ADVERTISEMENT

ಈದ್‌ಗೆ ಖಾರ,ಸಿಹಿ..

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST
ಲುಕ್ಮಿ ಅಲಾ ಗಲಾವತ್
ಲುಕ್ಮಿ ಅಲಾ ಗಲಾವತ್   

ಲುಕ್ಮಿ ಅಲಾ ಗಲಾವತ್

ಲುಕ್ಮಿ ಕಾರ್ನೆಟೊ ತಯಾರಿಸಲು ಬಳಸುವ ಸಾಮಗ್ರಿಗಳು: ಸಮೋಸಾ ಪತ್ತಿ ಅಥವಾ ಫೈಲೋ ಶೀಟ್ - 4 ಶೀಟ್, ಬೆಣ್ಣೆ- 30 ಗ್ರಾಂ. ಕಾರ್ನೆಟೊ ಮೊಲ್ಡ್ - 4.

ತಯಾರಿಸುವ ವಿಧಾನ: ಸಮೋಸಾ ಪತ್ತಿ ಅಥವಾ ಫೈಲೊ ಶೀಟ್ ಅನ್ನು ತೆಗೆದುಕೊಳ್ಳಿ. ಅದರ ಮೇಲೆ ಸ್ವಲ್ಪ ಬೆಣ್ಣೆಯನ್ನು ಹಚ್ಚಿ.

ADVERTISEMENT

ಪ್ರತ್ಯೇಕವಾಗಿ ಎಲ್ಲಾ ಕಾರ್ನೆಟೊ ಕೋನ್ ಗಳ ಮೇಲೆ ಸೂತ್ತಿರಿ. ಒವನ್‌ನಲ್ಲಿ 160 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ 12 ನಿಮಿಷಗಳ ಕಾಲ ಚಿನ್ನದ ಬಣ್ಣಕ್ಕೆ ಬರುವ ತನಕ ಬೇಯಿಸಿರಿ. ಒವನ್‌ನಿಂದ ಹೊರತೆಗೆದು ತಣ್ಣಗಾಗುವವರೆಗೂ ಒಂದು ಕಡೆ ಇರಿಸಿ. ನಂತರ ನಿಮ್ಮ ಖಾಲಿ ಕಾರ್ನೆಟ್ ಶೆಲ್ ಸಿದ್ಧವಾಗಿರುತ್ತದೆ.

ಲ್ಯಾಂಬ್ ಗಲಾವತ್ ತಯಾರಿಸಲು ಬಳಸುವ ಸಾಮಗ್ರಿಗಳು: ಮೃದುವಾದ ಮಟನ್ - 200 ಗ್ರಾಂ, ತುಪ್ಪ - 50 ಗ್ರಾಂ, ಹುರಿದ ಈರುಳ್ಳಿ - 30 ಗ್ರಾಂ, ಹಸಿಮೆಣಸು - 10 ಗ್ರಾಂ, ತಾಜಾ ಕೊತ್ತಂಬರಿ - 20 ಗ್ರಾಂ, ಕೆಂಪು ಮೆಣಸಿನ ಪುಡಿ - ಒಂದು ಚಮಚ, ಗರಂ ಮಸಾಲಾ ಪುಡಿ - ಒಂದು ಚಮಚ, ಪಪ್ಪಾಯ - 5 ತುಂಡು, ಗುಲಾಬಿ ದಳದ ಪುಡಿ - ಅರ್ಧ ಚಮಚ, ಪುದೀನ - ಕೆಲವು ಚಿಗುರು ಎಲೆಗಳು, ಗುಲಾಬಿ ದಳಗಳು, ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ: ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಮೃದುಮಾಡಿದ ಮಟನ್ ಹಾಕಿ. ಅರ್ಧ ತುಪ್ಪ ಹೊರತುಪಡಿಸಿ ಅದರೊಂದಿಗೆ ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಬೌಲ್‌ನ ಮಧ್ಯ ಭಾಗಕ್ಕೆ ಮಿಶ್ರಣ ಮಾಡಿದ ಎಲ್ಲಾ ಪದಾರ್ಥವನ್ನು ಇಟ್ಟು ಅದರ ಸುತ್ತ ತುಪ್ಪ, ಲವಂಗ ಮತ್ತು ಬೆಳ್ಳುಳ್ಳಿ ಸುವಾಸನೆಯನ್ನು ತುಂಬಿಸಿ ಬೌಲ್‌ನ ಬಾಯಿಮುಚ್ಚಿ ಬಿಸಿ ಇದ್ದಿಲಿನೊಂದಿಗೆ ಚೆನ್ನಾಗಿ ಶಾಖವನ್ನು ನೀಡಿರಿ. ಈಗ ಗಲಾವತ್ ಮಿಶ್ರಣವು ಚಿಕ್ಕ ಚೆಂಡಿನ ಆಕಾರದಲ್ಲಿ ಅಥವಾ ಸ್ವಲ್ಪ ಬೆಣ್ಣೆಯೊಂದಿಗೆ ಫ್ರೈ ಮಾಡಿ ಕ್ರೀಮ್ ರೂಪದಲ್ಲಿಯೂ ಸಹ ಬಳಸಬಹುದು. ಕಾರ್ನೆಟೊ ಶೆಲ್ ನಲ್ಲಿ ಫ್ರೈ ಮಾಡಿದ ಕ್ರೀಮ್ ತುಂಬಿ ಅದನ್ನು ಗುಲಾಬಿ ದಳದೊಂದಿಗೆ ಅಲಂಕರಿಸಿ ಬಿಸಿ ಬಿಸಿಯಾಗಿ ಲುಕ್ಮಿ ಅಲಾ ಗಲಾವತ್ ಸವಿಯಿರಿ. 

