ADVERTISEMENT

ಕೂಚಿಪುಡಿ ಕ್ಷಣಗಳು...

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2014, 19:30 IST
Last Updated 28 ಫೆಬ್ರುವರಿ 2014, 19:30 IST
ಲಕ್ಷ್ಮೀ ರಾಜಮಣಿ ಅವರಿಂದ ಕೂಚಿಪುಡಿ ಪ್ರಾತ್ಯಕ್ಷಿಕೆ
ಲಕ್ಷ್ಮೀ ರಾಜಮಣಿ ಅವರಿಂದ ಕೂಚಿಪುಡಿ ಪ್ರಾತ್ಯಕ್ಷಿಕೆ   

ನಾಟ್ಯ ಸರಸ್ವತಿ ಅಕಾಡೆಮಿಯು ಇತ್ತೀಚೆಗೆ ೬ನೇ ಅಖಿಲ ಕರ್ನಾಟಕ ಕೂಚಿಪುಡಿ ನೃತ್ಯೋತ್ಸವವನ್ನು  ಆಯೋಜಿಸಲಾಗಿತ್ತು.
ಉತ್ಸವದಲ್ಲಿ ಬೆಂಗಳೂರಿನ ಲಕ್ಷ್ಮೀ ರಾಜಮಣಿ ಅವರಿಂದ ಉಪನ್ಯಾಸ ಮತ್ತು ಪ್ರದರ್ಶನ ನಡೆಯಿತು.

ಕೂಚಿಪುಡಿಯ ಇತಿಹಾಸ, ಗೊಲ್ಲಕಲಾಪ, ತರಂಗಂ, ಉಷಾದರುವು, ಕನ್ನಡ ಕೃತಿ ಮತ್ತು ಪದಂ ಇವುಗಳ ಕುರಿತ ನಿರೂಪಣೆ ಮತ್ತು ಉಪನ್ಯಾಸ ಜೊತೆಗೆ ಶಿಷ್ಯರಿಂದ ನೃತ್ಯನಿರೂಪಣೆಯೂ ನಡೆಯಿತು. ನಂತರ ಅಲಯನ್ಸ್ ವಿಶ್ವವಿದ್ಯಾಲಯದ ನೃತ್ಯ ವಿಭಾಗದ ಮುಖ್ಯೋಪಾಧ್ಯಾಯ ಡಾ.ವಸಂತ ಕಿರಣ್ ಗುರು, ಡಾ.ವೆಂಪಟಿ ಚೆನ್ನಸತ್ಯಂ ಅವರು ಕೂಚಿಪುಡಿ ನೃತ್ಯ ಸಂಯೋಜನೆ ಕುರಿತು ವಿವರಣೆ ನೀಡಿದರು.

ಜರ್ಮನಿಯಿಂದ ಆಗಮಿಸಿದ ರಾಜಶ್ರೀ ರಮೇಶ್, ನೃತ್ಯದಲ್ಲಿ ಹಸ್ತಾಭಿನಯವನ್ನು, ಗುರು ವೇದಾಂತ ರಾಮು ಅವರ ಅಷ್ಟಪದಿ ನೃತ್ಯಾಭಿನಯವನ್ನು ವಿವರಿಸಿದರು. ಸಣ್ಣ ಸಣ್ಣ ನೃತ್ಯ ರೂಪಕಗಳಾದ ಪದಂ, ಗೂಡಾಪ್ರವೇಶಾ ಧರುವು, ರುದ್ರಾಷ್ಟಕಂ, ಸೀತಾರಾಮಸ್ವಾಮಿ ನೃತ್ಯ ರೂಪಕವನ್ನು ಪ್ರದರ್ಶಿಸಿದರು.

ಕೇರಳದ ನೀಲಮಣ ಸೋದರಿಯರು (ಡಾ.ದ್ರೌಪದಿ ಮತ್ತು ಪದ್ಮಿನಿ) ಭರತನಾಟ್ಯ ಮತ್ತು ಕೂಚಿಪುಡಿಯ ವ್ಯತ್ಯಾಸಗಳನ್ನು ವರ್ಣಿಸಿ, ಪ್ರದರ್ಶಿಸಿದರು.

ನಾಟ್ಯ ಸರಸ್ವತಿಯ ಅಕಾಡೆಮಿಯ  ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನೀಡಲಾಯಿತು. ಕೂಚಿಪುಡಿ ಯಕ್ಷಗಾನವನ್ನು ಗುರುಗಳಾದ ಡಾ. ಶೇಷು ಬಾಬು ಪ್ರಸ್ತುತಪಡಿಸಿದರು.

ಲಕ್ಷ್ಮೀರಾಜಮಣಿ ಹಾಗೂ ಡಾ. ಶೇಷು ಬಾಬು ಅವರಿಗೆ ‘ಕೂಚಿಪುಡಿ ನಾಟ್ಯ ಸರಸ್ವತಿ’ ಬಿರುದಿನ ಜೊತೆಗೆ ₨ ೫೦೦೦ ನಗದು ಮತ್ತು ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ನಾಟ್ಯ ಸರಸ್ವತಿ ಅಕಾಡೆಮಿಯ ಸಂಸ್ಥಾಪಕರಾದ ಡಾ. ಸರಸ್ವತಿ ರಜತೇಶ್ ವೃತ್ತಿಯಲ್ಲಿ ದಂತ ವೈದ್ಯರು. ಇವರು ಯಲಹಂಕ, ಸಂಜಯನಗರ, ಆರ್.ಟಿ.ನಗರ, ಸಹಕಾರನಗರದಲ್ಲೂ ನೃತ್ಯ ಶಾಲೆಯ ಶಾಖೆಗಳನ್ನು ನಡೆಸುತ್ತಿದ್ದಾರೆ. ಈ ನೃತ್ಯೋತ್ಸವವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕೆನರಾ ಬ್ಯಾಂಕ್ ಸಹಾಯದೊಂದಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.