ADVERTISEMENT

ಎಡ್ಯುಒಲಿಂಪಿಡಿಯಾ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಶೈಕ್ಷಣಿಕ ವಿಚಾರ ಮತ್ತು ಆನ್‌ಲೈನ್ ಶಾಲಾ ನಿರ್ವಹಣೆ ಸಂಸ್ಥೆ ಎಜ್ಯುಕ್ಯಾಂಪ್ ಆನ್‌ಲೈನ್ ನಡೆಸುತ್ತಿರುವ ತಾಂತ್ರಿಕ ಆಧಾರಿತ ಎಡ್ಯುಒಲಿಂಪಿಡಿಯಾ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

4ರಿಂದ12ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಸ್ಪರ್ಧೆ ನಡೆಸಲಾಗುತ್ತಿದ್ದು, ದೇಶದ 400 ನಗರಗಳ 5,000ಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಲಿವೆ. ಸ್ಪರ್ಧೆಗೆ ಟಾಟಾ ಟೆಲಿ ಸರ್ವೀಸಸ್‌ನ ಟಾಟಾ ಡೊಕೊಮೊ ಸಹಕಾರ ನೀಡಿದೆ.

`ಎಜ್ಯುಕ್ಯಾಂಪ್‌ನ ತಂತ್ರಜ್ಞಾನ ಆಧಾರಿತ ಶಿಕ್ಷಣ ಪರಂಪರೆಯನ್ನು ನಾವು ಮುಂದುವರಿಸುತ್ತಿದ್ದು, ಇದರ ಅಂಗವಾಗಿ ಎಜ್ಯು ಒಲಿಂಪಿಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಈ ಮೂಲಕ ಶೈಕ್ಷಣಿಕ ಒಲಿಂಪಿಡಿಯಾಸನ್ನು ಹೊಸ ಹಂತಕ್ಕೆ ಕೊಂಡೊಯ್ಯುತ್ತೇವೆ~ ಎನ್ನುತ್ತಾರೆ ಎಜ್ಯುಕ್ಯಾಂಪ್‌ಆನ್‌ಲೈನ್ ವಹಿವಾಟು ಮುಖ್ಯಸ್ಥ ಪುಷ್ಕರ್ ಸರನ್.

`ಎಡ್ಯುಒಲಿಂಪಿಡಿಯಾಗೆ ಪೂರ್ಣ ಉತ್ತೇಜನ ನೀಡಲು ಸಂತಸವೆನಿಸುತ್ತಿದೆ. ದೇಶದಲ್ಲಿ 2.5 ಲಕ್ಷಕ್ಕೂ ಹೆಚ್ಚು ಟಾಟಾ ಇಂಡಿಕಾಂ ಮತ್ತು ಟಾಟಾ ಡೊಕೊಮೊ ರೀಟೇಲ್ ಕೇಂದ್ರಗಳಿವೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಇದರಲ್ಲಿ ಸ್ಪರ್ಧೆಯ ಶುಲ್ಕ ತುಂಬಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವುದು ತುಂಬಾ ಸರಳ~ ಎನ್ನುತ್ತಾರೆ ಟಾಟಾ ಟೆಲಿಸರ್ವೀಸಸ್‌ಕಾರ್ಪೊರೇಟ್ ಮಾರುಕಟ್ಟೆ ಮುಖ್ಯಸ್ಥ ಗುರುವಿಂದರ್ ಸಿಂಗ್.

ವಿದ್ಯಾರ್ಥಿಗಳಿಗೆ ನೋಂದಣಿ ಶುಲ್ಕ ರೂ.100. ಆನ್‌ಲೈನ್ ಮೂಲಕ  www.educompoline.com ಜಾಲತಾಣದಲ್ಲಿ ಶುಲ್ಕ ಪಾವತಿಸಬಹುದು. ಆಫ್‌ಲೈನ್‌ನಲ್ಲಿ ಟಾಟಾ ಇಂಡಿಕಾಂ ಹಾಗೂ ಡೊಕೊಮೊ ರೀಟೇಲರ್‌ಗಳ ಬಳಿ ಶುಲ್ಕ ತುಂಬಬಹುದು. ಸ್ಪರ್ಧಿಗಳು ಫೋನ್‌ನಲ್ಲಿ ಮೊದಲ ಸ್ಪರ್ಧೆ ಎದುರಿಸುತ್ತಾರೆ.
 
ಅಂತಿಮ ಸ್ಪರ್ಧೆ ನಾನಾ ಸ್ಥಳಗಳಲ್ಲಿ ನಡೆಯುತ್ತದೆ. ಎಜ್ಯುಒಲಿಂಪಿಡಿಯಾ ವಿಜೇತರಿಗೆ ರೂ.25 ಸಾವಿರದಿಂದ ಒಂದೂವರೆ ಲಕ್ಷ  ಬಹುಮಾನದೊಂದಿಗೆ `ಎಜ್ಯುಒಲಿಂಪಿಡಿಯಾ~ ಎಂದು ಬ್ರ್ಯಾಂಡ್ ನೀಡಲಾಗುವುದು. ಸ್ಪರ್ಧೆಗೆ ನೋಂದಣಿ ಆರಂಭಗೊಂಡಿದ್ದು ಫೆ.7 ಕೊನೆಯ ದಿನ. ಮಾಹಿತಿಗೆ: 91 92434 19000. www.educompoline.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.