ADVERTISEMENT

ಎಸ್‌ಎಸ್‌ಎಲ್‌ಸಿ ಮತ್ತಷ್ಟು ಸಲೀಸು

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST
ಎಸ್‌ಎಸ್‌ಎಲ್‌ಸಿ ಮತ್ತಷ್ಟು ಸಲೀಸು
ಎಸ್‌ಎಸ್‌ಎಲ್‌ಸಿ ಮತ್ತಷ್ಟು ಸಲೀಸು   

ಎಸ್‌ಎಸ್‌ಎಲ್‌ಸಿ ಪರೀಕ್ಷೆಯೆಂದರೆ ಮಕ್ಕಳೊಂದಿಗೆ ಪೋಷಕರಿಗೂ ನಡುಕ... `ಅಮ್ಮಾ ಆ ಸಬ್ಜೆಕ್ಟ್‌ನಲ್ಲಿ ನಾನು ಪರ‌್ಫೆಕ್ಟ್ ಇದ್ದೀನಿ...ಎಲ್ಲಾ ಓದಿ ಮುಗ್ಸಿದ್ದೀನಿ..~ ಎಂದು ಸಬೂಬು ಹೇಳಿ ಸ್ನೇಹಿತರ ಮನೆಗೆ ಹಾರುವ ನೆಪ ಇನ್ನು ಮುಂದೆ ನಡೆಯದು. ತನ್ನ ಮಗ/ಮಗಳ ಸಾಮರ್ಥ್ಯವನ್ನು ಪೋಷಕರು ಮನೆಯಲ್ಲೇ ಪರೀಕ್ಷಿಸಬಹುದು, ಆ ವಿಷಯಕ್ಕೇ `ಔಷಧ~ ನೀಡಿ ವಿದ್ಯಾರ್ಥಿಯನ್ನು ಮತ್ತಷ್ಟು ಬುದ್ಧಿವಂತನನ್ನಾಗಿ ಮಾಡಬಹುದು.

ಒತ್ತಡದ ನಡುವೆ ಓದಲು ಶ್ರಮಿಸುವ ಮಗುವಿಗೆ ನೆರವಾಗಲು ಮೈಂಡ್ ಗುರು ಸೊಲ್ಯೂಷನ್ ಕಂಡುಕೊಂಡ ಸುಲಭ ಪರಿಹಾರವೇ `ಮಲ್ಟಿ ಡೈಮೆನ್ಶನಲ್ ಲರ್ನಿಂಗ್ ಸೀಡಿ~. ಇದು ಕೇವಲ ಅಕ್ಷರಗಳಲ್ಲಿ ಮಾಹಿತಿ ನೀಡಲಷ್ಟೇ ಸೀಮಿತವಲ್ಲ. ತಮ್ಮದೇ ಆದ ಸ್ವಂತ ಕಲಿಕಾ ವಿಧಾನ ಅಳವಡಿಸಿಕೊಳ್ಳಲು ಇದು ಸಹಕಾರ ನೀಡುತ್ತದೆ. ಕಂಪ್ಯೂಟರ್‌ನಲ್ಲಿ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತಾ ಒಂದು ಹಂತಕ್ಕೆ ನಿಶ್ಚಲರಾಗಿ ಮುಂದೇನು ಎಂದು ಮರೆತು ಹೋದಾಗ, ಈ ಸಾಫ್ಟ್‌ವೇರ್ ಮುಂದಿನ ನಡೆಯ ಬಗ್ಗೆ `ಹಿಂಟ್~ ನೀಡುತ್ತದೆ.

