ADVERTISEMENT

ಏಸರ್‌ನಿಂದ ನೂತನ ನೋಟ್‌ಬುಕ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2012, 19:30 IST
Last Updated 8 ಜುಲೈ 2012, 19:30 IST
ಏಸರ್‌ನಿಂದ ನೂತನ ನೋಟ್‌ಬುಕ್
ಏಸರ್‌ನಿಂದ ನೂತನ ನೋಟ್‌ಬುಕ್   

ಏಸರ್ ಕಂಪೆನಿ ತನ್ನ ಗೇಟ್‌ವೇ ಬ್ರಾಂಡ್ ಮೂಲಕ ವಿನೂತನ ಎನ್‌ಇ ಸೀರೀಸ್ ನೋಟ್‌ಬುಕ್‌ಗಳನ್ನು ಬಿಡುಗಡೆ ಮಾಡಿದೆ.ಮಲ್ಟಿ ಟಾಸ್ಕಿಂಗ್ ನೋಟ್‌ಬುಕ್ ಇದಾಗಿದ್ದು, ಹೆಚ್ಚು ಗ್ರಾಹಕರನ್ನು ತಲುಪುವ ಉದ್ದೇಶದಿಂದ ಕಡಿಮೆ ಬೆಲೆಗೆ ಈ ನೋಟ್‌ಬುಕ್ ಹೊರತರಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

`ಗ್ರಾಹಕರು ತಮ್ಮ ಹಣಕ್ಕೆ ತಕ್ಕ ಮೌಲ್ಯ, ಕಾರ್ಯನಿರ್ವಹಣೆ ಸಾಮರ್ಥ್ಯವನ್ನು ಈ ನೋಟ್‌ಬುಕ್‌ನಿಂದ ಪಡೆಯಬಹುದು. ಈ ಎನ್‌ಇ ಸಿರೀಸ್ ನೋಟ್‌ಬುಕ್‌ಗಳು ಉತ್ಕೃಷ್ಟವಾದ ಕಂಪ್ಯೂಟಿಂಗ್ ಅನುಭವ ನೀಡಲಿದೆ. ಹೀಗಾಗಿ ಕಡಿಮೆ ಬೆಲೆಯೊಂದಿಗೆ ಗುಣಮಟ್ಟ ಪಡೆಯಬಹುದು~ ಎಂದರು ಏಸರ್ ಇಂಡಿಯಾದ ಮಾರುಕಟ್ಟೆ ಮುಖ್ಯಾಧಿಕಾರಿ ಎಸ್. ರಾಜೇಂದ್ರನ್.

ನೋಟ್‌ಬುಕ್ ಇಂಟೆಲ್‌ನ ಪೆಂಟಿಯಮ್ ಮತ್ತು ಕೋರ್ ಐ3, ಸೆಕೆಂಡ್ ಜನರೇಶನ್ ಪ್ರೊಸೆಸರ್ ಬೆಂಬಲ ಹೊಂದಿದೆ. ವಿನ್ಯಾಸವೂ ಚೆನ್ನಾಗಿದ್ದು, ಅತಿ ಕಡಿಮೆ ವಿದ್ಯುತ್ ಬಳಸಿಕೊಳ್ಳುತ್ತದೆ. ಒನ್ ಟಚ್ ಸೋಶಿಯಲ್ ನೆಟ್‌ವರ್ಕಿಂಗ್ ಬಟನ್ ಆಗಿರುವ ಸೋಷಿಯಲ್ ನೆಟ್‌ವರ್ಕ್ 3.0 ಹಾಗೂ ಮೈ ಬ್ಯಾಕಪ್ ಅಪ್ಲಿಕೇಶನ್‌ಗಳು ಇದರಲ್ಲಿದೆ.

ಮಲ್ಟಿ ಇನ್ ಒನ್ ಕಾರ್ಡ್ ರೀಡರ್‌ಗೆ ಅತ್ಯಂತ ವೇಗವಾಗಿ ಸಂಪರ್ಕ ಕಲ್ಪಿಸುತ್ತದೆ. 8 ಜಿಬಿವರೆಗೆ ಮೆಮರಿ ಮತ್ತು 1 ಜಿಬಿ ಹಾರ್ಡ್ ಡಿಸ್ಕ್ ಅವಕಾಶ ಇದರಲ್ಲಿದೆ. ಡಿಡಿಆರ್ 3 ಸೌಲಭ್ಯವಿದ್ದು, 15.6 ಮತ್ತು 14.0 ಇಂಚಿನ ಅಳತೆಯಲ್ಲಿ 2.6 ಕೆಜಿ ತೂಕ ಹೊಂದಿದೆ. ಹೆಚ್ ಡಿ 720 ಇಪಿ ರೆಸೊಲ್ಯೂಷನ್ ಎಲ್‌ಇಡಿ ಬ್ಯಾಕ್‌ಲೈಟ್ ಟಿಎಫ್‌ಟಿ ಎಲ್‌ಸಿಡಿ ಡಿಸ್ಪ್ಲೇ, 16:9 ಆಸ್ಪೆಟ್ ರೇಶಿಯೊ, ಮಲ್ಟಿ ಗೆಸ್ಟರ್ ಟಚ್‌ಪ್ಯಾಡ್ ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಈ ನೋಟ್‌ಬುಕ್‌ನ ಆರಂಭಿಕ ಬೆಲೆ 20,499ರೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.