ADVERTISEMENT

ಒಡೆಯರ್ ಜಯಂತಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 19:30 IST
Last Updated 2 ಫೆಬ್ರುವರಿ 2011, 19:30 IST

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಶುಕ್ರವಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೆ. ಬೆಳಿಗ್ಗೆ 11.30ಕ್ಕೆ  ನಾಗಮಂಗಲದ ಮಹದೇವಪ್ಪ, ಮಂಡ್ಯದ ಸಿದ್ಧರಾಜು, ಹಾವೇರಿಯ ಶಿವಪುತ್ರಪ್ಪ ಶೆಟ್ಟರ್, ಧಾರವಾಡದ ವೆಂಕಪ್ಪ ಪುಲಿ, ಉತ್ತರ ಕನ್ನಡ ಜಿಲ್ಲೆ ಅಘನಾಶಿನಿಯ ಶಿವಾನಂದ ಗೌಡ, ಬೆಳಗಾವಿಯ ಕೈಲಾಸ ಸುಭಾಷ ಮುದಬಾವಿ, ರಾಮನಗರದ ಲೋಕೇಶ್, ಬಾಗಲಕೋಟೆಯ ಬಾಲಪ್ಪ ಪೂಜಾರಿ ಮತ್ತು ತಂಡದಿಂದ ಜಾನಪದ ಕುಣಿತ.

ಸುನಿತಾ  ಮತ್ತು ತಂಡದಿಂದ ಕನ್ನಡ ಗೀತೆಗಳು, ಎಸ್. ಗೋಪಾಲ್ ಮತ್ತು ತಂಡದಿಂದ ನಾದಸ್ವರ. ಉದಯ ಅಂಕೋಲ ಮತ್ತು ತಂಡದಿಂದ ಭಾವಗೀತೆಗಳ ಗಾಯನ. ವಿ. ಹನುಮಂತಯ್ಯ ಅವರಿಂದ ಕನ್ನಡ ಗೀತೆಗಳು. ಮಧ್ಯಾಹ್ನ 2.30ಕ್ಕೆ ವಿಚಾರ ಸಂಕಿರಣ. ಮೈಸೂರಿನ ಡಾ.ಎಂ.ಎಸ್. ನಾಗರಾಜರಾವ್ (ಒಡೆಯರ್ ಕಾಲದ ಪಾರಂಪರಿಕ ವಾಸ್ತು ಶಿಲ್ಪ), ಪ್ರೊ.ಪಿ.ವಿ. ನಂಜರಾಜ ಅರಸ್ (ಸಾಮಾಜಿಕ ಸಮಸ್ಯೆಗಳು). ಅಧ್ಯಕ್ಷತೆ: ವೆಂಕಟಾಚಲ ಶಾಸ್ತ್ರಿ.

ಸಂಜೆ 4.15ಕ್ಕೆ ಸುಚೇತನ ರಂಗಸ್ವಾಮಿ ತಂಡದಿಂದ ಕನ್ನಡ ಗೀತೆಗಳು. ಸುಮಾ ಸುಧೀಂದ್ರ ವೀಣಾವಾದನ. ಬೆಳಗಾವಿಯ ಅನಂತ ತೇರದಾಳ ಅವರಿಂದ ಹಿಂದುಸ್ತಾನಿ ಸಂಗೀತ. ಫಲ್ಗುಣ  ತಂಡದಿಂದ ಕನ್ನಡ ಗೀತೆಗಳು. ವಿವೇಕಾನಂದ ಕಲಾ ಕೇಂದ್ರದಿಂದ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ನೃತ್ಯ ರೂಪಕ.

ಮೈಸೂರು ರಾಜ ಮನೆತನದ 24ನೇ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ 1884 ರಿಂದ 1940ರ ಅವಧಿಯಲ್ಲಿ ಆಡಳಿತ ನಡೆಸಿದವರು. ಸ್ವಾತಂತ್ರ್ಯ ಚಳವಳಿ ರೂಪುಗೊಳ್ಳುತ್ತಿದ್ದ ಕಾಲದಲ್ಲಿ ಪಟ್ಟ ಏರಿದಾಗ ಇವರಿನ್ನೂ ಬಾಲಕ. ಹೀಗಾಗಿ ತಾಯಿ ಕೆಂಪನಂಜಮ್ಮಣ್ಣಿ ಆಡಳಿತ ನೋಡಿಕೊಳ್ಳುತ್ತಿದ್ದರು. ಪ್ರಾಪ್ತ ವಯಸ್ಕರಾದ ಮೇಲೆ ರಾಜ್ಯಾಡಳಿತ ವಹಿಸಿಕೊಂಡ ಇವರು ರಾಜ್ಯದ ಎಲ್ಲೆಡೆ ಪ್ರವಾಸ ಕೈಗೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಹತ್ತಿರವಾದರು. ಆಸ್ಪತ್ರೆಗಳು, ಸಾರಿಗೆ ಸಂಪರ್ಕಕ್ಕೆ ಹೆಚ್ಚು ಗಮನ ನೀಡಿದರು. ಆಗ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರ ಸಹಕಾರದಲ್ಲಿ ಬೃಹತ್ ಕೈಗಾರಿಕೆಗಳು, ನೀರಾವರಿ ಯೋಜನೆಗಳಂಥ ಪ್ರಗತಿಪರ ಕೆಲಸಗಳಿಂದಾಗಿ ಕರ್ನಾಟಕದ ಇತಿಹಾಸದಲ್ಲಿ ಒಡೆಯರ್ ಹೆಸರು ಚಿರಸ್ಥಾಯಿಯಾಯಿತು.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.