ಈದ್-ಅಲ್-ಅದಾ ಎ೦ತಲೂ ಕರೆಯಲಾಗುವ ಬಕ್ರೀದ್ ಹಬ್ಬ ತ್ಯಾಗ–ಬಲಿದಾನದ ಸಂಕೇತ. ಈ ಶುಭದಿನದ೦ದು ಕುರಿಯೊ೦ದನ್ನು ಬಲಿ ನೀಡಲಾಗುತ್ತದೆ. ಈ ಬಲಿಗೆ ವಿಶೇಷ ಧಾರ್ಮಿಕ ವಿಧಿ–ವಿಧಾನಗಳಿವೆ. ಬಲಿಪಶುವಿನ ಮಾ೦ಸವನ್ನು ಬಡವರಿಗೆ ಹ೦ಚುವುದು ಈ ಹಬ್ಬದ ಪ್ರಮುಖ ಅ೦ಶ. ಈ ಹಬ್ಬ ಭೂರಿಭೋಜನದ ಸಡಗರದ ಜೊತೆಗೆ ಏಕತೆ ಹಾಗೂ ಭ್ರಾತೃತ್ವದ ಸಂದೇಶವನ್ನೂ ಒಳಗೊಂಡಿದೆ. ಈ ಸಂಭ್ರಮದ ಆಚರಣೆಗಾಗಿ ನಾಲ್ಕಾರು ದಿನಗಳ ಮುಂಚೆಯೇ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸೇರಿದ್ದ ಮಾರುವವನ ಹಾಗೂ ಕೊಳ್ಳುವವನ ಸಂತಸದ ಚಹರೆಗಳನ್ನು ರಂಜು ಪಿ. ಸೆರೆ ಹಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.