ADVERTISEMENT

ಕಾಫಿ ಡೇ ವೇಕಪ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಕಾಫಿ ಡೇ ನಲ್ಲಿ ಕೂತು ಒಂದು ಕಪ್ ಕಾಫಿ ಹೀರುವ ಮಜವೇ ಬೇರೆ. ಆ ರುಚಿ ಮನೆಯಲ್ಲೂ ಸಿಗುವಂತಿದ್ದರೆ ಎಷ್ಟು ಚೆಂದ. ಎಷ್ಟೇ ಒಪ್ಪವಾಗಿ ಮಾಡಿದಾರೂ ಕಾಫಿ ಡೇನಷ್ಟು ರುಚಿಸುವುದಿಲ್ಲ. ಅದಕ್ಕಾಗಿ ಮೂಗುಮುರಿಯುವ ಗೃಣಿಯರೇ ಹೆಚ್ಚು.

ಇದಕ್ಕೆಂದೇ `ಕಾಫಿ ಡೇ ವೇಕಪ್~ ಎಂಬ ಹೊಸ ತಂತ್ರಜ್ಞಾನವನ್ನು ಕಾಫಿ ಡೇ ಪರಿಚಯಿಸಿದೆ. ಕಾಫಿ ತಯಾರಿಸುವ ಹೊಸ ಮಾದರಿಯ ಮೆಷಿನ್ ಇದಾಗಿದ್ದು, ಕಾಫಿ ಪ್ರಿಯರು ಮನೆಯಲ್ಲೇ ತಂದಿಟ್ಟುಕೊಂಡು ಸ್ವಾದಿಷ್ಟ ಕಾಫಿ ತಯಾರಿಸಿ ಸವಿಯಬಹುದು.
ಇದು ಸಿಂಗಲ್ ಸರ್ವ್ ಕಾಫಿ ವ್ಯವಸ್ಥೆಯನ್ನು ಹೊಂದಿದ್ದು, ಮ್ಯಾಕ್ಸ್‌ಎಕ್ಸ್ ತಂತ್ರಜ್ಞಾನವನ್ನು ಒಳಗೊಂಡಿದೆ.

ಈ ಮೆಷಿನ್‌ನಲ್ಲಿ ಪ್ಯಾಕ್‌ನ್ನು ನಿಖರವಾಗಿ ಪುಡಿಮಾಡಿ ಲೇಸರ್ ಸ್ಕ್ಯಾನ್ ಮೂಲಕ ಕಲಾತ್ಮಕವಾಗಿ ಕ್ಯಾಪ್ಸೂಲ್‌ಗಳಿಗೆ ತುಂಬಲಾಗುತ್ತದೆ. ಈ ಕ್ಯಾಪ್ಸೂಲ್‌ಗಳು ಎಸ್ಟೇಟ್ ಬ್ಲೆಂಡ್ ಮತ್ತು ಪ್ಯೂರ್ ಬ್ಲೆಂಡ್ ಎಂಬ ವಿಧಗಳಲ್ಲಿ ದೊರೆಯುತ್ತವೆ ಎಂದು ಕಂಪೆನಿ ತಿಳಿಸಿದೆ.

30 ಸಂಕೆಂಡುಗಳಲ್ಲಿ ಒಂದು ಕಪ್ ಕಾಫಿ ತಯಾರಿಸಬಹುದಾಗಿದ್ದು, ಅಡುಗೆ ಮನೆಯಿಂದ ಕಚೇರಿವರೆಗೆ ಪ್ರತಿ ಸ್ಥಳಕ್ಕೂ ಇದು ಸೂಕ್ತವಾಗಿದೆ.

ಕಾಫಿ ಡೇ ವೇಕಪ್ ಮೆಷಿನ್ ಒಂದಕ್ಕೆ 3999 ರೂಪಾಯಿಯಿಂದ  ಮತ್ತು ಕ್ಯಾಪ್ಸೂಲ್‌ನ ದರ 10 ರೂಪಾಯಿಯಿಂದ ಆರಂಭವಾಗುತ್ತವೆ. ಮಾಹಿತಿಗೆ: devahuti@cafecoffeeday.com ಮೊ: 98199 62524 ಸಂಪರ್ಕಿಸಿ.
 

ಒರಿಫ್ಲೇಮ್‌ಲಿಪ್‌ಸ್ಟಿಕ್
ಫ್ಯಾಷನ್ ರಂಗದಲ್ಲಿ ಪ್ರಖ್ಯಾತವಾಗಿರುವ ಒರಿಫ್ಲೇಮ್  ಐದು ವಿವಿಧ ಬಣ್ಣದ ಟ್ರಿಪಲ್ ಕಲರ್ ಕೋರ್ ಲಿಪ್‌ಸ್ಟಿಕ್‌ಪರಿಚಯಿಸಿದೆ.

ವ್ಯಾಲೆಂಟೈನ್ಸ್ ಡೇ ನೆಪದಲ್ಲಿ ಬಂದ ಈ ಲಿಪ್ಸ್‌ಟಿಕ್ ನಸುಗೆಂಪು, ಕೆಂಪು, ಕಂದು ಬಣ್ಣ, ಕಡುಗೆಂಪು ಹಾಗೂ ಐದು ವಿಶೇಷ ಶೇಡ್‌ಗಳಲ್ಲಿ ಲಭ್ಯವಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT