ADVERTISEMENT

ಕಾರ್ಯಾಗಾರ ತರಬೇತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಉಚಿತ ಕೆಎಎಸ್ ತರಬೇತಿ
ಇತ್ತೀಚೆಗೆ ಕೆಎಎಸ್ ಪರೀಕ್ಷೆಯ  ಪಠ್ಯಕ್ರಮ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ, ಆಸ್ಪೈರ್ ಸ್ಟಡಿ ಸರ್ಕಲ್ ಭಾನುವಾರ ಬೆಳಿಗ್ಗೆ 10 ರಿಂದ ಒಂದು ದಿನದ ಉಚಿತ ತರಬೇತಿ ಶಿಬಿರ ಏರ್ಪಡಿಸಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ದಡ್ಡೆ  ತಿಳಿಸಿದ್ದಾರೆ.

ಮಾಹಿತಿಗೆ: ನಂ. 471, 11ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ಅಂಚೆ ಕಚೇರಿ ಹತ್ತಿರ ( ಪಾರ್ಕ್ ಮುಂಭಾಗ) ವಿಜಯನಗರ. ದೂ: 95380 83216, 96868 30614.

ಮುಖವಾಡಕ್ಕೆ ಬಣ್ಣ
ಆಕ್ಸ್‌ಫರ್ಡ್ ಬುಕ್ ಸ್ಟೋರ್, ಜಾಲಿ ಗೋ ಕಿಡ್ಸ್ ಸಹಯೋಗದಲ್ಲಿ ಶನಿವಾರ 4ರಿಂದ 7 ವರ್ಷದೊಳಗಿನ  ಮಕ್ಕಳಿಗಾಗಿ `ಮಾಸ್ಕ್ ಕಲರಿಂಗ್~ (ಮುಖವಾಡಕ್ಕೆ ಬಣ್ಣ ತುಂಬುವುದು) ಕಾರ್ಯಾಗಾರ ಆಯೋಜಿಸಿದೆ.

ಪ್ರಾಣಿಗಳ ಮುಖ, ಜನಪ್ರಿಯ ಕಾರ್ಟೂನ್‌ಗಳ ಮುಖವಾಡಗಳಿಗೆ ಬಣ್ಣ ಹಚ್ಚುವ ವಿಧಾನ ಕುರಿತು ಹೇಳಿಕೊಡಲಾಗುವುದು. ಬಣ್ಣ ಹಾಗೂ ಮತ್ತಿತರ ಪರಿಕರಗಳನ್ನು ಸ್ಥಳದಲ್ಲೇ ಒದಗಿಸಲಾಗುವುದು.

ಸ್ಥಳ: ಆಕ್ಸ್‌ಫರ್ಡ್ ಬುಕ್‌ಸ್ಟೋರ್, ಕಾಸ್ಮಾಸ್ ಮಾಲ್, ಮೊದಲ ಮಹಡಿ, ಐಟಿಪಿಎಲ್ ರಸ್ತೆ, ಬ್ರೂಕ್‌ಫೀಲ್ಡ್, ಕುಂದನಹಳ್ಳಿ. ನೋಂದಣಿ ಹಾಗೂ ಮಾಹಿತಿಗೆ: 97391 05306, 4115 5223.

ನೊಬೆಲ್ ಕ್ವಿಜ್
ಮೈಸೂರು ರಸ್ತೆ ಆರ್.ವಿ.ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಬೆಳಿಗ್ಗೆ 10ಕ್ಕೆ ಸ್ವೀಡನ್ ಇಂಡಿಯಾ ನೊಬೆಲ್ ಸ್ಮಾರಕ ಅಂತರ್ ಕಾಲೇಜು ಕ್ವಿಜ್ 2011 ನಡೆಯಲಿದೆ.

ನಗರದ ಪ್ರತಿಷ್ಠಿತ ಕಾಲೇಜು ಹಾಗೂ ತಾಂತ್ರಿಕ ಕಾಲೇಜು ತಂಡಗಳು ಇದರಲ್ಲಿ ಭಾಗವಹಿಸಲಿದ್ದು, ಕೌನ್ ಬನೆಗಾ ಕರೋಡ್‌ಪತಿಯ ಸಂಶೋಧನಾ ಮುಖ್ಯಸ್ಥ ಕ್ವಿಜ್ ಮಾಸ್ಟರ್ ಅದಿತ್ಯನಾಥ್ ಮುಬಾಯಿ ನಡೆಸಿಕೊಡಲಿದ್ದಾರೆ. ವಿಜೇತರು ದೆಹಲಿಯ ಐಐಟಿಯಲ್ಲಿ ನಡೆಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ಬೆಂಗಳೂರನ್ನು ಪ್ರತಿನಿಧಿಸಲಿದ್ದಾರೆ.

