ADVERTISEMENT

ಕಲಾ ಜುಗಲ್‌ಬಂದಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST
ಕಲಾ ಜುಗಲ್‌ಬಂದಿ
ಕಲಾ ಜುಗಲ್‌ಬಂದಿ   

ಕೆ. ನಲ್ಲತಂಬಿ ಪ್ರಖ್ಯಾತ ಛಾಯ್ರಾಗ್ರಾಹಕರು. ಇವರ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ ವಸ್ತುವಿಷಯವೆಲ್ಲವೂ ಒಂದು ಸುಂದರ ಛಾಯಾಚಿತ್ರವಾಗಿ ಹೊರಹೊಮ್ಮುತ್ತದೆ. ಅವರ ನೋಟದಲ್ಲಿ ನಾವೀನ್ಯತೆ, ವಿಭಿನ್ನತೆ ಇದೆ ಎಂಬುದನ್ನು ಅವರು ಕ್ಲಿಕ್ಕಿಸಿದ ಫೋಟೋಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಕಳೆದ 25 ವರ್ಷಗಳಲ್ಲಿ ಇವರು ತೆಗೆದ ಫೋಟೋಗಳ ಸಂಖ್ಯೆ ಸಾವಿರದ ಗಡಿ ದಾಟಿದೆ.

ಬ್ರಿಟನ್‌ನ ಟಿಲ್ಲಿ ಗಿಫೋರ್ಡ್ ಸಮಕಾಲೀನ ವಿಷಯಗಳನ್ನು ತಮ್ಮ ಕುಂಚದಲ್ಲಿ ಕುಶತೆಯಿಂದ ಬಳಸುವ ಮೇಧಾವಿ. ಸಾಮಾಜಿಕ ಹಾಗೂ ಆರ್ಥಿಕ ವಿಷಯಗಳನ್ನು ಆಯ್ದುಕೊಂಡು ಅದಕ್ಕೆ ಬಣ್ಣ ಲೇಪಿಸಿದ್ದಾರೆ.

ಜತೆಗೆ ಖ್ಯಾತಿಯನ್ನು ಗಳಿಸಿದ್ದಾರೆ. ಭಾವಚಿತ್ರ ರಚನೆಯಲ್ಲಿ ಇವರದು ಎತ್ತಿದ ಕೈ. ಇವು ಆ ವ್ಯಕ್ತಿಯೇ ನಮ್ಮ ಕಣ್ಣಮುಂದೆ ಇರುವ ಭಾವವನ್ನು ಮನಸ್ಸಿನಲ್ಲಿ ಹುಟ್ಟುಹಾಕುತ್ತವೆ.

ಸೋಮಾಂಷ್ ಅವರ ಕಲೆ ಸೌಂದರ್ಯಶಾಸ್ತ್ರಕ್ಕೆ ಸಂಬಂಧಿಸಿದ್ದು. ಈ ಕಲಾಕೃತಿಗಳನ್ನು ನೋಡಿದಾಕ್ಷಣ ಮನಸ್ಸಿನಲ್ಲಿ ರಸಾಭಿಜ್ಞತೆಯ ಭಾವ ತನ್ನಷ್ಟಕ್ಕೆ ತಾನೇ ಉಕ್ಕುತ್ತದೆ. ಮನಸ್ಸನ್ನು ಉಲ್ಲಸಿತವಾಗಿಡುವ ಈ ಕಲಾಕೃತಿಗಳನ್ನು ಇಷ್ಟಪಡದೇ ಇರುವವರು ವಿರಳ. ಈ ಕಲಾಕೃತಿಗಳಿಗೆ ಜೀವನೋತ್ಸಾಹವನ್ನು ಇಮ್ಮಡಿಗೊಳಿಸುವ ಶಕ್ತಿಯಿದೆ. ಇದೇ ಇವರ ಹೆಗ್ಗಳಿಕೆ.

ನಲ್ಲ ತಂಬಿ ಅವರ ಅಪರೂಪದ ಛಾಯಾಚಿತ್ರಗಳು, ಟಿಲ್ಲಿ ಅವರ ಸಮಕಾಲೀನ ಚಿತ್ರಕಲಾಕೃತಿಗಳು, ಸುಂದರ ಸೋಮಾಂಷ್ ಕಲೆಯ ದೊಡ್ಡ ಸಂಗ್ರಹಗಳ ಜುಗಲ್‌ಬಂದಿ ಅ.30ರ ವರೆಗೆ ರಿನೈಸೆನ್ಸ್ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿವೆ.
ಸ್ಥಳ: 104 ವೆಸ್ಟ್‌ಮಿನಿಸ್ಟರ್, 13 ಕನ್ನಿಂಗ್‌ಹ್ಯಾಮ್ ರಸ್ತೆ. ಮಾಹಿತಿಗೆ: 2220 2232. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT