ನಗರದ ಕಂದಮ್ಮಗಳ ಸುಖಕರ ಪಯಣ ಹೇಗಿದೆ ಎಂದು ಕ್ಯಾಮೆರಾ ಕಣ್ಣು ಹುಡುಕಿದಾಗ ಒಂದೊಂದೇ ಭಾವದ ಹನಿ ದಕ್ಕುತ್ತಾ ಹೋಯಿತು.
ಅಪ್ಪನ ಎದೆಬಡಿತ ಕೇಳಿಸಿಕೊಳ್ಳುವಂತೆ ಆತುಕೊಂಡ ಕಂದಮ್ಮ, ಏಳುತ್ತಿರುವ ಹೊಗೆ ನೋಡಲಾಗದೆ ಕಣ್ಮುಚ್ಚಿದ ಕಣ್ಮಣಿ, ಅಪ್ಪನ ಬೆನ್ನಿನ ಚೀಲದ ಮೇಲೆ ಇಹದ ಅರಿವು ಪಡೆದುಕೊಳ್ಳುತ್ತಿರುವ ಹಸುಳೆ, ಸಣ್ಣ ಗಾಡಿಯಲ್ಲಿ ಕುಳಿತು ಫುಟ್‌ಪಾತ್ ಹಾದಿಯಲ್ಲಿ ಕಾಣುವ ಆಗಂತುಕ ಮುಖಗಳಲ್ಲಿ ಏನನ್ನೋ ಹುಡುಕುತ್ತಿರುವ ಪುಟಾಣಿ...
ಹೀಗೆ ಟ್ರಾಫಿಕ್‌ನ ಜಂಜಡದ ನಡುವೆಯೂ ಇಲ್ಲಿ ಕಂದನ ನಗು, ಅಳು ಬಗೆಬಗೆ
ಯಾಗಿ ಹೊಮ್ಮುತ್ತಿದೆ. ಅಂದಹಾಗೆ, ಇಂದು ಮಕ್ಕಳ ದಿನಾಚರಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.