ಅಗಸೆ, ಖರ್ಜೂರ ಮತ್ತು ಗುಲಾಬಿಯ ಖೀರು

ಮಖನಾ(ಫಾಕ್ಸ್ ಸೀಡ್, ಅಗಸೆ ಬೀಜ)- 100 ಗ್ರಾಂ, ತುಪ್ಪ- 20 ಮಿ.ಲೀ, ಕೆನೆಯಿರುವ ಹಾಲು- 500ಮಿ.ಲೀ, ಮಿಲ್ಕ್ ಮೇಡ್- 100 ಮೀ.ಲೀ, ಸಕ್ಕರೆ- 100 ಗ್ರಾಂ, ಒಣ ಖರ್ಜೂರ - 200ಗ್ರಾಂ(ಬೀಜ ತೆಗೆದು ಕತ್ತರಿಸಿಕೊಳ್ಳಿ), ಬಾದಾಮಿ- 20 ಗ್ರಾಂ(ಕತ್ತರಿಸಿಕೊಳ್ಳಿ), ಪಿಸ್ತಾ- 20 ಗ್ರಾಂ(ಕತ್ತರಿಸಿದ್ದು), ಗುಲಾಬಿ ಪಕಳೆಗಳು- 10 ಗ್ರಾಂ(ತಾಜಾ ಇದ್ದರೆ ಉತ್ತಮ), ರೋಸ್ ವಾಟರ್ - 1 ಚಮಚ, ಕೇಸರಿ - ಕೆಲ ತುಣುಕುಗಳು

ಮಾಡುವ ವಿಧಾನ: ತುಪ್ಪವನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿಕೊಳ್ಳಿ, ಮಖನಾ ಸೇರಿಸಿ, ಅದನ್ನು ಕಡಿಮೆ ಬಿಸಿಯಲ್ಲಿ ಅದು ಚಿನ್ನದ ಬಣ್ಣಕ್ಕೆ ತಿರುಗುವ ಮತ್ತು ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ಹಾಲು, ಖರ್ಜೂರ, ಬಾದಾಮಿ, ಸಕ್ಕರೆ ಮತ್ತು ಮಿಲ್ಕ್‌ ಮೇಡ್‌ ಸೇರಿಸಿ, ದಪ್ಪವಾಗುವವರೆಗೆ ಬೇಯಿಸಿರಿ. ಅರ್ಧ ಗುಲಾಬಿ ಪಕಳೆಗಳು ಮತ್ತು ಅರ್ಧ ಪಿಸ್ತಾ ಸೇರಿಸಿ. ಮತ್ತೆ ಕೆಲ ನಿಮಿಷಗಳವರೆಗೆ ಬೇಯಿಸಿರಿ. ಅದನ್ನು ಗುಲಾಬಿ ಪಕಳೆ ಮತ್ತು ಕತ್ತರಿಸಿದ ಪಿಸ್ತಾದಿಂದ ಅಲಂಕರಿಸಿ. ತಣ್ಣಗೆ ಅಥವಾ ಬಿಸಿ ಬಿಸಿಯಾಗಿ ತಿನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.