗೆ ಕೊಂಚ ಮಟ್ಟಿನ ಜ್ಞಾನ ಸಂಪಾದಿಸಿರುತ್ತೇವೆ. ಆದರೆ, ಅಕ್ಷರ ಮಾಧ್ಯಮಕ್ಕಿಂತ ಭಿನ್ನವಾದ ಸಾಧ್ಯತೆಗಳನ್ನು ದೃಶ್ಯ ಮಾಧ್ಯಮ ಕಟ್ಟಿಕೊಡುತ್ತದೆ. ಕೆಲ ದೇಶಗಳ ಬಗ್ಗೆ ನಮಗಿರುವ ಪೂರ್ವಗ್ರಹಗಳನ್ನು ದೂರಾಗಿಸುವಲ್ಲಿ ಸಿನಿಮೋತ್ಸವ ಸಹಕಾರಿ.

–ಜವರೇಗೌಡ, ಜೆ.ಪಿ. ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.