ADVERTISEMENT

ಕೃತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ತಮಿಳುನಾಡು ಮಾಜಿ ಸಚಿವ ಡಾ.ಎಚ್.ವಿ.ಹಂದೆ ಬರೆದಿರುವ `ಅಂಬೇಡ್ಕರ್ ದಿ ಮೇಕಿಂಗ್ ಆಫ್ ದಿ ಇಂಡಿಯನ್ ಕಾನ್‌ಸ್ಟಿಟ್ಯೂಷನ್~ ಕೃತಿ ಸೋಮವಾರ ಬೆಳಿಗ್ಗೆ 10ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಲೋಕಾರ್ಪಣೆಯಾಗಲಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆ ವಹಿಸಲಿದ್ದು,  ಮಾಜಿ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ನ್ಯಾಯಮೂರ್ತಿ ಡಾ.ಮ.ರಾಮಾ ಜೊಯಿಸ್, ನ್ಯಾಯಮೂರ್ತಿ ಎಸ್.ಮೋಹನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪುಸ್ತಕವನ್ನು ಕನ್ನಡಕ್ಕೆ ಮತ್ತು ತಮಿಳಿಗೆ ಭಾಷಾಂತರಿಸಲಾಗಿದ್ದು, ಮದರಾಸು ವಿವಿಯ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ವಿ.ಬಿ.ಅರ್ತಿಕಜೆ ಅವರು ಕನ್ನಡ ಅನುವಾದ ಮಾಡ್ದ್ದಿದಾರೆ. ಇದನ್ನು ಸ್ವಪ್ನ ಬುಕ್ ಹೌಸ್ ಪ್ರಕಟಿಸಿದೆ. ತಮಿಳಿನಲ್ಲಿ ಅಣಕೈ ಶಿವನ್ ಅವರು `ಸಟ್ಟಮೇದೈ ಅಣ್ಣಲ್ ಅಂಬೇಡ್ಕರ್~ ಹೆಸರಿನಲ್ಲಿ ಅನುವಾದಿಸಿದ್ದು, ಚನ್ನೈನ ವಸಂತ ಪದಿಪ್ಪಗಂ ಪ್ರಕಟಿಸಿದೆ. ಇಂಗ್ಲಿಷ್ ಆವೃತ್ತಿಯನ್ನು ಮ್ಯಾಕ್‌ಮಿಲನ್ ಇಂಡಿಯಾ ಸಂಸ್ಥೆ ಪ್ರಕಟಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.