ADVERTISEMENT

ಕಥೆ ಹೇಳುವ ಸಂಸ್ಕೃತಿ ಉಳಿಸಲು ಕರೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ಕೆಂಗೇರಿ ಉಪನಗರದ ಹಿರಿಯನಾಗರಿಕ ವೇದಿಕೆಯು ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

‘ಹಿಂದಿನ ಕಾಲದಲ್ಲಿ ಮಕ್ಕಳಿಗೆ ಅಜ್ಜಿ, ತಾತ ಕಥೆ ಹೇಳುವ ಮೂಲಕ ಸಂಸ್ಕೃತಿ ಉಳಿಸುವ ಕಾರ್ಯ ನಡೆಯುತ್ತಿತ್ತು.  ಈಗ ಅದು ಮಾಯವಾಗಿದೆ.  ಹಿರಿಯ ನಾಗರಿಕರು ಪ್ರತಿ ತಿಂಗಳು ಕನಿಷ್ಟ ಒಂದೊಂದು ಶಾಲೆಗೆ ಭೇಟಿ ನೀಡಿ ಕಥೆ ಹೇಳುವ ಹವ್ಯಾಸ ಮುಂದುವರೆಸುವ ಮೂಲಕ ಕನ್ನಡದ ಬೆಳವಣಿಗೆಗೆ ಸಹಕಾರಿಯಾಗಬೇಕು’ ಎಂದು ಬ್ರಾಹ್ಮಣ ಸಭಾದ ಅಧ್ಯಕ್ಷ ಎಚ್.ಎಸ್. ಸುಧೀಂದ್ರಕುಮಾರ್ ಸಲಹೆ ನೀಡಿದರು. 

ಸಮಾರಂಭದಲ್ಲಿ ಎ.ಪಿ. ಕುಮಾರ್, ಚಂದ್ರಶೇಖರ್, ಹೈಮಾವತಮ್ಮ, ಸಿದ್ದಲಿಂಗಯ್ಯ, ಪುಟ್ಟಸ್ವಾಮಿ, ಬಾಲಸುಬ್ರಹ್ಮಣ್ಯ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.  ವೇದಿಕೆ ಅಧ್ಯಕ್ಷ ಎ.ಎನ್ ಶಿವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.