ADVERTISEMENT

ಒಳಾಂಗಣ ಅಲಂಕಾರ ದರ್ಶಿನಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 13:35 IST
Last Updated 23 ಫೆಬ್ರುವರಿ 2011, 13:35 IST
ಒಳಾಂಗಣ ಅಲಂಕಾರ ದರ್ಶಿನಿ
ಒಳಾಂಗಣ ಅಲಂಕಾರ ದರ್ಶಿನಿ   

ಮನೆಯ ಒಳಾಲಂಕರಣವೇ ಬಹಳ ಕಷ್ಟದ ಮತ್ತು ಪರಿಣತಿ ಬೇಡುವ ಕೆಲಸ. ಆದರೆ ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಶನಿವಾರದ ವರೆಗೆ ನಡೆಯಲಿರುವ ‘ಬಿಲ್ಡ್ ಆರ್ಕ್ ಮತ್ತು ಬಿಲ್ಡ್ ಫ್ಲೋರ್-2011’ ಪ್ರದರ್ಶನ ನಿಮ್ಮ ಆ ಶ್ರಮವನ್ನು ಹಗುರಗೊಳಿಸುತ್ತದೆ.

ಬೆಂಗಳೂರು ಇಂಟರ್‌ನ್ಯಾಷನಲ್ ಎಗ್ಸಿಬಿಷನ್ ಸರ್ವೀಸಸ್ ಆಯೋಜಿಸಿರುವ ಈ ಪ್ರದರ್ಶನದಲ್ಲಿ ಒಳಾಂಗಣ ಅಲಂಕರಣದ ಸಾಮಗ್ರಿಗಳು ಮತ್ತು ಆ ಕುರಿತು ಮಾಹಿತಿ ಪಡೆಯಬಹುದು. ಅಲಂಕಾರಿಕ ವಸ್ತುಗಳು, ಐಷಾರಾಮಿ ಆಸನಗಳು, ರಬ್ಬರ್ ಸೇರಿದಂತೆ ವಿವಿಧ ಬಗೆಯ ನೆಲಹಾಸು, ಅತ್ಯುತ್ತಮ ಕಲಾಕೃತಿಗಳನ್ನು ನೋಡಬಹುದು.

ಸೌರಶಕ್ತಿಯಿಂದ ಸಜ್ಜಿತವಾದ, ಜರ್ಮನ್-ಆಸ್ಟ್ರೀಯಾ ಸಹಭಾಗಿತ್ವದಲ್ಲಿ ಸ್ಟೀಲ್ ಮತ್ತು ಫೈಬರ್‌ನಿಂದ ನಿರ್ಮಿಸಲಾಗಿರುವ ‘ಮಾದರಿ ಪರಿಸರ ಸ್ನೇಹಿ ಮನೆ’ ಪ್ರದರ್ಶನದ ಪ್ರಮುಖ ಆಕರ್ಷಣೆ. ಜಿರೋ ಎನರ್ಜಿ ಸ್ಪೇಸ್ ಎಂಬ ಈ ಮನೆ ವೆಚ್ಚ ಸಾಮಾನ್ಯ ಮನೆ ನಿರ್ಮಾಣಕ್ಕಿಂತ ಶೇ 15ರಷ್ಟು ಕಡಿಮೆ.
ನೆಲಹಾಸಿನ ವಿವಿಧ ಬಗೆಯ ಟೈಲ್ಸ್,

ಇಂಟರ್‌ಲಾಕ್‌ಗಳು, ಪೇಂಟ್, ಖುಷಿ ಕಲೆಕ್ಷನ್ಸ್‌ನ ಬಹುಉಪಯೋಗಿ ಟೇಬಲ್‌ಗಳು, ಮನೆಯ ಅಡಿಪಾಯ ಮತ್ತು ನೆಲಹಾಸನ್ನು ಸಮತಲಗೊಳಿಸಲು ಬಳಸುವ ಲೇಸರ್ ಸಿಸ್ಟಮ್ಸ್‌ನ ಲೈನ್ ಲೇವಲ್ ಲೇಸರ್ ಯಂತ್ರ, ಟಾಟಾ ಸ್ಟೀಲ್ಸ್‌ನವರ ವಿಶಾಲ ಒಳ ಸಭಾಂಗಣದ  ಮಾದರಿ  ಪ್ರದರ್ಶನದಲ್ಲಿ ಇಡಲಾಗಿದೆ.ನ್ಯೂಜಿಲೆಂಡ್, ಇಟಲಿ, ಕೊರಿಯಾ, ಟರ್ಕಿ ಸೇರಿದಂತೆ ವಿವಿಧ ದೇಶಗಳ ಅಲಂಕಾರಿಕ ವಸ್ತುಗಳು ಇಲ್ಲಿವೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.