ಸೀಡಿಯಲ್ಲಿ `ಆಡಿಯೋ~ ಸೌಲಭ್ಯವೂ ಇರುವುದರಿಂದ ಶಿಕ್ಷಕರಂತೆ ಇದು ಬೋಧಿಸುತ್ತದೆ, ಮಾರ್ಗದರ್ಶನ ನೀಡುತ್ತದೆ. ಓದಲು ಇಷ್ಟಪಡದ ಕೆಲ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಬರಹದಲ್ಲಿರುವ ಎಲ್ಲಾ ಪದಗಳನ್ನೂ ಸ್ವರದ ಮೂಲಕ ಹೇಳಲಾಗಿದೆ. ಇದು ತರಗತಿಯ ಅನುಭವ ನೀಡಲಿದ್ದು ಮನರಂಜನೆಗೂ ಅವಕಾಶವಿದೆ. ಕೆಲವು ಶಾಲೆಗಳಲ್ಲಿ ಪ್ರಾತ್ಯಕ್ಷಿಕೆ ನೀಡುವ ವೇಳೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ರಿಯಾಯಿತಿ ದರದಲ್ಲಿ ಶಾಲೆಗಳಿಗೆ ಹಂಚುವ ಬಗ್ಗೆ ಚಿಂತನೆಯೂ ನಡೆದಿದೆ.

ADVERTISEMENT

ವಿಜ್ಞಾನದ ಸೀಡಿಯಲ್ಲಿ 2000 ಪ್ರಶ್ನೆಗಳಿದ್ದು ಸುಮಾರು 50 ಚಿತ್ರಗಳಿವೆ. ಪ್ರಶ್ನೆಗೆ ಉತ್ತರ ಬರೆಯುವಾಗ ಇಲ್ಲವೇ ಸಮಸ್ಯೆ ಬಿಡಿಸುವಾಗ ತಪ್ಪು ನಡೆ ಇಡಲು ಅವಕಾಶವೇ ಇಲ್ಲ. ಒಂದು ವೇಳೆ ತಪ್ಪಾದರೂ ಅದು ಎಚ್ಚರಿಸುತ್ತದೆ. ಕೇವಲ ಗೈಡ್‌ಅನ್ನೇ ನಂಬಿ ಪರೀಕ್ಷೆ ಬರೆಯುವ ಬದಲು ಈ ಸೀಡಿ ಬಳಸಿಕೊಂಡು ಕಡಿಮೆ ಹೊತ್ತಿನಲ್ಲಿ ಹೆಚ್ಚಿನ ಪ್ರಮಾಣದ ಓದಿಗೆ ಇದು ಪ್ರೇರೇಪಿಸುತ್ತದೆ. ಪುಸ್ತಕ ಎಂದಾಕ್ಷಣ ದೂರ ಓಡುವ ಕಂಪ್ಯೂಟರ್ ಇಷ್ಟಪಡುವ ಮಕ್ಕಳಿಗೂ ಇದು ನೆರವಾಗಲಿದೆ. 

ರೆಂಡರ್, ರಿಪೀಟ್, ರಿಕಾಲ್ ಎಂಬ ಮೂರು ಅಂಶಗಳ ಸೂತ್ರವನ್ನು ಇಲ್ಲಿ ಅಳವಡಿಸಲಾಗಿದೆ. ಕಲಿಯಲು ಅಗತ್ಯವಾದ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಉದ್ದೇಶ. ಸರಾಸರಿ ಇಲ್ಲವೇ ಅದಕ್ಕಿಂತ ಕಡಿಮೆ `ಐಕ್ಯೂ~ ಇರುವ ಮಕ್ಕಳೂ ಉತ್ತಮ ಅಂಕ ಗಳಿಸುವಂತೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಈ ವಿಧಾನ ಜಾರಿಗೆ ತರಲಾಗಿದೆ ಎನ್ನುತ್ತಾರೆ ಮೈಂಡ್ ಗುರು ಸಲ್ಯೂಷನ್ ನಿರ್ದೇಶಕ ಆದಿಕೇಶವ ಶಾಸ್ತ್ರಿ.

ಈ ಸಾಫ್ಟ್‌ವೇರ್‌ನಲ್ಲಿ 1,500 ಪ್ರಶ್ನೆಗಳಿವೆ. ಕಬ್ಬಿಣದ ಕಡಲೆ ಎಂದು ಗುರುತಿಸಲಾದ ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಈ ಸೀಡಿ ಸುಲಭ ಪರಿಹಾರ ನೀಡಲಿದೆ. ಮೂರು ಸಿಡಿಗಳನ್ನೊಳಗೊಂಡ ಪ್ಯಾಕೇಜ್ ಇದೀಗ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಸಿಡಿಯನ್ನೂ ಹೊರತರಲಾಗುವುದು ಎಂಬ ಭರವಸೆ ನಿರ್ದೇಶಕರದ್ದು.

