ADVERTISEMENT

ಒಂದು ಜೀವನ ಸಾಲದು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2012, 19:30 IST
Last Updated 13 ಸೆಪ್ಟೆಂಬರ್ 2012, 19:30 IST
ಒಂದು ಜೀವನ ಸಾಲದು ಬಿಡುಗಡೆ
ಒಂದು ಜೀವನ ಸಾಲದು ಬಿಡುಗಡೆ   

ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್: ಗಾಂಧೀ ಭವನ, ಕುಮಾರ ಕೃಪಾ ರಸ್ತೆ. ಕುಲದೀಪ್ ನಯ್ಯರ್ ಅವರ `ಒಂದು ಜೀವನ ಸಾಲದು~ ಆತ್ಮಕತೆ ಶನಿವಾರ ಲೋಕಾರ್ಪಣೆಗೊಳ್ಳಲಿದೆ. ಅಧ್ಯಕ್ಷತೆ ಮತ್ತು ಕೃತಿಯ ಅನಾವರಣ- ಡಾ. ಚಿರಂಜೀವಿ ಸಿಂಗ್. ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಹಾಗೂ ಕೃತಿ ಪರಿಚಯ ಮಾಡಿಕೊಡುವವರು- ಪತ್ರಕರ್ತೆ ಡಾ. ಆರ್ ಪೂರ್ಣಿಮಾ. ಉಪಸ್ಥಿತಿ- ಡಾ. ಕುಲದೀಪ್ ನಯ್ಯರ್. ಸಂಜೆ 5.30.

ಕೃತಿ ಕುರಿತು: `ಒಂದು ಜೀವನ ಸಾಲದು!~ ಪತ್ರಕರ್ತ ಕುಲದೀಪ್ ನಯ್ಯರ್ ಅವರ ಆತ್ಮಕಥೆ ಮತ್ತು ಆ ಸ್ವರೂಪದಲ್ಲಿರುವ ಸ್ವಾತಂತ್ರ್ಯೋತ್ತರ ಭಾರತದ ಸತ್ಯಕತೆ. ಇದು ಒಬ್ಬ ವ್ಯಕ್ತಿಯ ಬದುಕಿನ ವಿವರಣೆಗಿಂತ ಕಳೆದ ಏಳು ದಶಕಗಳ ಏಳುಬೀಳುಗಳ ನಿರೂಪಣೆಯೇ ಹೆಚ್ಚು. ಇದು ಸ್ವಂತ ಸಂಗತಿಗಳ ಆಪ್ತಕಥನವಲ್ಲ, ಸಮಕಾಲೀನ ಚರಿತ್ರೆಯ ಕೋಶ. ತೊಂಬತ್ತರ ಎತ್ತರದಲ್ಲಿರುವ ಕುಲದೀಪ್ ನಯ್ಯರ್ ಭಾರತದ ಹಿರಿಯ ಪತ್ರಕರ್ತ, ಅಂಕಣಕಾರ, ಲೇಖಕ, ಮಾನವ ಹಕ್ಕುಗಳ ಪ್ರತಿಪಾದಕ. ಅವರ `ಬಿಟ್ವೀನ್ ದಿ ಲೈನ್ಸ್~ ಸಿಂಡಿಕೇಟೆಡ್ ಅಂಕಣ ದೇಶ ವಿದೇಶಗಳಲ್ಲಿ 14 ಭಾಷೆಗಳಲ್ಲಿ 80ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT