ADVERTISEMENT

ಎಂ.ಎಸ್.ಸುಬ್ಬುಲಕ್ಷ್ಮಿ ನೆನಪಿನ ನಾಣ್ಯ

​ಪ್ರಜಾವಾಣಿ ವಾರ್ತೆ
Published 1 ಮೇ 2012, 19:30 IST
Last Updated 1 ಮೇ 2012, 19:30 IST
ಎಂ.ಎಸ್.ಸುಬ್ಬುಲಕ್ಷ್ಮಿ ನೆನಪಿನ ನಾಣ್ಯ
ಎಂ.ಎಸ್.ಸುಬ್ಬುಲಕ್ಷ್ಮಿ ನೆನಪಿನ ನಾಣ್ಯ   

ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿಯವರಿಗೆ ನಮನ ಸಲ್ಲಿಸುವುದಕ್ಕಾಗಿ ಆಭರಣಗಳ ಬ್ರಾಂಡ್ ಆಗಿರುವ `ತನಿಷ್ಕ್~ ನಿಯಮಿತ ಪ್ರತಿಯಲ್ಲಿ ಸುಬ್ಬುಲಕ್ಷ್ಮಿ ಅವರ ಚಿತ್ರವನ್ನೊಳಗೊಂಡ ಚಿನ್ನದ ನಾಣ್ಯಗಳನ್ನು ಬಿಡುಗಡೆ ಮಾಡಿದೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರಾದ ಡಾ.ಎಂ.ಬಾಲಮುರಳಿಕೃಷ್ಣ ಮತ್ತು ಸುಧಾ ರಂಗನಾಥನ್ ಈ ನಾಣ್ಯವನ್ನು ಚೆನ್ನೈನಲ್ಲಿ ಬಿಡುಗಡೆ ಮಾಡಿದರು.

ಅವರು ಕರ್ನಾಟಕ ಸಂಗೀತಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ನಾಣ್ಯವನ್ನು ಹೊರತಂದಿದ್ದಾರೆ. ಕ್ಯಾನ್ಸರ್ ಮತ್ತು ಮಧುಮೇಹ ಸಂಶೋಧನೆಯಲ್ಲಿ ತೊಡಗಿರುವ `ದಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್~ ಹಾಗೂ ಚೆನ್ನೈನ ಟಿಎಜಿ-ವಿಎಚ್‌ಎಸ್ ಡಯಾಬಿಟೀಸ್ ರಿಸರ್ಚ್ ಸೆಂಟರ್‌ಗೆ ಸಹಾಯ ಮಾಡುವ ಉದ್ದೇಶದಿಂದ `ತನಿಷ್ಕ್~ ಈ ಕಾರ್ಯಕ್ಕೆ ಮುಂದಾಗಿದೆ.

ಚಿನ್ನದ ನಾಣ್ಯಗಳು 2, 4 ಹಾಗೂ 8 ಗ್ರಾಂ ತೂಕದವಾಗಿದ್ದು, ಎಂ.ಎಸ್.ಸುಬ್ಬುಲಕ್ಷ್ಮಿಯವರ ಚಿತ್ರವನ್ನು ನಾಣ್ಯದ ಮೇಲೆ ಕೆತ್ತನೆ ಮಾಡಲಾಗಿದೆ. ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನ ಕೆಲವು ಶೋರೂಂಗಳಲ್ಲಿ ನಾಣ್ಯ ಲಭ್ಯ.

ಚಿನ್ನದ ನಾಣ್ಯದ ಖರೀದಿಯ ಜೊತೆಗೆ ಗ್ರಾಹಕರು ಸುಬ್ಬುಲಕ್ಷ್ಮಿಯವರ ಜೀವನದ ಬಹುಮುಖ್ಯ ಘಟನೆಗಳನ್ನು ಒಳಗೊಂಡಿರುವ ಪುಸ್ತಕವನ್ನು ಪಡೆಯಬಹುದು. ಇದು ಓದುಗರಿಗೆ ಸಂಗೀತಗಾರ್ತಿಯ ಗಾಯನ ಬದುಕಿನ ಒಳನೋಟವನ್ನು ಅನಾವರಣಗೊಳಿಸುತ್ತದೆ.

ಎಂ.ಎಸ್.ಸುಬ್ಬುಲಕ್ಷ್ಮಿಯವರು ದೇಶದ ಸಂಗೀತ ಕ್ಷೇತ್ರದ ಸಾಂಸ್ಕೃತಿಕ ಹೆಗ್ಗುರುತಾಗಿದ್ದು, ಅವರ ಕೊಡುಗೆ ಅನನ್ಯವಾಗಿದೆ ಎನ್ನುತ್ತಾರೆ ತನಿಷ್ಕ್‌ನ ಸಿಒಒ ಸಿಕೆ.ವೆಂಕಟರಾಮನ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.