ಇದಕ್ಕಾಗಿ ಮೂವತ್ತು ಜನರ ತಂಡ ಕಳೆದ ಐದು ವರ್ಷಗಳಿಂದ ಶ್ರಮಿಸುತ್ತಿದೆ. ವಿದ್ಯಾಭ್ಯಾಸ ಎನ್ನುವುದು ಮಕ್ಕಳಿಗೆ ಶಿಕ್ಷೆ ಆಗಬಾರದೆಂಬ ಏಕಮಾತ್ರ ಉದ್ದೇಶ ನಮ್ಮದು. ಶಾಲೆ-ಟ್ಯೂಷನ್-ಹೋಮ್‌ವರ್ಕ್ ಎಂಬ ರುಟೀನ್‌ಗೆ ಒಗ್ಗಿಹೋಗುವ ಮಗು ಇಷ್ಟಪಟ್ಟು ಓದುವ ಹವ್ಯಾಸವನ್ನು ದ್ವೇಷಿಸುತ್ತದೆ. ಮತ್ತೆ ಮಗುವನ್ನು ಓದಿನೆಡೆ ಸೆಳೆಯುವ ಪ್ರಯತ್ನದ ಪ್ರತಿಫಲವೇ ಈ ಸೀಡಿ ಎನ್ನುತ್ತಾರೆ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ಮೂರ್ತಿ.

ಈ ತಂತ್ರಜ್ಞಾನವನ್ನು ಗೇಮಿಂಗ್ ಮಾದರಿಯಲ್ಲಿ ತಯಾರಿಸಲಾಗಿದ್ದು ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಸುಲಭವಾಗಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು. ಆರಂಭದಲ್ಲಿ ವಿದ್ಯಾರ್ಥಿಯು ಪ್ರಶ್ನೋತ್ತರಗಳನ್ನು ಅರ್ಥೈಸಿಕೊಳ್ಳಲು 10ರಿಂದ 15 ಗಂಟೆ ತೆಗೆದುಕೊಳ್ಳಬಹುದು. ಸತತ 40 ದಿನ ಅಭ್ಯಾಸ ನಡೆಸಿದರೆ ಪರೀಕ್ಷೆ ಬರೆಯುವಾಗ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಸಾಮಾನ್ಯ ವಿದ್ಯಾರ್ಥಿಗಳೂ ಅನುತ್ತೀರ್ಣರಾಗುವ ಭಯ ಬಿಟ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ತಂದೆ ತಾಯಿ ಮಗುವಿನೊಂದಿಗೆ ಕುಳಿತು ಏನು ಓದುತ್ತಿದ್ದಾನೆ ಎಂದು ತಿಳಿದುಕೊಳ್ಳಬಹುದು. ಆತನ ಆಸಕ್ತಿಯನ್ನು ಗುರುತಿಸಬಹುದು ಹಾಗೂ ಅದೇ ಕ್ಷೇತ್ರದಲ್ಲಿ ಇನ್ನಷ್ಟು ಪ್ರೋತ್ಸಾಹ ನೀಡಬಹುದು. ಮಕ್ಕಳ ಭವಿಷ್ಯ ನಿರ್ಮಿಸುವಲ್ಲೂ ಈ ಸಿಡಿಯ ಪಾತ್ರ ಹಿರಿದು ಎನ್ನುವುದು ಸಿಡಿ ತಂಡದ ಮಾತು.

ಈ `ಮಲ್ಟಿ ಡೈಮನ್ಶನಲ್ ಲರ್ನಿಂಗ್~ ಸೀಡಿ ಇದೇ 15ರಿಂದ ಮಾರುಕಟ್ಟೆಯಲ್ಲಿ ಲಭ್ಯ. ಬೆಲೆ: ರೂ 699. ಸಂಪರ್ಕಕ್ಕೆ 98862 11712.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.