ADVERTISEMENT

ಓಣಂಗೆ ಕೇರಳ ಭೋಜನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಸೌತ್‌ಇಂಡೀಸ್, ಬಾನ್‌ಸೌತ್
ಓಣಂ ಅಂದರೆ ಕೇರಳದಲ್ಲಿ ಹೂ ಹಬ್ಬ. ಮಲಯಾಳಂ ಕ್ಯಾಲೆಂಡರ್‌ನ ಮೊದಲ ಮಾಸ `ಚಿಂಗಂ~ ಆರಂಭವನ್ನು ಸೂಚಿಸುತ್ತದೆ. ಜಾತಿ, ಧರ್ಮದ ಭೇದವಿಲ್ಲದೇ ಆಚರಿಸುವ ಈ ಹಬ್ಬದಲ್ಲಿ ತಿಂಡಿ, ತಿನಿಸು, ವಿಶೇಷ ಖಾದ್ಯಗಳಿಗೆ ಆದ್ಯತೆ. ಕೇರಳಿಗರ ಹಬ್ಬದ ಸಂಭ್ರಮ ಹೆಚ್ಚಿಸಲು ಸೌತ್‌ಇಂಡೀಸ್ ಮತ್ತು ಬಾನ್‌ಸೌತ್ ಗುರುವಾರದಿಂದ ಸೆಪ್ಟೆಂಬರ್ 11ರವರೆಗೆ ವಿಶೇಷ ಖಾದ್ಯ ಉತ್ಸವ ಹಮ್ಮಿಕೊಂಡಿವೆ.

ಬಾಯಲ್ಲಿ ನೀರೂರಿಸುವ ಅವಿಯಲ್, ಕಲಾನ್, ಎರುಸ್ಸೆರಿ, ಪಯರು ಥೋರನ್, ಮೆಜುಕ್ಕು ವೆರಟ್ಟಿ, ಕೇರಳ ರಸಂ, ಕೇರಳ ಸ್ಟೀಮ್ಡ ರೈಸ್, ಫ್ಲೇವರ್ಡ್‌ ರೈಸ್, ಅಪ್ಪಂ, ಮಲಬಾರ್ ಪರಾಟ, ಬನಾನಾ ಚಿಪ್ಸ್, ಚಕ್ಕಾ ಚಿಪ್ಸ್, ಇಂಜಿ ಪುಳಿ, ಚಮ್ಮಂತಿ, ಪೋಡಿ, ಕೇರಳ ಹಪ್ಪಳ, ಸಲಾಡ್, ರಯಿತಾ, ಎಲಕ್ಕಿ ಬಾಳೆಹಣ್ಣಿನ ಐಸ್‌ಕ್ರೀಂ ಮತ್ತಿತರ ವಿಶೇಷ ತಿನಿಸುಗಳನ್ನು ಈ ಊಟದಲ್ಲಿ ಮೆಲ್ಲಬಹುದು.

ಸ್ಥಳ: ಇಂದಿರಾನಗರ 100 ಅಡಿ ರಸ್ತೆ, ಇನ್‌ಫಂಟ್ರಿ ರಸ್ತೆ ಸೌತ್‌ಇಂಡೀಸ್ ರೆಸ್ಟೊರೆಂಟ್ ಮತ್ತು ಮಂತ್ರಿ ಸ್ಕ್ವೇರ್‌ನ ಬಾನ್‌ಸೌತ್. ವಿವರಗಳಿಗೆ 2266 7377.

ಓಣಂ ಸದ್ಯ
 `ಎಂದೆ ಕೇರಳಂ~ನಲ್ಲಿ ಸೆ. 11ರ ವರೆಗೂ ನಂಬೂದಿರಿ ಬಾಣಸಿಗರು ತಯಾರಿಸಿದ ಓಣಂ ವಿಶೇಷ ಭಕ್ಷ್ಯಗಳನ್ನು ಸವಿಯಬಹುದು. ಪಾಯಸ, ಚಿಪ್ಸ್‌ಗಳು, ಉಪ್ಪಿನಕಾಯಿ, ಕಲಾನ್, ಓಳನ್, ಅವಿಯಲ್, ಸಾಂಬಾರ್, ರಸಂ ಎರುಸ್ಸೆರಿ ಹೀಗೆ ಖಾದ್ಯ ವೈವಿಧ್ಯ ಬಾಯಲ್ಲಿ ನೀರೂರಿಸಲಿದೆ. ಸ್ಥಳ: ಎಂದೆ ಕೇರಳಂ, ಅಲಸೂರು ರಸ್ತೆ. ದೂ: 3242 1002. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.