ಈ ಸಂದರ್ಭದಲ್ಲಿ ಅಂಚೆಚೀಟಿ ಸಂಗ್ರಹಕಾರ ಡಾ.ಸಂಗೊರಾಂ ಅವರು ಸಂಗ್ರಹಿಸಿರುವ 80 ಪುಟಗಳ ಅಂಚೆ ಚೀಟಿಗಳ ಪ್ರದರ್ಶನವೂ ಇದೆ.

ಸುರಾನಾ ಯುವೋತ್ಸವ
ಸೌಥ್‌ಎಂಡ್ ರಸ್ತೆಯಲ್ಲಿರುವ ಸುರಾನಾ ಕಾಲೇಜು ಮಂಗಳವಾರ ಮತ್ತು ಬುಧವಾರ ಪಿಯು ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಅಂತರ್ ಕಾಲೇಜು `ಯುವ ನೋವಾ~ ಉತ್ಸವವನ್ನು ಆಯೋಜಿಸಿದೆ.

ಪಿಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಬ್ಯುಸಿನೆಸ್ ವಿಸರ್ಡ್, ರೆಸ್ಟೊರೆಂಟ್, ಆಸ್ಪತ್ರೆ, ಕೆಫೆ, ರೆಸಾರ್ಟ್, ಮನರಂಜನೆಗೆ ಸಂಬಂಧಿಸಿದಂತೆ ತಯಾರಿಸಿದ ಹೊಸ ಯೋಜನೆಗಳ ಪ್ರಸ್ತುತಿ ಹಾಗೂ ಷೆಫ್ ರೆಕ್ ಸ್ಪರ್ಧೆ ಇದೆ.

ಪದವಿ ವಾಣಿಜ್ಯ ವಿದ್ಯಾರ್ಥಿಗಳು ಉತ್ತಮ ವ್ಯವಸ್ಥಾಪಕ (ಬೆಸ್ಟ್ ಮ್ಯಾನೇಜರ್), ಹಣಕಾಸು, ಮಾನವ ಸಂಪನ್ಮೂಲ, ಇವೆಂಟ್ ಮ್ಯಾನೇಜ್‌ಮೆಂಟ್ ಹಾಗೂ ಬ್ಯುಸಿನೆಸ್ ಕ್ವಿಜ್‌ನಲ್ಲಿ ಪಾಲ್ಗೊಳ್ಳಬಹುದು.

ಪತ್ರಿಕೋದ್ಯಮ ಹಾಗೂ ಮಾನವಿಕ ವಿಭಾಗದಲ್ಲಿ ಹೋಕಸ್ ಪೋಕಸ್, ಹೆಡ್~ನ್ ಕ್ಯಾಪ್ ಇಟ್, ನ್ಯೂಸ್‌ಕ್ಯಾಸ್ಟರ್, ಚರ್ಚಾ ಸ್ಪರ್ಧೆ, ಪ್ರಬಂಧ, ಮಾದರಿ ತಯಾರಿಕೆ ಸ್ಪರ್ಧೆಗಳಿರುತ್ತವೆ.

ವಿಜ್ಞಾನದ ವಿದ್ಯಾರ್ಥಿಗಳಿಗೆ ಸಸ್ಯಶಾಸ್ತ್ರ ಹಾಗೂ ಜೈವಿಕ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸ ಸ್ಪರ್ಧೆ ಇರುತ್ತದೆ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ವೆಬ್ ಡಿಸೈನಿಂಗ್, ಪ್ರಾಜೆಕ್ಟ್ ಪ್ರಸ್ತುತಿ, ಚರ್ಚಾ ಸ್ಪರ್ಧೆ ಇರುತ್ತದೆ.

ಸಾಹಿತ್ಯದ ವಿದ್ಯಾರ್ಥಿಗಳಿಗಾಗಿ ಭಾಷೆ ಮತ್ತು ಸಾಹಿತ್ಯ ಕ್ವಿಜ್, ಗೆಸ್ ವಾಟ್?, ಬೇಂದ್ರೆ ಗೀತೆ ಗಾಯನ, ನಿಬಂಧ ಲೇಖನ, ಸಂಸ್ಕೃತ ವೃಂದ ಗೀತ ಗಾಯನ ಇದೆ.

ಮನಃಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ಥಿಂಕಿಂಗ್ ಕ್ಯಾಪ್, ಫರ್‌ಗೆಟಿಟ್ ನಾಟ್ ಮೊದಲಾದ ಸ್ಪರ್ಧೆಗಳಿವೆ. ಜೊತೆಗೆ ಗ್ರೂಪ್ ಡ್ಯಾನ್ಸ್, ಫ್ಯಾಷನ್ ಶೋ ಸಹ ಇರುತ್ತದೆ.
ಮಾಹಿತಿಗೆ: 97431 20188, 97437 04103, 88614 28056, 95352 19974.

ಉದಯ ಚಿತ್ರ ಪ್ರಶಸ್ತಿ
ವಿವೆಲ್ ಆ್ಯಕ್ಟಿವ್ ಫೇರ್ ಉದಯ ಫಿಲ್ಮ್‌ಫೇರ್ ಅವಾರ್ಡ್ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ನಡೆಯಲಿದೆ.

ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅಧ್ಯಕ್ಷತೆ ವಹಿಸಲಿದ್ದು, ಸಚಿವ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಅತಿಥಿಗಳು. ಇದೇ ಸಂದರ್ಭದಲ್ಲಿ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನಟ ಶ್ರೀನಾಥ್ ಹಾಗೂ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ನೀಡಲಾಗುವುದು.

ಬೆಳ್ಳಿಹಬ್ಬ ವಿಶೇಷ ಪ್ರಶಸ್ತಿ ವಿಜೇತರು: ನಟ ಶಿವರಾಜ್ ಕುಮಾರ್, ರಮೇಶ್, ದೇವರಾಜ್, ನಟಿ ಸುಧಾರಾಣಿ, ತಾರಾ. ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ. ಸಂಜೆ 6.30.

ಆಸ್ತಮಾ ಶಿಬಿರ
ಎಚ್‌ಬಿಆರ್ ಲೇಔಟ್‌ನಲ್ಲಿರುವ ಆಯುರ್ವೇದ ಕುಟೀರಂ ಭಾನುವಾರ ಉಚಿತ ಆಸ್ತಮಾ, ಅಲರ್ಜಿ, ಸಿಓಪಿಡಿ ಶಿಬಿರ ಏರ್ಪಡಿಸಿದೆ. ಡಾ. ಸೀತಾರಾಂ ಪ್ರಸಾದ್ ಅವರು ಚಿಕಿತ್ಸೆ ನೀಡಲಿದ್ದಾರೆ. ಸ್ಥಳ: ನಂ.438, ಬಿಡಿಎ ಕಾಂಪ್ಲೆಕ್ಸ್ ಎದುರು, ಎಚ್‌ಬಿಆರ್ ಲೇಔಟ್. ನೋಂದಣಿಗೆ: 2543 7177, 98450 02455. 

ಮಧುಮೇಹ ಆಹಾರ
ಎಂ.ಎಸ್.ರಾಮಯ್ಯ ಆಸ್ಪತ್ರೆ ಮಧುಮೇಹ ರೋಗಿಗಳಿಗೆ ಶನಿವಾರ `ಮಧುಮೇಹ ಆಹಾರ ಪ್ರಾತ್ಯಕ್ಷಿಕೆ~ ಆಯೋಜಿಸಿದೆ. ಸ್ಥಳ: ಮೆಟ್ರೊಪೊಲೀಸ್ ಲ್ಯಾಬೊರೇಟರಿ ಎದುರು, ಎಂ.ಎಸ್.ರಾಮಯ್ಯ ಆಸ್ಪತ್ರೆ ನೆಲಮಹಡಿ, ಎಂಎಸ್‌ಆರ್ ನಗರ. ಮಾಹಿತಿ ಮತ್ತು ನೋಂದಣಿಗೆ: 2218 3028.

ಇನ್ಫೈನೈಟ್ ಸ್ಪರ್ಧೆ
ಇಂಡಿಯನ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರ್ಸ್ ಅಸೋಸಿಯೇಷನ್ (ಐಇಇಎಂಎ) ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಎಂಜಿನಿಯರ್ ಇನ್ಫೈನೈಟ್ 2012 ಸ್ಪರ್ಧೆ ಆಯೋಜಿಸಿದ್ದು, ಅರ್ಜಿ ಸಲ್ಲಿಸಲು ಸೆ.15 ಕೊನೆ.

ಇದು ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಾಗಿದೆ. ಸ್ಪರ್ಧೆಯಲ್ಲಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಹಾಗೂ ಇತರೆ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿಜೇತರಿಗೆ ರೂ 2 ಲಕ್ಷ ನಗದು ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯ ಮಾಹಿತಿ ಮತ್ತು ನೋಂದಣಿಗೆ: www.ei12.elecrama.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.