ADVERTISEMENT

ಕಿಂಗ್‌ಫಿಷರ್ ಸಂಡೆ ಸಂತೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಕಿಂಗ್‌ಫಿಷರ್ ಪ್ರೀಮಿಯಂ ಆಯೋಜಿಸಿರುವ `ಸಂಡೆ ಸೋಲ್ ಸಂತೆ~ಯ 4ನೇ ಆವೃತ್ತಿ ಭಾನುವಾರ ನಡೆಯಲಿದೆ.

ಇದು ಮಧ್ಯಾಹ್ನದಿಂದ ಮಧ್ಯರಾತ್ರಿ ವರೆಗೆ ನಡೆವ ಮೋಜಿನ ಸಂತೆ. ಜನಪದ, ಸಮಕಾಲೀನತೆ, ಆಧುನಿಕತೆ ಎಲ್ಲ ಹಿತವಾಗಿ ಮಿಳಿತಗೊಂಡು ರೂಪುತಳೆದಿರುವ ಒಂದು ದೊಡ್ಡ ಜಾತ್ರೆಯ ನೆನಪಿಸುತ್ತದೆ. ಇದರಲ್ಲಿ ಕಲೆ, ಕರಕುಶಲ ಮೇಳ, ಸಂಗೀತ, ಫ್ಯಾಷನ್ ಎಲ್ಲವೂ ಇದೆ. ಎಲ್ಲ ವಯೋಮಾನದವರಿಗೂ ಮುದ ನೀಡುವ ಈ ಸಂತೆ ಹಲವು ಸಂಸ್ಕೃತಿಗಳ ಮಿಶ್ರಣ.

ಸಂತೆಗೆ ಬಂದವರೆಲ್ಲ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸಂತಸದಿಂದ ಕಾಲ ಕಳೆಯುವಂತೆ ಮಾಡುವುದೇ ಇದರ ಹಿಂದಿನ ಉದ್ದೇಶ. ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಸಂತೆಯಲ್ಲಿ ರೋಮಾಂಚನ ಉಂಟು ಮಾಡುವಂತಹ ಫ್ಯಾಷನ್ ಶೋ ನಡೆಸಿಕೊಡಲಿದ್ದಾರೆ. ಬೈಸಿಕಲ್ ಡೇಸ್ ಹಾಗೂ ಸೈಕೊಫೋನಿಕ್ ತಂಡವರು ನೀಡುವ ಸಂಗೀತ ಕಾರ್ಯಕ್ರಮ ಮಿಂಚಿನ ಸಂಚಾರ ಉಂಟುಮಾಡಲಿದೆ. ಡಿ.ಜೆ. ಐವಾನ್ ನೀಡುವ ಸ್ಟೇಜ್ ಶೋನೊಂದಿಗೆ ಸಂತೆಗೆ ತೆರೆಬೀಳಲಿದೆ.

ವಯಸ್ಕರಿಗೆ ರೂ.49 ಪ್ರವೇಶ ಶುಲ್ಕ. 12 ವರ್ಷ ಒಳಗಿನ ಮಕ್ಕಳು ಹಾಗೂ ಹಿರಿಯರಿಗೆ ಪ್ರವೇಶ ಉಚಿತ. ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.