ADVERTISEMENT

ಕನ್ನಡ ಕಲಾ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಜೂನ್ 2015, 19:30 IST
Last Updated 17 ಜೂನ್ 2015, 19:30 IST
ಕನ್ನಡ ಕಲಾ ಸಂಭ್ರಮ
ಕನ್ನಡ ಕಲಾ ಸಂಭ್ರಮ   

ಒಂದೇ ವೇದಿಕೆಯಲ್ಲಿ ಕನ್ನಡ ಕಲೆ ಬೆಳಗಿಸುವಂಥ ರಂಗಗೀತೆ ಹಾಗೂ ಗೀತ ಗಾಯನ ಮತ್ತು ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ  ಸೊಗಸಾಗಿ ಮೂಡಿಬಂತು.

85ರ ಹರೆಯದ ಡಾ. ಎಂ. ಆರ್. ಎಸ್. ಅಯ್ಯಂಗಾರ್ ಅವರಿಂದ ಬೆರಗಾಗಿಸುವಂಥ ರಂಗಗೀತೆ ಹಾಗೂ ಯುವ ಪ್ರತಿಭೆ ಮುರುಳಿಕೃಷ್ಣ ಮತ್ತು ತಂಡದವರಿಂದ ಗೀತಗಾಯನ ಅತ್ಯುತ್ತಮವಾಗಿ ಮೂಡಿ ಬಂತು. 

ಡಾ. ಎಂ. ಆರ್. ಎಸ್. ಅಯ್ಯಂಗಾರ್ ಅವರ ವಯಸ್ಸಿಗೆ ಮೀರಿದ ಕಂಟಕ್ಕೆ ಬೆರಗಿದ ಪ್ರೇಕ್ಷಕರು ಹಾಗೂ ಅತಿಥಿಗಳು ನಿಂತು ಚಪ್ಪಾಳೆ ಮೂಲಕ ಅಭಿನಂದಿಸಿ ಗೌರವ ಸೂಚಿಸಿದರು.  ಕಾರ್ಯಕ್ರಮದಲ್ಲಿ ಜೂನಿಯರ್ ರಾಜಕುಮಾರ್ ಖ್ಯಾತಿಯ ಪರಶುರಾಮ್, ಪ್ರೇಕ್ಷಕರಿಗೆ ಡಾ. ರಾಜ್ ಕುಮಾರ್ ಅವರ ನೆನಪು ಮಾಡಿಸಿದರು. ಈ ಸಂದರ್ಭದಲ್ಲಿ ವೊಕ್ಕರಣೆ ಸೇವಾ ಟ್ರಸ್ಟ್, ಆಯ್ದ ಪ್ರತಿಭಾವಂತ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.